Advertisement

ಫಲಿಸಿದ ಚೀನದ ಲಾಕ್ ಡೌನ್ ಅಸ್ತ್ರ: ಸಾಮಾನ್ಯ ಸ್ಥಿತಿಯತ್ತ ಚೀನ ಜನಜೀವನ

11:05 AM Mar 27, 2020 | keerthan |

ವುಹಾನ್: ಮಾರಣಾಂತಿಕ ಕೋವಿಡ್-19 ವೈರಸ್ ಆರಂಭವಾದ ಚೀನದ ವುಹಾನ್ ನಗರದಲ್ಲೀಗ ಸಾರ್ವಜನಿಕ ಸಾರಿಗೆ ಸೇವೆಗಳು ಮತ್ತೆ ಆರಂಭಗೊಳ್ಳುತ್ತಿವೆ. ಈ ಮೂಲಕ ಒಂಬತ್ತು ವಾರಗಳ ಲಾಕ್ ಡೌನ್ ಬಳಿಕ ಜನ ಜೀವನ ಯಥಾಸ್ಥಿತಿಗೆ ಬಂದಂತಾಗಿದೆ. ಜನರು ಎಂದಿನಂತೆ ತಮ್ಮ ದೈನಂದಿನ ಅಗತ್ಯಗಳನ್ನು ಪೂರೈಸಿಕೊಳ್ಳಲು ರಸ್ತೆಗಳಿಯುತ್ತಿದ್ದಾರೆ. ಮಂಗಳವಾರದಿಂದ ಆರಂಭವಾಗುವಂತೆ ನೂರಕ್ಕೂ ಹೆಚ್ಚಿನ ಬಸ್ ರೂಟ್ ಗಳು ಪುನರಾರಂಭಗೊಂಡಿವೆ.

Advertisement

ತೆರೆದ ಅಂಗಡಿಗಳು
ಚೀನದ ಬಹುತೇಕ ನಗರಗಳು ತಮ್ಮ ಎಂದಿನ ಜನಜೀವನಕ್ಕೆ ತೆರೆದುಕೊಳ್ಳುತ್ತಿವೆ. ಬಿಕೋ ಎನ್ನುತ್ತಿದ್ದ ರಸ್ತೆಗಳಲ್ಲೀಗ ವಾಹನಗಳ ಸದ್ದು ಕೇಳಿಬರುತ್ತಿದೆ. ರೆಸ್ಟೋರೆಂಟ್ ಗಳು, ಶಾಪಿಂಗ್ ಮಾಲ್ ಗಳು ತೆರೆಯುತ್ತಿವೆ. ಬಹುತೇಕ ಮಾಲ್ ಗಳ ಪಾರ್ಕಿಂಗ್ ಏರಿಯಾಗಳು ವಾಹನಗಳಿಂದ ತುಂಬುತ್ತಿವೆ. ವಾಚ್ ಮನ್ ಗಳು ತಮ್ಮ ಕೆಲಸಗಳಿಗೆ ಹಿಂದಿರುಗುತ್ತಿದ್ದಾರೆ. ಮುಂಬರುವ ವಾರದಿಂದ ಶಾಲಾ ಕಾಲೇಜುಗಳು ಮತ್ತೆ ತೆರೆಯಲಿದ್ದು, ಈ ಕುರಿತಂತೆ ಶಾಲಾ ಕಾಲೇಜು ಆಡಳಿತ ಮಂಡಳಿಗಳು ಸಭೆ ಸೇರಿವೆ. ಅದರೆ ಜನರು ಮಾತ್ರ ಇನ್ನೂ ರಸ್ತೆಗಿಳಿಯಲು ಭಯಪಡುತ್ತಿದ್ದಾರೆ. ಪ್ರತಿದಿನ ರಸ್ತೆಗಳು ಮತ್ತು ಸಾರ್ವಜನಿಕ ಸ್ಥಳಗಳಿಗೆ, ಬಸ್ ಗಳಿಗೆ ಸ್ಯಾನಿಟೈಸರ್ ಗಳನ್ನು ಸಿಂಪಡಿಸಲಾಗುತ್ತಿದೆ.

