Advertisement

Politics: ಈಶ್ವರಪ್ಪಗೆ ಎಸ್ಕಾರ್ಟ್‌ ಯಾಕೆ: ಆಯನೂರು ಪ್ರಶ್ನೆ

10:39 PM Oct 14, 2023 | Team Udayavani |

ಶಿವಮೊಗ್ಗ: ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿ ಇಲ್ಲದಿದ್ದರೂ ಮಾಜಿ ಸಚಿವ ಈಶ್ವರಪ್ಪ ಅವರು ಯಾಕೆ ಎಸ್ಕಾರ್ಟ್‌ ಪಡೆಯುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್‌ ಪ್ರಶ್ನಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಅವರಿಗೆ ಜೀವ ಬೆದರಿಕೆ ಇದ್ದರೆ ಇಬ್ಬರು ಗನ್‌ಮ್ಯಾನ್‌ಗಳನ್ನು ಇಟ್ಟುಕೊಳ್ಳಲಿ. ಅವರು ಅಧಿ ಕಾರದಿಂದ ಕೆಳಗಿಳಿದ ಕೂಡಲೇ ದುಬಾೖಯಿಂದ ಜೀವ ಬೆದರಿಕೆ ಬರುತ್ತದೆ ಎಂದು ವ್ಯಂಗ್ಯವಾಡಿದರು.

ಈಶ್ವರಪ್ಪ ಅವರು ಸೈರನ್‌ ಹಾಕಿಕೊಂಡು ಹೋಗುವುದರಿಂದ ಅವರು ಬರುತ್ತಿದ್ದಾರೆ ಎಂಬುದು ತಿಳಿದುಬಿಡುತ್ತೆ. ಅದರ ಬದಲು ಅವರು ಇಬ್ಬರು ಗನ್‌ಮ್ಯಾನ್‌ ಇಟ್ಟುಕೊಂಡು ಹೋದರೆ ಅವರು ಬರುವ ವಿಚಾರ ಯಾರಿಗೂ ತಿಳಿಯದು ಎಂದು ಸಲಹೆ ನೀಡಿದರು.

ಶಿವಮೊಗ್ಗದ ಒಂದು ಸಣ್ಣ ಬಡಾವಣೆಯಲ್ಲಿ ನಡೆದ ಗಲಾಟೆಯನ್ನು ನಿಭಾಯಿಸುವಲ್ಲಿ ಅ ಧಿಕಾರಿಗಳು ಒಳ್ಳೆಯ ಕೆಲಸ ಮಾಡಿದ್ದಾರೆ. ಇದರಿಂದ ನಗರದಲ್ಲಿ ಶಾಂತಿ ನೆಲೆಸಿದೆ. ಆದರೆ ಶಿವಮೊಗ್ಗದಲ್ಲಿ ಪರಿಸ್ಥಿತಿ ಇಷ್ಟು ಬೇಗ ತಣ್ಣಗಾಗಿದ್ದು, ಈಶ್ವರಪ್ಪ ಅವರಿಗೆ ಇಷ್ಟವಾದಂತಿಲ್ಲ. ಅದಕ್ಕಾಗಿಯೇ ಈಗ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಲುವತ್ತು ವರ್ಷದ ರಾಜಕೀಯ ಜೀವನದ ಅನುಭವ ಇರುವ ಅವರು ನಗರದಲ್ಲಿ ಶಾಂತಿ ಕದಡುವ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿರುವುದು ಅವರಿಗೆ ಶೋಭೆಯಲ್ಲ. ರಾಜ್ಯದಲ್ಲಿ ಕಾವೇರಿ ನೀರಾವರಿ ಸಮಸ್ಯೆ ಇದೆ. ನೀರಾವರಿ ಸಚಿವರೂ ಆಗಿದ್ದ ಅವರು ಎಂದೆಂದಿಗೂ ನೀರಾವರಿ ಕುರಿತು ಮಾತನಾಡಿಯೇ ಇಲ್ಲ ಎಂದರು.

