Advertisement

Congress ಅಭಿವೃದ್ಧಿ ಮಾಡದೆ ಜನಕಲ್ಯಾಣ ಸಮಾವೇಶ ಏಕೆ?: ವಿಜಯೇಂದ್ರ

12:07 AM Dec 06, 2024 | Team Udayavani |

ಕಲಬುರಗಿ: ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾದರೂ ಒಂದೇ ಒಂದು ಹೊಸ ಯೋಜನೆ ನೀಡಿಲ್ಲ, ಒಂದೇ ಒಂದು ರಸ್ತೆ ಮಾಡಿಲ್ಲ. ಅಭಿವೃದ್ಧಿ ಕೆಲಸ ಮಾಡದೆ ಜನ ಕಲ್ಯಾಣ ಸಮಾವೇಶ ಮಾಡಿದ್ದಾದರೂ ಏಕೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರಶ್ನಿಸಿದರು.

Advertisement

ಸುದ್ದಿಗಾರರ ಜತೆ ಮಾತನಾಡಿ, ಗ್ಯಾರಂಟಿಗಳ ಜಪ ಮಾಡುವ ಸರಕಾರ ಚುನಾವಣೆ ಬಂದಾಗೊಮ್ಮೆ ಜನರ ಖಾತೆಗೆ ಹಣ ಜಮೆ ಮಾಡಿ ಅನಂತರ ಮರೆತು ಬಿಡುತ್ತಿದೆ. ಕಳೆದ ಲೋಕಸಭೆ ಚುನಾವಣೆಗೂ ಮುಂಚೆ ಹಣ ಹಾಕಲಾಗಿತ್ತು. ಬಳಿಕ ಉಪಚುನಾವಣೆ ವೇಳೆ ಹಾಕಿದರು. ಒಂದರ್ಥದಲ್ಲಿ ಗ್ಯಾರಂಟಿಗಳ ಅವಮಾನ ಎನ್ನುವ ರೀತಿಯಲ್ಲಿ ಸರಕಾರ ನಡೆದುಕೊಳ್ಳುತ್ತಿದೆ. ಆಡಳಿತ ಪಕ್ಷದ ಶಾಸಕರೇ ಅಭಿವೃದ್ಧಿಗೆ ನಯಾಪೈಸೆ ಅನುದಾನ ಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಜನ ಕಲ್ಯಾಣ ಹೇಗಾಗುತ್ತದೆ ಎಂದು ಕೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next