ನವದೆಹಲಿ : ‘ಸರ್… ಮಫ್ಲರ್ ಯಾಕೆ ಧರಿಸಿಲ್ಲ’ ಎಂದು ಮಹಿಳೆಯೊಬ್ಬರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಪ್ರಶ್ನಿಸಿ ಗಮನ ಸೆಳೆದಿದ್ದಾರೆ.
ದೆಹಲಿಯ ಮುನ್ಸಿಪಲ್ ಕಾರ್ಪರೇಷನ್ ಚುನಾವಣೆಯ ಪ್ರಚಾರದಲ್ಲಿ ನಿರತರಾಗಿದ್ದ ಕೇಜ್ರಿವಾಲ್ ಅವರಿಗೆ ಮಹಿಳೆ “ಸರ್ ಅಪ್ನೆ ಮಫ್ಲರ್ ನಹೀ ಪೆಹ್ನಾ (ನೀವು ಮಫ್ಲರ್ ಏಕೆ ಧರಿಸಿಲ್ಲ?)” ಎಂದು ಪ್ರಶ್ನಿಸಿದ್ದಾರೆ. ನಗುತ್ತಾ ಪ್ರತಿಕ್ರಿಯಿಸಿದ ಕೇಜ್ರಿವಾಲ್ ”ಇನ್ನೂ ಚಳಿ ಬಂದಿಲ್ಲ”(ಅಭಿ ಥಂಡ್ ನಹಿ ಆಯಿ) ಎಂದಿದ್ದಾರೆ. ಅವರ ಆಮ್ ಆದ್ಮಿ ಪಾರ್ಟಿ ಈ ವಿಡಿಯೋ ಟ್ವೀಟ್ ಮಾಡಿದೆ.
ಎಎಪಿ ಕೇಜ್ರಿವಾಲ್ ಅವರನ್ನು ‘ಜನರ ಸಿಎಂ’ ಎಂದು ಶ್ಲಾಘಿಸಿದ್ದು, ತಮ್ಮ ಬೆಂಬಲಿಗರು ಹಾಗೂ ಅಲ್ಲಿದ್ದವರ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.
ಕೇಜ್ರಿವಾಲ್ ಸಿಗ್ನೇಚರ್ ಮಫ್ಲರ್ ಧರಿಸುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ಚಳಿಗಾಲದಲ್ಲಿ ಚಳಿಯಿಂದ ರಕ್ಷಿಸಿಕೊಳ್ಳಲು ಮಫ್ಲರ್ ಧರಿಸುವುದನ್ನು ಹೆಚ್ಚಾಗಿ ಕಾಣಬಹುದು. ಅವರ ರಾಜಕೀಯದ ಆರಂಭಿಕ ವರ್ಷಗಳಲ್ಲಿ, ಸಿಬಿಐ ತನ್ನ ಮನೆಯನ್ನು ಶೋಧಿಸಿದರೆ, ಅದರಲ್ಲಿ ಏನೂ ಸಿಗುವುದಿಲ್ಲ, ಆದರೆ ಲೆಕ್ಕಕ್ಕೆ ಸಿಗದ ಮಫ್ಲರ್‌ಗಳು ಮಾತ್ರ ಸಿಗುತ್ತವೆ ಎಂದು ಅವರು ಮೂದಲಿಸಿದ್ದರು.ಕೇಜ್ರಿವಾಲ್ ಅವರು ಮಫ್ಲರ್ ಬಗ್ಗೆ ಪ್ರತಿಕ್ರಿಯಿಸಿದ್ದು ಇದೇ ಮೊದಲಲ್ಲ. 2019 ರಲ್ಲಿ ಕಾಣೆಯಾದ ಮಫ್ಲರ್ ಬಗ್ಗೆ ಟ್ವಿಟರ್ ಬಳಕೆದಾರರು ಅವರನ್ನು ಕೇಳಿದಾಗ, ಮಫ್ಲರ್ ಬಹಳ ಹಿಂದೆಯೇ ದೂರವಾಗಿದೆ. ಆದರೆ ಜನರು ಗಮನಿಸಲಿಲ್ಲ ಎಂದು ಅವರು ಹೇಳಿದರು.