ಕಾವೇರಿ ವಿಷಯದಲ್ಲಿ ಈ ಹಿಂದೆ ಪ್ರಧಾನಿಯಾಗಿದ್ದ ವಾಜಪೇಯಿ ಅವರನ್ನು ಮಧ್ಯ ಪ್ರವೇಶಿಸುವಂತೆ ಮಾಡಿ ರಾಜ್ಯದ ಹಿತ ಕಾಪಾಡುವಲ್ಲಿ ಅಂದಿನ ಸಚಿವ ಅನಂತಕುಮಾರ್‌ ಶ್ರಮಿಸಿದ್ದರು. ರಾಜ್ಯದ 26 ಬಿಜೆಪಿ ಸಂಸದರನ್ನು ಇಟ್ಟುಕೊಂಡು ಪ್ರಧಾನಮಂತ್ರಿಗಳನ್ನು ಕರೆತಂದು ಕಾವೇರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ, ರೈತರ ಹಿತ ಕಾಯುವ ಕೆಲಸ ಮಾಡದ ಈಶ್ವರಪ್ಪ ಬಾಯಿಗೆ ಬಂದಂತೆ ಮಾತಾಡುವುದನ್ನು ನಿಲ್ಲಿಸಿ ರಾಜ್ಯದ ಹಿತದ ಜವಾಬ್ದಾರಿಯನ್ನು ನಿರ್ವಹಿಸಲಿ ಎಂದರು.

Advertisement

ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಎಸ್‌. ಸುಂದರೇಶ್‌, ಕೆಪಿಸಿಸಿ ಸದಸ್ಯ ವೈ.ಎಚ್‌. ನಾಗರಾಜ್‌, ಮಾಧ್ಯಮ ಸಂಯೋಜಕ ಚಂದ್ರಭೂಪಾಲ್‌, ಮಹಾನಗರ ಪಾಲಿಕೆ ಸದಸ್ಯ  ಧೀರರಾಜ್‌ ಹೊನ್ನವಿಲೆ, ಮುಖಂಡರಾದ, ಐಡಿಯಲ್‌ ಗೋಪಿ, ಸಯ್ಯದ್‌ ವಾಹಿದ್‌ ಅಡ್ಡು, ನಗರಸಭಾ ಮಾಜಿ ಸದಸ್ಯ ಮುಕ್ತಿಯಾರ್‌ ಆಹಮ್ಮದ್‌, ಶಿ.ಜು.ಪಾಶ, ಹಿರಣ್ಣಯ್ಯ ಮತ್ತಿತರರು ಉಪಸ್ಥಿತರಿದ್ದರು.

30ಕ್ಕೂ ಅಧಿಕ ಮಂದಿ ಕಾಂಗ್ರೆಸ್‌ಗೆ
ಬಿಜೆಪಿಯ ಮಾಜಿ ಮುಖ್ಯಮಂತ್ರಿಯೊಬ್ಬರು ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಬಿಜೆಪಿ ಮತ್ತು ಜೆಡಿಎಸ್‌ ಮುಖಂಡರು ಕಾಂಗ್ರೆಸ್‌ ಪಕ್ಷ ಸೇರಲಿದ್ದಾರೆ. ಈಗಾಗಲೇ ಕಾಂಗ್ರೆಸ್‌ ಮುಖಂಡರ ಮನೆಗಳಿಗೂ ತೆರಳಿದ್ದಾರೆ. ಸದ್ಯದಲ್ಲಿಯೇ ಈ ವಿಷಯ ಬಹಿರಂಗವಾಗಲಿದೆ. ಆದರೆ ಇದು ಆಪರೇಷನ್‌ ಹಸ್ತ’ ಅಲ್ಲ ಎಂದು ಆಯನೂರು ಮಂಜುನಾಥ್‌ ಹೇಳಿದರು. ರಾಜ್ಯದಲ್ಲಿ ಬಿಜೆಪಿ ಆಂತರಿಕ ಸಮಸ್ಯೆಯಿಂದ ಬಳಲುತ್ತಿದೆ. ಸಾಂವಿಧಾನಿಕ ಸ್ಥಾನವಾದ ಮೇಲ್ಮನೆ ಮತ್ತು ಕೆಳಮನೆಗಳಲ್ಲಿ ಇದುವರೆಗೂ ವಿಪಕ್ಷವಾದ ಬಿಜೆಪಿಗೆ ತನ್ನ ವಿಪಕ್ಷ ನಾಯಕರನ್ನು ಆಯ್ಕೆ ಮಾಡಿಕೊಳ್ಳುವ ಯೋಗ್ಯತೆ ಇಲ್ಲದಂತಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next