Advertisement

ಮಣಿಕಾ ಬಾತ್ರಾಗೆ ನಗದು ಪುರಸ್ಕಾರ ವಿಳಂಬವೇಕೆ?

09:36 AM Jul 31, 2018 | Harsha Rao |

ಹೊಸದಿಲ್ಲಿ: ಕಾಮ ನ್ವೆಲ್ತ್‌ ಟೇಬಲ್‌ ಟೆನಿಸ್‌ನಲ್ಲಿ ಭಾರತಕ್ಕೆ 4 ಪದಕ ಗೆದ್ದು ಕೊಟ್ಟ ದಿಲ್ಲಿ ಮೂಲದ ಮಣಿಕಾ ಬಾತ್ರಾ ಅವರಿಗೆ ಅಲ್ಲಿನ ಸರಕಾರ ಘೋಷಿ ಸಿದ್ದ ನಗದು ಪುರಸ್ಕಾರ ಇನ್ನೂ ಸಿಕ್ಕಿಲ್ಲ. ತಂಡಗಳು ಹಾಗೂ ವೈಯಕ್ತಿಕ ವಿಭಾಗಗಳಲ್ಲಿ 2 ಸ್ವರ್ಣ, ಡಬಲ್ಸ್‌ನಲ್ಲಿ 2 ಬೆಳ್ಳಿ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಮಣಿಕಾ ಮಿಂಚಿದ್ದರು.

Advertisement

ಅವರ ಈ ಸಾಧನೆಗಾಗಿ 1.7 ಕೋಟಿ ರೂ. (ಪ್ರತಿ ಚಿನ್ನಕ್ಕೆ ತಲಾ 50 ಲಕ್ಷ ರೂ., ಬೆಳ್ಳಿಗೆ 40 ಲಕ್ಷ ರೂ. ಹಾಗೂ ಕಂಚಿಗೆ 30 ಲಕ್ಷ ರೂ.) ನೀಡುವುದಾಗಿ ದಿಲ್ಲಿ ಸರಕಾರ ಘೋಷಿಸಿತ್ತು. ಆದರೆ ದಿಲ್ಲಿ ಸರಕಾರದ ನಿಯಮಗಳ ಪ್ರಕಾರ, ಕಾಮನ್ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದವರಿಗೆ 14 ಲಕ್ಷ ರೂ., ಬೆಳ್ಳಿ ವಿಜೇತರಿಗೆ 10 ಲಕ್ಷ ರೂ. ಹಾಗೂ ಕಂಚು ಗೆದ್ದವರಿಗೆ 6 ಲಕ್ಷ ರೂ. ನೀಡಬೇಕಿದೆ. ಹಾಗಾಗಿ, ನಿಯಮಾವಳಿಗೆ ತಿದ್ದುಪಡಿ ತರಲು ಸರಕಾರ ಆಲೋಚಿಸಿದೆ. ಈ ಹಿನ್ನೆಲೆ ದಿಲ್ಲಿ ಕ್ರೀಡಾ ಇಲಾಖೆ ಪ್ರಸ್ತಾವನೆ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಿದ್ದು, ಒಪ್ಪಿಗೆಗಾಗಿ ಕಾಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next