Advertisement

44 ವರ್ಷಗಳಷ್ಟು ಹಳೇಯ ಯುದ್ಧ ವಿಮಾನ ಇನ್ನೂ ಬಳಸಬೇಕಾ? IAF ಮುಖ್ಯಸ್ಥ ಧನೋವಾ ಆತಂಕ

09:16 AM Aug 22, 2019 | Nagendra Trasi |

ನವದೆಹಲಿ:ಹಳೆಯ ಕಾರುಗಳನ್ನು ರಸ್ತೆಯಲ್ಲಿ ಯಾರೂ ಓಡಿಸುವುದಿಲ್ಲ ಎಂದಾದ ಮೇಲೆ 40 ವರ್ಷಗಳಷ್ಟು ಹಳೆಯ ಯುದ್ಧ ವಿಮಾನಗಳನ್ನು ನಾವು ಯಾಕೆ ಬಳಸಬೇಕು ಎಂದು ಭಾರತೀಯ ವಾಯುಪಡೆ ಮುಖ್ಯಸ್ಥ ಬಿಎಸ್ ಧನೋವಾ ಗಂಭೀರವಾಗಿ ಪ್ರಶ್ನಿಸಿದ್ದಾರೆ.

Advertisement

1973-74ರಲ್ಲಿ ಭಾರತೀಯ ವಾಯುಪಡೆಗೆ ಮಿಗ್ 21 ಯುದ್ಧ ವಿಮಾನ ಸೇರ್ಪಡೆಯಾಗಿದ್ದು, ಈ ಹಿನ್ನೆಲೆಯಲ್ಲಿ ವಾಯುಪಡೆ ಮುಖ್ಯಸ್ಥ ಧನೋವಾ ಅವರು, 44 ವರ್ಷಗಳಷ್ಟು ಹಳೆಯ ಯುದ್ಧ ವಿಮಾನ ಬಳಕೆ ಎಷ್ಟು ಸರಿ ಎಂಬುದಾಗಿ ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.

ಐದನೇ ಜನರೇಶನ್ ಯುದ್ಧ ವಿಮಾನ ವಾಸ್ತವ ಸಂಗತಿಯಾಗಿದೆ. ಅದೇ ರೀತಿ ಮುಂದಿನ ಜನರೇಶನ್ ಯುದ್ಧ ವಿಮಾನ ಈಗಾಗಲೇ ಅದರ ನೀಲನಕ್ಷೆ ತಯಾರಾಗಿದೆ. ಹೀಗಾಗಿ ನಾವು ಯುದ್ಧದಲ್ಲಿ ಗೆಲ್ಲಲು ಯಾಕೆ ಭಯಪಡಬೇಕು? ಒಂದು ವೇಳೆ ಯುದ್ಧ ಇಲ್ಲ ಎಂದಾದ ಮೇಲೆ ನಾವು ತಡಮಾಡದೆ ದೇಶೀಯವಾಗಿ ಯುದ್ಧ ವಿಮಾನ ಸಾಮಗ್ರಿ ತಯಾರಿಕೆ ತಂತ್ರಜ್ಞಾನದಲ್ಲಿ ತೊಡಗಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಇಲ್ಲವೇ ನಾವು ಪ್ರತಿಯೊಂದು ರಕ್ಷಣಾ ಸಾಮಗ್ರಿಗಳನ್ನು ವಿದೇಶದಿಂದಲೇ ಆಮದು ಮಾಡಿಕೊಳ್ಳಬೇಕಾಗುತ್ತದೆ. ನಾನು ಇಂದು ಮಿಗ್ 21 ಎಂಎಫ್ ಯುದ್ಧ ವಿಮಾನದಲ್ಲಿಯೇ ಸಂಚರಿಸುತ್ತಿದ್ದೇನೆ. ಇದು ಬರೋಬ್ಬರಿ 44 ವರ್ಷಗಳಷ್ಟು ಹಳೇಯ ಯುದ್ಧ ವಿಮಾನ. ನನಗೆ ತಿಳಿದಂತೆ ಹಳೇಯ ಕಾರು ಕೂಡಾ ರಸ್ತೆಯ ಮೇಲೆ ಓಡಾಡಲ್ಲ ಎಂದು ಧನೋವಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next