Advertisement
ಸೋಮವಾರ ಪಟ್ಟಣದ ಗುರುಭವನದಲ್ಲಿ ಮನೆ ಹಾನಿ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಬಿದ್ದ ಭಾರೀ ಮಳೆಗೆ ಮೊದಲ ಬಾರಿ 288, ಎರಡನೇ ಬಾರಿ 284 ಹಾಗೂ ಮೂರನೇ ಬಾರಿ 300 ಸೇರಿದಂತೆ ಒಟ್ಟು 872 ಹಾಗೂ ನ್ಯಾಮತಿ ತಾಲೂಕಿನಲ್ಲಿ 1111 ಸೇರಿದಂತೆ ಅವಳಿ ತಾಲೂಕಿನಲ್ಲಿ ಒಟ್ಟು 2083 ಮನೆಗಳಿಗೆ ಪರಿಹಾರದ ಮಂಜೂರಾತಿ ಪತ್ರ ನೀಡಿದ್ದೇವೆ. ಆದರೆ ಇನ್ನೂ ಅವಳಿ ತಾಲೂಕಿನಿಂದ ಮನೆ ಕಳೆದುಕೊಂಡ 500 ಸಂತ್ರಸ್ತರಿಗೆ ಮಂಜೂರಾತಿ ಪತ್ರ ನೀಡಬೇಕಿದೆ.
ನೀಡುವುದಕ್ಕೆ ಅಡ್ಡಗಾಲು ಹಾಕಿದ್ದಾರೆ ಎಂದು ದೂರಿದರು.
Related Articles
Advertisement
ಕೋವಿಡ್ ಹಾಗೂ ಇನ್ನಿತರ ಸಂಕಷ್ಟದಲ್ಲಿ ತಾಲೂಕಿನ ಜನತೆಗೆ ಬೇಕಾದ ಸಕಲ ಸೌಲಭ್ಯಗಳನ್ನು ವಿತರಿಸಿ ಅವರ ಜೊತೆ ನಾನು ಹಾಗೂ ನಮ್ಮ ಅಧಿಕಾರಿಗಳಿದ್ದೆವು. ಆ ಸಮಯದಲ್ಲಿ ಮನೆಯಲ್ಲಿದ್ದ ಮಾಜಿ ಶಾಸಕರು, ವಿನಾಕಾರಣ ತಾಲೂಕು ಮಟ್ಟದ ಅಧಿಕಾರಿಗಳಿಗೆ ಹಾಗೂ ನನ್ನ ಹಾಗೂ ನನ್ನತಾಯಿಯ ಬಗ್ಗೆ ಅವಹೇಳನ ಹೇಳಿಕೆ ನೀಡಿ ಇಡೀ ಸ್ತ್ರೀಕುಲಕ್ಕೆ ಅವಮಾನ ಮಾಡಿದ್ದಾರೆ ಎಂದರು. ತಾಪಂ ಇಒ ರಾಮ ಬೋವಿ ಮಾತನಾಡಿ, ಇಡೀ ರಾಜ್ಯದಲ್ಲಿ ಮಳೆಯಿಂದ ಬಿದ್ದ ಎಲ್ಲಾ ಮನೆಗಳಿಗೂ ಹೋಗಿ ಪರಿಶೀಲನೆ ಮಾಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿರುವ ಶಾಸಕರಿದ್ದರೆ ಅವರು ನಮ್ಮ ಶಾಸಕರು ಮಾತ್ರ ಎಂದು ಹೇಳಿದರು. ತಹಶೀಲ್ದಾರ್ ರಶ್ಮಿ ಮಾತನಾಡಿ, ಮಳೆಯಿಂದ ಬಿದ್ದ ಮನೆಗಳಿಗೆ ಶಾಸಕರು ಸರ್ಕಾರದ ಮಟ್ಟದಲ್ಲಿ ಕೊನೆ ದಿನಾಂಕವನ್ನು ವಿಸ್ತರಣೆ ಮಾಡಿಸಿ ನಿಮಗೆಲ್ಲ ಮಂಜೂರಾತಿ ಪತ್ರ ಕೊಡಿಸಿದ್ದಾರೆ. ಪರಿಹಾರದ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸದೆ ಮನೆ ಕಟ್ಟಿಕೊಳ್ಳಿ ಎಂದು ತಿಳಿಸಿದರು. ನ್ಯಾಮತಿ ತಹಶೀಲ್ದಾರ್ ರೇಣುಕಾ ಮಾತನಾಡಿದರು. ಕೆಎಸ್‌ಡಿಎಲ್ ನಿರ್ದೇಶಕ ಶಿವು ಹುಡೇದ್, ಉಪ ತಹಶೀಲ್ದಾರ್ ಮಂಜುನಾಥ್ ಇಂಗಳಗೊಂದಿ, ರಾಜಸ್ವ ನಿರೀಕ್ಷಕರಾದ ಗುರುಪ್ರಸಾದ್, ದಿನೇಶ್, ಸಂತೋಷ್, ಸು ಧೀರ್, ಬಸವರಾಜ್ ಇತರರು ಇದ್ದರು.