Advertisement

ಬಿಜೆಪಿ ಹೇಳಿದ್ದನ್ನೇ ನೀವು ಯಾಕೆ ಹೇಳುತ್ತಿದ್ದೀರಿ: ಪತ್ರಕರ್ತರ ವಿರುದ್ಧ ರಾಹುಲ್ ವಾಗ್ದಾಳಿ

09:01 PM Apr 04, 2023 | Team Udayavani |

ನವದೆಹಲಿ: ಕಾಂಗ್ರೆಸ್ ಪಕ್ಷವು ನ್ಯಾಯಾಂಗದ ಮೇಲೆ ಒತ್ತಡ ಹೇರುತ್ತಿದೆ ಎಂಬ ಭಾರತೀಯ ಜನತಾ ಪಕ್ಷದ ಆರೋಪಗಳ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ ಮತ್ತು ಅದಾನಿ ವಿಚಾರದಲ್ಲಿ ಕೇಂದ್ರದ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.

Advertisement

ಕರ್ನಾಟಕ ವಿಧಾನಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಮುಂದಿನ ಪಟ್ಟಿಯ ಪೂರ್ವಭಾವಿ ಸಭೆಗೆ ಆಗಮಿಸಿದ ರಾಹುಲ್ ಗಾಂಧಿಗೆ ಪತ್ರಕರ್ತರು ಕಾಂಗ್ರೆಸ್‌ನ ನಾಯಕರು ನ್ಯಾಯಾಂಗದ ಮೇಲೆ ಒತ್ತಡ ಹಾಕಿರುವ ಕುರಿತು ಬಿಜೆಪಿ ಮಾಡಿರುವ ಆರೋಪಗಳ ಬಗ್ಗೆ ಪ್ರಶ್ನೆ ಕೇಳಿದ್ದು ಇದಕ್ಕೆ ಗರಂ ಆದ ರಾಹುಲ್ ‘ಯಾವಾಗಲೂ ಬಿಜೆಪಿ ಹೇಳಿದ್ದನ್ನೇ ಏಕೆ ಹೇಳುತ್ತೀರಿ… ಎಂದು ಮಾಧ್ಯಮದ ವಿರುದ್ಧ ಕಿಡಿಕಾರಿದ್ದಾರೆ.

ಅಷ್ಟು ಮಾತ್ರವಲ್ಲದೆ ಅದಾನಿ ವಿಚಾರವಾಗಿ ಹೇಳುವುದಾದರೆ ಅದಾನಿ ಶೆಲ್ ಕಂಪನಿಗಳಲ್ಲಿರುವ 20,000 ಕೋಟಿ ಯಾರಿಗೆ ಸೇರಿದ್ದು, ಇದು ಬೇನಾಮಿಯೇ, ಇದು ಯಾರದ್ದು? ಎಂದು ರಾಹುಲ್ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಬಟ್ಟೆ ಒಣಗಿಸುವ ವೇಳೆ ದುರ್ಘಟನೆ: ವಿದ್ಯುತ್ ಸ್ಪರ್ಶಗೊಂಡು ಮಹಿಳೆ ಸ್ಥಳದಲ್ಲೇ ಸಾವು

Advertisement

Udayavani is now on Telegram. Click here to join our channel and stay updated with the latest news.

Next