Advertisement
ನನ್ನ ಇಡೀ ದಿನದ ಒಂದು ಹವ್ಯಾಸ ಟಿವಿ ನೋಡೋದು. ಹಾಗೆ ಆ ಪರದೆ ನೋಡಿದಾಗಲೆಲ್ಲ ಸಿನಿಮಾ ಹೀರೋ ಕಣ್ಣೆದುರು ಕುಣಿಯುತ್ತಿರುತ್ತಾನೆ. ಅಂಗಿ ಬಿಚ್ಚಿ ನಿಂತ ಹೀರೋನನ್ನು ತೆರೆಯ ಮೇಲೆ ನೋಡುವಾಗ “ಅಯ್ಯೊ ಪಾಪ’ ಅನಿಸುತ್ತದೆ. ಇವನಿಗೆ ಬಟ್ಟೆಯೇ ಇಲ್ವೆ ಅನ್ನುವ ವಿಚಾರಕ್ಕಲ್ಲ, ಈವಯ್ಯ ಹೊಟ್ಟೆ ಮೇಲೆ ಆರೇಳು ಪ್ಯಾಕ್ ತೋರಿಸೋಕೆ ಅದೆಷ್ಟು ದಿನಗಳನ್ನು, ಸುಖಗಳನ್ನು ಬಲಿಕೊಟ್ಟನೊ ಅಂತ ಮನಸ್ಸು ಲೆಕ್ಕ ಹಾಕುತ್ತೆ. ಇಷ್ಟವಿಲ್ಲದಿದ್ದರೂ ಅದೆಷ್ಟು ಊಟ ಮುಕ್ಕಿದನೊ, ಇಷ್ಟ ಇರೋದನ್ನು ತಿನ್ನದೇ ಎಷ್ಟು ಕೊರಗಿದನೋ, ಜಿಮ್ ಮೇಷ್ಟ್ರು ಹತ್ರ ಇನ್ನೂ ಇನ್ನೂ ಬೇಕು ಇನ್ನೂ… ಅನ್ನುವ ಮಾತುಗಳನ್ನು ಅದೆಷ್ಟು ಬಾರಿ ಕೇಳಿಸಿಕೊಂಡು ರೋಸಿ ಹೋಗಿದ್ದನೊ, ಕಂತೆ ಕಂತೆ ಹಣವನ್ನು ನೀರಿನಂತೆ ಚೆಲ್ಲಿದ್ದನೊ, ಜಿಮ್ ರೂಮಿನಲ್ಲಿ ಅದೇ ಬೆವರಿನೊಂದಿಗೆ ಸೆಣಸಿ ಸೆಣಸಿ ಮೈಯೂದಿಸಿಕೊಂಡಿ¨ªಾನೊ! ನೋಡಿದರೆ, ಪಾಪ ಅನಿಸುತ್ತದೆ. ಹೀರೊ ಬಾಡಿ ತೋರಿಸಿದ ಮಾತ್ರಕ್ಕೆ ಸಿನಿಮಾಗಳು ಹಿಟ್ ಆಗುವುದಿಲ್ಲ. ಅವಾರ್ಡ್ ಕೂಡ ಬಂದಿಲ್ಲ.
