Advertisement

“ಆರೆಂಜ್’ನಲ್ಲಿ ಗಣೇಶ್ ಖೈದಿಯಾಗಿದ್ದು ಯಾಕೆ ಗೊತ್ತಾ?: Watch

02:46 PM Sep 30, 2018 | Team Udayavani |

ಗೋಲ್ಡನ್ ಸ್ಟಾರ್ ಗಣೇಶ್ ಅವರ ಬಹುನಿರೀಕ್ಷಿತ “ಆರೆಂಜ್’ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಕತ್ ಸೌಂಡು ಮಾಡುತ್ತಿದೆ. ಸದ್ಯ ರಿವೀಲ್ ಆಗಿರುವ ಚಿತ್ರದ ಪೋಸ್ಟರ್​ನಲ್ಲಿ ನಟ ಗಣೇಶ್​​ ಜೈಲಿನಲ್ಲಿ ಖೈದಿಯ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

Advertisement

“ಜೂಮ್’ ನಿರ್ದೇಶಕ ಪ್ರಶಾಂತ್ ರಾಜ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಗಣೇಶ್ ಜೊತೆಗೆ ಇದು ಎರಡನೇ ಸಿನಿಮಾ. ಅಲ್ಲದೇ “ಜೂಮ್’ ಚಿತ್ರಕ್ಕೆ ಸಂಗೀತ ನೀಡಿದ್ದ ತಮನ್ ಅವರೇ ಈ ಚಿತ್ರಕ್ಕೆ ಮ್ಯೂಸಿಕ್ ಸಂಯೋಜಿಸಿದ್ದು. ನವೀನ್ ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಇನ್ನು ಚಿತ್ರದಲ್ಲಿ ಗಣೇಶ್ ಎದುರಿಗೆ “ರಾಜಕುಮಾರ’ ಚಿತ್ರದ ಪ್ರಿಯಾ ಆನಂದ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಅಲ್ಲದೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿಸಿರುವ “ಆರೆಂಜ್’ ಚಿತ್ರದ ಟ್ರೈಲರ್ ಸ್ವಲ್ಪ ದಿನಗಳಲ್ಲೇ ಬಿಡುಗಡೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next