Advertisement

LACಯಲ್ಲಿ ಚೀನಾ ಪಡೆಗಳಿಂದ ಪಂಜಾಬಿ ಗಾನ-ಬಜಾನ ; ಏನಿದು ಕೆಂಪು ಸೇನೆಯ ಹೊಸ ಗೇಮ್ ಪ್ಲ್ಯಾನ್?

06:26 PM Sep 17, 2020 | Hari Prasad |

ಹೊಸದಿಲ್ಲಿ: ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಎದುರಾಳಿಗಳನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಮಣಿಸಲು ಎಲ್ಲಾ ರೀತಿಯ ತಂತ್ರ ಕುತಂತ್ರಗಳನ್ನು ಮಾಡುತ್ತಲೇ ಇರುತ್ತದೆ.

Advertisement

ಇದಕ್ಕೊಂದು ಉತ್ತಮ ಉದಾಹರಣೆ ಎಂಬಂತೆ ಚೀನೀ ಸೈನಿಕರು ಲಢಾಕ್ ನ ವಿವಾದಾತ್ಮಕ ವಾಸ್ತವ ನಿಯಂತ್ರಣ ರೇಖೆಯ ಬಳಿ ಪಂಜಾಬಿ ಹಾಡುಗಳನ್ನು ಲೌಡ್ ಸ್ಪೀಕರ್ ಮೂಲಕ  ಫಿಂಗರ್ 4 ಪಾಯಿಂಟ್ ನ ಎತ್ತರದ ಸ್ಥಳದಲ್ಲಿ ಬೀಡುಬಿಟ್ಟಿರುವ ಭಾರತೀಯ ಸೈನಿಕರಿಗೆ ಕೇಳಿಸುತ್ತಿದ್ದಾರೆ.

ಪಂಜಾಬ್ ಭಾಷೆ ಎಲ್ಲಿ ಚೀನಿ ಸೈನಿಕರೆಲ್ಲಿ ಎಂದು ನಿಮಗೆ ಆಶ್ಚರ್ಯವಾಗುತ್ತಿದೆಯೇ? ಹೌದು, ಇದು ಕುತಂತ್ರಿ ಕೆಂಪು ರಾಷ್ಟ್ರದ ಸೈನಿಕರ ಸೈಕಲಾಜಿಕಲ್ ಗೇಮ್ ಎಂದು ಈ ಪಡೆಯ ಕುತಂತ್ರವನ್ನು ಬಲ್ಲ ಮೂಲಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೇ ವರದಿ ಮಾಡಿದೆ.

ಅಂದರೆ, ನಮಗೂ ಪಂಜಾಬಿ ಭಾಷೆ ತಿಳಿಯುತ್ತದೆ ಎಂಬುದನ್ನು ಎದುರಾಳಿ ಪಡೆಗಳಿಗೆ (ಭಾರತೀಯ ಪಡೆಗಳಿಗೆ) ತಿಳಿಯುವಂತೆ ಮಾಡುವ ಮತ್ತು ಆ ಮೂಲಕ ಅವರನ್ನು ಮಾನಸಿಕವಾಗಿ ದುರ್ಬಲಗೊಳಿಸುವ ಪ್ರಯತ್ನ ಇದರ ಹಿಂದೆ ಅಡಗಿದೆ ಎಂಬುದು ಸೇನಾ ಮೂಲಗಳ ಅಂಬೋಣ.

ವಾಸ್ತವದಲ್ಲಿ ಇದು ಫಿಂಗರ್ 4 ಪಾಯಿಂಟ್ ನಲ್ಲಿ ತಮಗಿಂತ ಎತ್ತರದಲ್ಲಿ ಕುಳಿತಿರುವ ಭಾರತೀಯ ಯೋಧರನ್ನು ಕಂಗೆಡಿಸಲು ಚೀನೀ ಪಡೆಯ ಯೋಧರು ಮಾಡುತ್ತಿರುವ ಗಿಮಿಕ್ ಎಂದೂ ಹೇಳಲಾಗುತ್ತದೆ.