“ಸಿಕ್ಸ್‌ಪ್ಯಾಕ್ ಇದ್ದರೇನೇ ಹುಡುಗಿಯರು ಮತ್ತೆ ಮತ್ತೆ ಮುಂಗುರುಳು ಸರಿಸಿ ನಮ್ಮತ್ತ ನೋಡೋದೋ’ ಅಂದಿದ್ದ ಗೆಳೆಯ. ನಾನು ಅವತ್ತೂಂದಿನ ಜಿಮ್‌ಗೆ ಹೋಗಿ, “ಇವುಗಳಲ್ಲಿ ಯಾವ ಮಶೀನ್ ಹುಡುಗಿಯರನ್ನು ಇಂಪ್ರಸ್ ಮಾಡುವಂತೆ ಮಾಡುತ್ತೆ?’ ಅಂತ ಕೇಳಿದ್ದೆ. ಜಿಮ್‌ನವನು ನಗುತ್ತಾ ಹೇಳಿದ, “ಈ ಯಂತ್ರಗಳಿಗೆ ಇಂಪ್ರಸ್ ಮಾಡುವಂಥ ಶಕ್ತಿಯಿಲ್ಲ. ಹೊರಗೊಂದು ಮಶೀನ್ ಇದೆ. ಅದರಿಂದ ಸಾಧ್ಯ’. ನಾನು ಹೌದೆಂದು ನಂಬಿ ಹೊರಗೆ ಬಂದೆ. ಅಲ್ಲಿ ಕಂಡಿದ್ದು, ಎಟಿಎಂ ಮಶೀನ್! ದೇಹದಲ್ಲಿ ಊದಿದ ಮಾಂಸಖಂಡಗಳಿಗೆ, ಕೈಯಲ್ಲಿನ ಹಣಕ್ಕೆ ಎಲ್ಲರನ್ನೂ ಸೆಳೆಯುವ ತಾಕತ್ತು ಇದ್ರೆ ಜಗತ್ತು ಹೀಗೆ ಇರುತ್ತಿತ್ತಾ?!? ನಮ್ಮ ದೇಹಕ್ಕೆ ನಾವೇ ಸಾಕಷ್ಟು ಹಿಂಸೆ ಕೊಟ್ಟೂ ಕೊಟ್ಟು, ಕಾಡಿಸಿ, ಎಳೆದಾಡಿ, ಜಜ್ಜಿ, ಫಿಟ್ ಮಾಡಿಕೊಳ್ಳುವಾಗ ಬದುಕಿನ ಎಷ್ಟೊಂದು ಸುಖಗಳಿಂದ ವಂಚಿತರಾಗುತ್ತೇವೆ?
Related Articles
Advertisement
ಇದೆಂಥ ಲೋಕವಯ್ಯ!?ನನಗೆ ರೇಜಿಗೆ ಹುಟ್ಟಿಸುವುದು ಜಿಮ್ ರೂಮಿನ ಒಳನೋಟ. ಅಲ್ಲಿನ ಭಾವಹೀನ ಮಶೀನ್‌ಗಳು ನನ್ನ ದೇಹವನ್ನು ಜಜ್ಜಿ ಹಾಕಲೊ ಬಾಯಿ ತೆರೆದು ಕೂತಂತೆ ಕಾಣಿಸುತ್ತವೆ. ಎಳೆಯ ಸೂರ್ಯನ, ತಣ್ಣನೆ ಗಾಳಿ, ಇಬ್ಬನಿ ನೆಲದ ಬದಲಿಗೆ ಕಣ್ಣಿಗೆ ಚುಚ್ಚುವಂಥ ಲೈಟುಗಳು, ಬುಸ ಬುಸ ಉಸಿರಿನಿಂದ ಆಚೆ ಬಂದು ಅಲ್ಲೇ ಸುತ್ತಿ ಸುತ್ತಿ ಬಡಿಯುವ ಅದೇ ಗಾಳಿ, ಮನಸ್ಸಿಗೆ ಮುಟ್ಟದೆ ಎದೆಗೆ ಬಡಿಯುವ ಅಬ್ಬರದ ಮ್ಯೂಸಿಕ್, ಸ್ಕೂಲ್ ಮೇಷ್ಟ್ರಿಗಿಂತ ಕಠೊರವಾಗಿ ಕಾಡುವ ಜಿಮ್ ಮೇಷ್ಟ್ರು, ನಮ್ಮ ನೋವನ್ನು, ಬೆವರನ್ನು ಎಂಜಾಯ್ ಮಾಡುವ ಅವನ ಮನಃಸ್ಥಿತಿ ತಿರಸ್ಕಾರವನ್ನುಂಟು ಮಾಡುತ್ತವೆ. ಬೆಳಗ್ಗೆಯ ಚೆಲುವು ಸಂಜೆಯ ಕಾಡುವ ಒಲವು, ಇಲ್ಲಿ ಅತೃಪ್ತ ದೇಹಗಳ ಬೆವರಿನ ವಾಸನೆಯ ಮಧ್ಯೆ ಕಳೆದು ಹೋಗುತ್ತದೆ. ಧಡೂತಿಯ ಎಂಟು ಅಡಿಯವನಿಗೂ ಐದಡಿಯ ನಲವತ್ತು ಕೆಜಿಯವನಾದ ನನಗೂ ಒಂದೇ ತರಹದ ಮಶೀನ್‌ಗಳು ಇರುವುದು ನನಗೆ ಆಶ್ಚರ್ಯ ಮತ್ತು ಭಯ. ಗೋಡೆಗೆ ಮೆತ್ತಿರುವ ದೇಹಪಟುಗಳ ಚಿತ್ರಗಳು ಕಲ್ಲಿನ ಮೂಟೆಗಳು ಅನಿಸಿ ಆ ಕಡೆಗೊಂದು ಭಾವನಾತ್ಮಕ ನೋಟ ಬೀರಲು ಸಾಧ್ಯವಾಗುವುದೇ ಇಲ್ಲ. ಜಿಮ್‌ಗೆ ಹೋಗದೇ ಫಿಟ್ ಆಗಬಹುದು ಗೊತ್ತಾ!?
ನಮ್ಮಪ್ಪ ಈಗಲೂ ಈಗಿನವರ ಆ ಪ್ಯಾಕ್ ಬಾಡಿಗಿಂತ ಮುಂದೆ. ಅದೇ ಯವ್ವನದ ಲವಲವಿಕೆ, ಅದೇ ಗಟ್ಟಿತನ. ಎಪ್ಪತ್ತರ ಹೊಸ್ತಿಲ ಮೇಲೆ ಕೂತು ಬಾಯಿಯನೊಮ್ಮೆ ನೋಡಿಕೊಂಡರೂ ಅಷ್ಟೂ ಹಲ್ಲುಗಳು ಹಾಗೆಯೇ ಉಳಿದುಕೊಂಡಿವೆ. ಕ್ವಿಂಟಾಲ್ ತೂಕ ಎತ್ತುವುದು ಅವರಿಗೆ ಈಗಲೂ ಅನಾಯಸ. ಜಿಮ್ ಹೋಗುತ್ತಿದ್ದ ಆ ಹುಡುಗನ ಎರಡು ಹಲ್ಲುದಾರಿಯಲ್ಲಳಿಯವು. ಫಿಟ್ ಮಾಂಸಖಂಡಗಳ ಬೆಳವಣಿಗೆಯಷ್ಟೇ ಅಲ್ಲ. ಫಟಾಫಟ್ ಅನ್ನುವ ಫಿಟೆ°ಸ್ ಸಿಗುವುದು ಕೇವಲ ಜಿಮ್‌ನಲ್ಲಿ ಅಲ್ಲ. ಇಲ್ಲಿವೆ ನೋಡಿ ಒಂದಿಷ್ಟು ವಿಚಾರಗಳು. 1. ನಿಮ್ಮ ಫಿಟ್ನೆಸ್‌ಗೆ ಜಿಮ್ ಒಂದೇ ದಾರಿಯಲ್ಲ…