ಸುರಕ್ಷೆಗೂ ಕ್ರಮ
ಪ್ರತಿ ಬಸ್ ಗಳಲ್ಲಿ ಡ್ರೈವರ್ ನೊಂದಿಗೆ ಒಬ್ಬ ಮೇಲ್ವೀಚಾರಕ ಇರಲಿದ್ದಾನೆ. ಬಸ್ ನಿಲ್ದಾಣಗಳಲ್ಲಿ ಎಲ್ಲರನ್ನೂ ತಪಾಸಣೆಗೆ ಒಳಪಡಿಸಿಯೇ ಅವರನ್ನು ಒಳಗೆ ಸೇರಿಸಿಕೊಳ್ಳಲಾಗುತ್ತಿದೆ. ಸೂಪರ್ ವೈಸರ್ ಅವರು ಪ್ರಯಾಣಿಕರ ಹೆಸರನ್ನು ನೋಂದಾಯಿಸಿಕೊಳ್ಳುತ್ತಿದ್ದು, ಸ್ಕ್ಯಾನ್ ಮಾಡುತ್ತಿದ್ದಾರೆ. ಟೆಂಪರೇಚರ್ ಟೆಸ್ಟ್ ನಲ್ಲಿ ಪಾಸ್ ಆದವರಿಗೆ ಮಾತ್ರ ಪ್ರಯಾಣ ಮಾಡಲು ಅವಕಾಶ ನೀಡಲಾಗುತ್ತದೆ.  ಇಂತಹ ಸಂದರ್ಭಗಳಲ್ಲಿ ಯಾರಲ್ಲಾದರೂ ರೋಗ ಲಕ್ಷಣಗಳು ಕಂಡು ಬಂದರೆ ತುರ್ತು ಸೇವೆಯ ವಾಹನಗಳ ಮೂಲಕ ಆಸ್ಪತ್ರೆಗೆ ಸೇರಿಸಿಕೊಳ್ಳಲಾಗುತ್ತಿದೆ. ಪ್ರತಿ ಆಂಬುಲೆನ್ಸ್ ಗಳಲ್ಲಿ ಡಾಕ್ಟರ್ಸ್, ವಂಟಿಲೇಟರ್ ಅನ್ನು ಒದಗಿಸಲಾಗಿದೆ. ಪ್ರತಿ ಬಸ್ ನಿಲ್ದಾಣಗಳಲ್ಲಿ ಆಂಬುಲೆನ್ಸ್ ಗಳು ಇರಲಿದೆ. ರಸ್ತೆ ಬಳಸುವವರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ಅಲ್ಲಿನ ಆರೋಗ್ಯ ಇಲಾಖೆ ಸೂಚಿಸಿದೆ.  ಪ್ರಯಾಣಿಕರು ಬಸ್ ಹತ್ತುವ ಸಂದರ್ಭದಲ್ಲೂ ಮಾಸ್ಕ್ ಬಳಸುವುದು ಕಡ್ಡಾಯವಾಗಿದೆ.

ಹಿರಿಯ ನಾಗರಿಕರು ರಸ್ತೆಗಿಳಿಯುವಂತಿಲ್ಲ
ಕೋವಿಡ್-19 ವೈರಸ್ ಹೆಚ್ಚಾಗಿ ಹಿರಿಯ ನಾಗರಿರಲ್ಲಿ ಬೇಗನೆ ಕಾಣಿಸಿಕೊಳ್ಳುವ ಕಾರಣ ಅಂತಹವರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಈ ಕಾರಣಕ್ಕಾಗಿ 65 ವರ್ಷ ಮೇಲ್ಪಟ್ಟವರು ಯಾವುದೇ ಕಾರಣಕ್ಕೆ ರಸ್ತೆಗಿಳಿಯದಂತೆ ತಾಕೀತು ಮಾಡಲಾಗಿದೆ. ಯಾರಾದರೂ ಪೊಲೀಸರ ಕಣ್ತಪ್ಪಿಸಿ ಸಾರ್ವಜಿಕ ಸ್ಥಳಗಳಿಗೆ ಇಳಿದರೆ ಅವರನ್ನು ಬಂಧನಕ್ಕೆ ಒಳಪಡಿಸಲಾಗುತ್ತಿದೆ. ಇನ್ನು ಸಾರ್ವಜನಿಕ ಬಸ್ ಗಳಲ್ಲೂ ಅವರು ಪ್ರಯಾಣಿಸುವಂತಿಲ್ಲ.

ನಗರಾದ್ಯಂತ ಕೊವಿಡ್-19 ವೈರಸ್ ವ್ಯಾಪಕವಾಗಿ ಹಬ್ಬಿದ ಪರಿಣಾಮ ಜನವರಿ ತೃತೀಯ ವಾರದ ಬಳಿಕ ವುಹಾನ್ ನಗರವನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಗಿತ್ತು. ಎಲ್ಲಾ ಜನಜೀವನ ಸ್ತಬ್ಧವಾಗಿದ್ದವು. ಇದರ ಪರಿಣಾಮವಾಗಿ ಕೊರೊನಾ ಹರಡುವಿಕೆ ಕಡಿಮೆಯಾಗಿದ್ದವು. ವೈರಸ್ ನಿಂದ ರಕ್ಷಿಸಿಕೊಳ್ಳಲು ಇದೇ ಒಂದು ಮಾರ್ಗವಾಗಿದ್ದ, ಸದ್ಯ ಜಗತ್ತಿನಾದ್ಯಂತ ಲಾಕ್ ಡೌನ್ ಪರಿಸ್ಥಿತಿ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next