Advertisement

“ತೆನೆ’ಸಹಾಯ ಪಡೆದು “ಕಮಲ’ಪಕ್ಷ ಸೇರಿದ “ಹಳ್ಳಿಹಕ್ಕಿ’ಮಾಡಿದ್ದೇನು?

10:06 PM Jul 23, 2019 | Team Udayavani |

ಬೆಂಗಳೂರು: ಕಾಂಗ್ರೆಸ್‌ನಲ್ಲಿ ದಶಕಗಳ ಕಾಲ ರಾಜಕಾರಣ ಮಾಡಿ ಸಿದ್ದರಾಮಯ್ಯ ಅವರೊಂದಿಗೆ ಮುನಿಸಿಕೊಂಡು ಮಾತೃಪಕ್ಷ ಬಿಟ್ಟು ಜೆಡಿಎಸ್‌ ಸೇರಿದ “ಹಳ್ಳಿಹಕ್ಕಿ’ ಖ್ಯಾತಿಯ ಎಚ್‌.ವಿಶ್ವನಾಥ್‌ ಸಹ ಸಮ್ಮಿಶ್ರ ಸರ್ಕಾರ ಪತನದ ರೂವಾರಿಗಳಲ್ಲಿ ಒಬ್ಬರು.

Advertisement

ಜೆಡಿಎಸ್‌ಗೆ ಸೇರ್ಪಡೆಯಾದ ನಂತರ ಹುಣಸೂರು ಕ್ಷೇತ್ರದಿಂದ ಟಿಕೆಟ್‌ ಕೊಟ್ಟು ಶಾಸಕರನ್ನಾಗಿ ಮಾಡಿ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿಯೂ ಅವರನ್ನು ಮಾಡಲಾಯಿತು. ಆದರೆ, ಪಕ್ಷ ಹಾಗೂ ನಾಯಕರು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಬೇಸರಗೊಂಡು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ತ್ಯಜಿಸಿದರು. ಅಚ್ಚರಿಯ ಬೆಳವಣಿಗೆಯಲ್ಲಿ ಅತೃಪ್ತ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರನ್ನು ಸೇರಿಕೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಬಿಜೆಪಿ ವಿರೋಧಿ ರಾಜಕಾರಣ ಮಾಡಿಕೊಂಡ ಬಂದ ಅವರು, ಈಗ ಬಿಜೆಪಿ ಸರ್ಕಾರ ರಚನೆಯಾಗಲು ನೆರವು ನೀಡಿದಂತಾಗಿದೆ. ಬಿಜೆಪಿಯು ಎಚ್‌.ವಿಶ್ವನಾಥ್‌ ಅವರಂತಹ ರಾಜಕಾರಣಿಗೆ ಗಾಳ ಹಾಕಿದ್ದು ವಿಶೇಷವೇ. ಏಕೆಂದರೆ ಅವರು ಬಿಜೆಪಿ ವಿರುದ್ಧ ಟೀಕಾಸ್ತ್ರ ಬಿಟ್ಟಿದ್ದವರೇ. ಸಿದ್ದರಾಮಯ್ಯ ಅವರ ವಿರುದ್ಧ ಜೆಡಿಎಸ್‌ನಲ್ಲಿ ಹೋರಾಟ ಮಾಡಬೇಕು ಎಂದು ಬಂದು ಜೆಡಿಎಸ್‌ ರಾಜ್ಯಾಧ್ಯಕ್ಷರಾದರೂ ಸಮನ್ವಯ ಸಮಿತಿಗೆ ಸೇರ್ಪಡೆಯಾಗದ ನೋವು ಅವರನ್ನು ಸಾಕಷ್ಟು ಕಾಡಿತ್ತು.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಆ ವಿಚಾರದಲ್ಲಿ ಅಸಹಾಯಕರಾಗಿದ್ದು, ಅವರಿಗೆ ಬೇಸರವನ್ನೇ ತರಿಸಿತ್ತು. ಜತೆಗೆ, ಪಕ್ಷದ ರಾಜ್ಯಾಧ್ಯಕ್ಷನಾದರೂ ತಮಗೆ ಅಧಿಕಾರ ಇಲ್ಲ, ಸಂಪನ್ಮೂಲ ಒದಗಿಸುತ್ತಿಲ್ಲ, ಪಕ್ಷಕ್ಕೂ, ಸರ್ಕಾರಕ್ಕೂ ಸಮನ್ವಯತೆ ಇಲ್ಲ ಎಂದು ಆಗ್ಗಾಗ್ಗೆ ಅತೃಪ್ತಿ ಹೊರಹಾಕುತ್ತಿದ್ದರು. ಈ ಎಲ್ಲವೂ ಅತೃಪ್ತರ ಜತೆಗೂಡಲು ಕಾರಣವಾಯಿತು. ಇದರಿಂದ ರಾಜಕೀಯ ಜೀವನದಲ್ಲಿ ಕೊನೆಘಟ್ಟದಲ್ಲಿ ಮತ್ತೂಂದು ಪಕ್ಷಾಂತರದ ಅಂಚಿನಲ್ಲಿ ಅವರು ಬಂದು ನಿಲ್ಲುವಂತಾಗಿದೆ.

ವಿಶ್ವನಾಥ್‌ “ಸಮಯಸಾಧಕ’ ತನ: ಕಾಂಗ್ರೆಸ್‌ನಲ್ಲಿ ಮೂಲೆಗುಂಪಾಗಿದ್ದಾಗ ಸ್ವತಃ ದೇವೇಗೌಡರು ವಿಶ್ವನಾಥ್‌ಗೆ ತಮ್ಮ ಪಕ್ಷದಿಂದ ಶಾಸಕನಾಗಲು ಅವಕಾಶ ಕಲ್ಪಿಸಿದರು. ದೇವೇಗೌಡ ರನ್ನು ಸದಾ ಹೀಗಳೆಯುತ್ತಲೇ ರಾಜಕಾರಣ ಮಾಡಿಕೊಂಡಿದ್ದ ವಿಶ್ವನಾಥ್‌, ತಾವು ಒಂಟಿಯಾಗಿದ್ದಾಗ ಸಹಕರಿಸಿದ ಮತ್ತು ಜೆಡಿಎಸ್‌ ರಾಜ್ಯಾಧ್ಯಕ್ಷ ಹುದ್ದೆಯನ್ನೂ ಕಲ್ಪಿಸಿದ ದೇವೇಗೌಡರನ್ನೂ ಮರೆತು, “ಆಪರೇಷನ್‌’ಗೆ ಒಳಗಾಗಿ ಒಂದು ಮಟ್ಟಿಗೆ “ಸಮಯಸಾಧಕ’ತನ ರೂಢಿಸಿಕೊಂಡರು ಎಂಬ ಆರೋಪ ಅವರ ಮೇಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next