ಫಿಟ್ನೆಸ್ ಸತತ ಹಿಂಸೆಯಿಂದ, ಕಾಟಾಚಾರದಿಂದ, ಒತ್ತಾಯದಿಂದ ದಕ್ಕುವುದಲ್ಲ! ಜಿಮ್‌ನಿಂದ ಫಿಟೆ°ಸ್ ದಕ್ಕಬಹುದು. ಆದರೆ, ಜಿಮ್ ಒಂದರಿಂದಲೇ ದಕ್ಕಲಾರದು ಅಂದಾದ ಮೇಲೆ ಬಲವಂತದ ಜಿಮ್ ಜೀವನ ಏಕೆ? ದೈಹಿಕ ವ್ಯಾಯಾಮಕ್ಕೆ ಸಾವಿರ ದಾರಿಗಳಿವೆ. ನೀವು ದೇಹಕ್ಕೆ ನೀಡಬಹುದಾದ ಹಿತವಾದ ಮತ್ತು ವ್ಯವಸ್ಥಿತವಾದ ಕೆಲಸಗಳೂ ಫಿಟೆ°ಸ್ ನೀಡಬಲ್ಲವು. 2. ನಿಮ್ಮ ಇಷ್ಟದಲ್ಲೇ ನಿಮ್ ಫಿಟ್ನೆಸ್ ಇದೆ…
ಕೆಲವರಿಗೆ ಆಟಗಳೆಂದರೆ ಪ್ರಾಣ. ಸೈಕ್ಲಿಂಗ್ ಆಸೆ ಮತ್ತೆ ಕೆಲವರಿಗೆ. ಒಂದಿಷ್ಟು ಮಂದಿ ಈಜಿನಲ್ಲಿ ಖುಷಿ ಕಾಣುತ್ತಾರೆ. ಕಾಡುವ ಹಾಡುಗಳನ್ನು ಕೇಳುತ್ತಾ ಸೂರ್ಯನ ಎದುರಿಗೆ ಜೋರಾಗಿ ನಡೆಯುವುದರಲ್ಲಿ ಕೆಲವರು ತಮ್ಮನ್ನು ತಾವು ಮರೆತುಬಿಡುತ್ತಾರೆ. ಇಲ್ಲಿ ನಿಮ್ಮ ಇಷ್ಟಗಳು ದಕ್ಕುತ್ತವೆ ಬೋನಸ್ ಎಂಬಂತೆ ಫಿಟೆ°ಸ್ ಕೂಡ ಸಿಗುತ್ತೆ. ನೋಡಿ ಮಾಘ ಸ್ನಾನ ಬೇಕೆ? 3. ನಿಮ್ಮ ಜೀವನ ಶೈಲಿಯಿಂದಲೇ ಫಿಟ್ನೆಸ್ ಸಿಗುತ್ತೆ!
ನಿಮ್ಮ ಲೈಫ್ ಹೇಗಿದೆ ಹೇಳಿ? ಕಂಡಿದ್ದೆಲ್ಲವನ್ನೂ ಹೊಟ್ಟೆ ಬಿರಿಯುವ ಹಾಗೆ ಉಂಡು, ಸದಾ ಗೊರಕೆ ಹೊಡೆಯುವಂತಿದೆಯಾ? ಹೀಗಿದ್ದರೆ, ಯಾವ ಜಿಮ್ ಕೂಡ ನಿಮ್ಮನ್ನು ಕಾಪಾಡಲಾರದು! ಎಲ್ಲಾ ಸಂಶೋಧನೆಗಳು ಹೇಳುತ್ತಿರುವುದೂ ಇದನ್ನೇ. ನಿಮ್ಮ ನಿಮ್ಮ ಜೀವನ ಶೈಲಿಯೇ ನಿಮ್ಮ ಅಭದ್ರ ದೇಹಸ್ಥಿತಿಗೆ ಕಾರಣ ಅಂತ. ಒಂದು ಆರೋಗ್ಯಯುತ ಜೀವನಶೈಲಿ ರೂಢಿಸಿಕೊಂಡರೆ ನೀವು ಫಿಟ್. 4. ಕಿವಿಯೂದುವವನಿಗೆ ಕೋಕ್ ಕೊಡಿ…