Advertisement

ಚೀನಾದ ಈ ನಡೆಯಲ್ಲಿ ಎರಡು ಉದ್ದೇಶಗಳು ಅಡಗಿವೆ. ಒಂದು ನಮ್ಮಲ್ಲೂ ನಿಮ್ಮ ಭಾಷೆಯನ್ನು ತಿಳಿದವರಿದ್ದಾರೆ ಎಂದು ಭಾರತೀಯ ಪಡೆಗಳಿಗೆ ಸೂಚನೆಯನ್ನು ರವಾನಿಸುವುದು ಮತ್ತು ಲೌಡ್ ಸ್ಪೀಕರ್ ಮೂಲಕ ಹಾಡು ಹಾಕಿ ಭಾರತೀಯ ಯೋಧರನ್ನು ಕಿರಿಕಿರಿಗೊಳಿಸುವ ಹುನ್ನಾರವೂ ಇದರ ಹಿಂದೆ ಅಡಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಲಡಾಖ್ ನಲ್ಲಿ ಏನಾಗ್ತಿದೆ? ಕಾಂಗ್ರೆಸ್ ಪ್ರಶ್ನೆಗೆ ರಕ್ಷಣಾ ಸಚಿವ ರಾಜನಾಥ್ ಖಡಕ್ ಉತ್ತರ

ಚೀನಾ ಈ ರಿತಿಯ ತಂತ್ರವನ್ನು ಉಪಯೋಗಿಸುತ್ತಿರುವುದು ಇದೇ ಮೊದಲೇನಲ್ಲ. 1962ರ ಯುದ್ಧಕ್ಕೂ ಮೊದಲು ಚೀನೀ ಸೈನಿಕರು ಈ ಭಾಗದಲ್ಲಿ ಬಾಲಿವುಡ್ ಹಾಡುಗಳನ್ನು ಗಟ್ಟಿಯಾಗಿ ಹಾಕುತ್ತಿದ್ದರು ಎಂದು ಈ ವರದಿ ತಿಳಿಸಿದೆ.

ಹೆಚ್ಚಿನ ಭಾರತೀಯ ಯೋಧರು ಹಿಂದಿ ಹಾಗೂ ಪಂಜಾಬಿ ಭಾಷೆಗಳಲ್ಲಿ ಪರಸ್ಪರ ಮಾತನಾಡಿಕೊಳ್ಳುತ್ತಾರೆ. ಹಾಗೆಯೇ ಈ ಯೋಧರು ತಮ್ಮಷ್ಟಕ್ಕೇ ತಾವೇ ಹಿಂದಿ, ಪಂಜಾಬಿ ಹಾಡುಗಳನ್ನು ಗುಣುಗುತ್ತಿರುವುದನ್ನು ಈ ಭಾಗದಲ್ಲಿ ಬೀಡುಬಿಟ್ಟಿರುವ ಚೀನೀ ಸೈನಿಕರು ಕೇಳಿಸಿಕೊಂಡಿರುವ ಸಾಧ್ಯತೆಗಳಿವೆ. ಹೀಗಾಗಿ ಅದೇ ಭಾಷೆಯ ಹಾಡುಗಳನ್ನು ತಮ್ಮ ಪಾಳಯದಲ್ಲೂ ಪ್ಲೇ ಮಾಡುವ ಮೂಲಕ ಎರಡೂ ದೇಶಗಳ ಯೋಧರ ನಡುವೆ ಉಂಟಾಗಿರುವ ಬಿಕ್ಕಟ್ಟಿನ ಬೆಳವಣಿಗೆಗಳಿಂದ ನಾವೇನೂ ದೃತಿಗೆಟ್ಟಿಲ್ಲ ಎಂಬುದನ್ನು ಭಾರತೀಯ ಪಡೆಗಳಿಗೆ ತೋರಿಸಿಕೊಡುವ ಮಾನಸಿಕ ಗೇಮ್ ಪ್ಲ್ಯಾನ್ ಇದಾಗಿರುವ ಸಾಧ್ಯತೆಗಳನ್ನು ನಮ್ಮ ಸೇನೆ ತಳ್ಳಿಹಾಕುತ್ತಿಲ್ಲ.

ಇದನ್ನೂ ಓದಿ:
ವಿಶ್ಲೇಷಣೆ: ಚಳಿಗಾಲದಲ್ಲಿ ಸೇನೆ ನಿಯೋಜನೆ ಪಕ್ಕಾ; ದುಪ್ಪಟ್ಟು ವ್ಯಯಿಸಬೇಕು ಭಾರತ

ಲಢಾಕ್ ನಲ್ಲಿರುವ ವಾಸ್ತವ ನಿಯಂತ್ರಣ ರೇಖೆಯ ಬಳಿಯ ಪಿಂಗರ್ 4 ಭಾಗದಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ಸೆಪ್ಟಂಬರ್ 8ರಂದು ಇದೇ ಮೊದಲ ಬಾರಿಗೆಂಬಂತೆ ಸಣ್ಣ ಪ್ರಮಾಣದ ಗುಂಡಿನ ಚಕಮಕಿಯೂ ನಡೆದಿರುವುದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ಈ ಎಲ್ಲಾ ಬೆಳವಣಿಗೆಗಳ ಬಳಿಕ ಎರಡೂ ದೇಶಗಳೂ ಈ ಭಾಗದಲ್ಲಿ ತಮ್ಮ ಸೇನಾ ಬಲವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next