Advertisement

ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಯಾಕೆ ಎಲೆಕ್ಷನ್ ಟಿಕೆಟ್ ಸಿಗುತ್ತದೆ? ಒಮ್ಮೆ ಯೋಚಿಸಿ: ರಮ್ಯಾ

11:41 AM Sep 06, 2022 | Team Udayavani |

ಬೆಂಗಳೂರು: ರವಿವಾರ ರಾತ್ರಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿತ್ತು. ನಗರದೆಲ್ಲೆಡೆ ಮಳೆ ನೀರು ನಿಂತು ದ್ವೀಪದಂತಹ ಪರಿಸ್ಥಿತಿ ಎದುರಾಗಿತ್ತು. ಪ್ರಮುಖ ರಸ್ತೆಗಳಲ್ಲಿ ನೀರು ಹರಿದು ನದಿಯಂತಾಗಿದೆ. ಐಟಿ ಹಬ್ ಬೆಂಗಳೂರಿನಲ್ಲಿ ಕೆಲಸಕ್ಕೆ ಹೋಗಲಾಗದೆ ಉದ್ಯೋಗಿಗಳು ಪರದಾಡಿದರು.

Advertisement

ಬೆಂಗಳೂರಿನ ಈ ಅವಸ್ಥೆಯ ಬಗ್ಗೆ ಸಾಕಷ್ಟು ಮಂದಿ ಸರ್ಕಾರಕ್ಕೆ ದೂರಿದ್ದಾರೆ. ಉದ್ಯಮಿಗಳು ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬೆಂಗಳೂರು ಮಳೆಯ ಕುರಿತಾಗಿ ಸಾಕಷ್ಟು ಚರ್ಚೆ ನಡೆಸಲಾಗುತ್ತದೆ.

ಸದ್ಯ ಈ ಬಗ್ಗೆ ಮಾತನಾಡಿರುವ ನಟಿ, ಮಾಜಿ ಸಂಸದೆ ರಮ್ಯಾ, ಬೆಂಗಳೂರಿನ ಶಾಸಕರ ರಿಯಲ್ ಎಸ್ಟೇಟ್ ದಂಧೆಯ ಕುರಿತಂತೆ ದನಿ ಎತ್ತಿದ್ದಾರೆ.

ಕರ್ನಾಟಕದ ಎಷ್ಟು ಶಾಸಕರು ಮತ್ತು ಸಂಸದರು ರಿಯಲ್ ಎಸ್ಟೇಟ್ ವ್ಯವಹಾರ ಹೊಂದಿದ್ದಾರೆ ಎಂದು ನಿಮಗೆ ತಿಳಿದಿದೆಯೇ? ಬೆಂಗಳೂರಿನ 28 ಶಾಸಕರುಗಳಲ್ಲಿ 26 ಮಂದಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿದ್ದಾರೆಂದು ಯಾರೋ ಹೇಳಿದರು. ಇದು ದಿಗ್ಭ್ರಮೆಗೊಳಿಸುವ ಸಂಖ್ಯೆ ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:ಒಂದೇ ದಿನ 64 ವಿಮಾನಗಳನ್ನು ನಿರ್ವಹಣೆ ಮಾಡಿದ ಮಂಗಳೂರು ವಿಮಾನ ನಿಲ್ದಾಣ

Advertisement

ಚುನಾವಣೆಗೆ ಸ್ಪರ್ಧೆ ಮಾಡಲು ಯಾಕೆ ಕೇವಲ ಹಣ ಇರುವವರಿಗೆ ( ಹೆಚ್ಚಾಗಿ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ) ನೀಡಲಾಗುತ್ತಿದೆ? ಯೋಚನೆ ಮಾಡಬೇಕು. ವಿಧಾನಸಭೆ ಚುನಾವಣೆಯಲ್ಲಿ ಖರ್ಚು ಮಾಡಲು ಚುನಾವಣಾ ಆಯೋಗ ನಿಗದಿ ಪಡಿಸಿದ ಮೊತ್ತ 40 ಲಕ್ಷ ರೂ. ಆದರೆ ಚುನಾವಣೆಗಳ್ಯಾಕೆ ಕೋಟಿಗಳಲ್ಲಿ ನಡೆಯುತ್ತಿದೆ ಎಂದು ರಮ್ಯಾ ಪ್ರಶ್ನಿಸಿದ್ದಾರೆ.

ಅಲ್ಲದೆ ಈ 26 ರಿಯಲ್ ಎಸ್ಟೇಟ್ ವ್ಯವಹಾರ ಹೊಂದಿದ ಶಾಸಕರು ‘ಜನರಿಂದ ಆಯ್ಕೆ’ಯಾದವರು. ಹೀಗಾಗಿ ದಯವಿಟ್ಟು ವೋಟ್ ಮಾಡಿ, ಸ್ವಲ್ಪ ಆಲೋಚಿಸಿ ವೋಟ್ ಮಾಡಿ. ನಗರದಲ್ಲಿರುವ ಹೆಚ್ಚಿನವರು ಮತದಾನವನ್ನೇ ಮಾಡುವುದಿಲ್ಲ. ಆದರೆ ಇಂತಹ ಪರಿಸ್ಥಿತಿ (ನೆರೆ) ಬಂದಾಗ ನಾವು ಕೋಪಗೊಳ್ಳುತ್ತೇವೆ. ನಮ್ಮ ಈ ಪರಿಸ್ಥಿತಿಗೆ ನಮ್ಮನ್ನು ನಾವೇ ದೂಷಿಸಬೇಕಿದೆ ಎಂದು ರಮ್ಯಾ ಟ್ವಿಟ್ಟರ್ ವೇದಿಕೆ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next