“ಇಲ್ನೋಡು ಮಗಾ, ನಾನು ಹೇಗಿದ್ದೆ ಹೇಗಾದೆ!?’. ನೀನು ಒಂದ್ಸರಿ ಜಿಮ್‌ಗೆ ಬಂದು ನೋಡು. ಬರೀ ಒಂದೇ ಒಂದು ತಿಂಗಳಲ್ಲಿ ಬದಲಾಗ್ತಿಯ ಗೊತ್ತಾ!? ಒಳ್ಳೇ ನಿv ಬರುತ್ತೆ, ಕಣ್ಣಲ್ಲಿ ಏನೋ ಶೈನಿಂಗ್ ಇರುತ್ತೆ. ಚರ್ಮ ಹೊಳೆಯುತ್ತೆ. ಸದಾ ಫ್ರೆಶ್ ಫ್ರೆಶ್ ಅಂತಾರೆ. ನೀವು ಜಿಮ್‌ಗೆ ಹೋದರೆ ಅಮೇಲೆ ಬಿಡುವುದು ಕಷ್ಟವೇ! ಬಿಟ್ಟರೂ ಕಷ್ಟವೇ! ಅತಿಯಾದ ವ್ಯಾಯಾಮದ ಅಪಾಯ
ಜಿಮ್ಮಿನಿಂದ ಶರೀರ ದಪ್ಪವಾಗುವುದು ನಿಜ. ತಕ್ಷಣಕ್ಕೆ ನಿಲ್ಲಿಸಿದರೆ ಸ್ನಾಯುವಿನ ಬಲ ಕುಸಿಯುವುದು. ದೌರ್ಬಲ್ಯವೂ ಕಾಡಬಹುದು. ಹೃದಯದ ರಕ್ತನಾಳದ ಶಕ್ತಿಯೂ ಕುಸಿಯಬಹುದು. ಮಿತಿ ಇಲ್ಲದೇ ಮಾಡುವ ವ್ಯಾಯಾಮ ಅಪಾಯ ತರಬಹುದು. ಅನೇಕರು ಮಂಡಿ, ಸೊಂಟ ಬೆನ್ನಿನ ಅತೀವ್ರ ನೋವುಗಳಿಂದ ಬಳಲುತ್ತಿರುವುದು ಇದೆ. ಇವೆಲ್ಲಾ ವೈದ್ಯಲೋಕ ಹೇಳಿದ ಮಾತು. ಜಿಮ್ ಇಲ್ಲದೆ ಟ್ರಿಮ್ ಆಗಿ…
ಸಮತೋಲಿತ ಹಿತ ಮಿತ ಆಹಾರ, ಕೈ ತುಂಬಾ ಕೆಲಸ, ಒಳ್ಳೆಯ ಆಲೋಚನೆ, ಸಾಕಷ್ಟು ನಿದ್ದೆ, ಬೇಗ ಮಲಗಿ ಬೇಗ ಏಳುವುದು, ಮುಂಜಾನೆಯ ವಾಕ್, ದೇಹ ಬಯಸುವಷ್ಟು ವ್ಯಾಯಾಮ, ಒಂದಷ್ಟು ಬೆವರು, ಯೋಗ, ಧ್ಯಾನ, ಸಾಕಷ್ಟು ನೀರು ಕುಡಿಯುವ ಅಭ್ಯಾಸ, ಓದು, ದುಶ್ಚಟಗಳಿಂದ ದೂರವಿರುವುದು, ಮಕ್ಕಳೊಂದಿಗೆ ಆಟ ಇವೆಲ್ಲವೂ ನಿಮ್ಮನ್ನು ಜಿಮ್ ಇಲ್ಲದೆಯೂ ಟ್ರಿಮ್ಮಾಗಿ ಇಡಬಲ್ಲವು. ಸದಾಶಿವ್ ಸೊರಟೂರು