ಜೋ ಬೈಡೆನ್ ಟ್ರಂಪ್‌ಗೆ ಪ್ರಬಲ ಪೈಪೋಟಿ ಎದುರೊಡ್ಡುತ್ತಿದ್ದಾರೆ. ಒಬಾಮಾ ಅವಧಿಯಲ್ಲಿ ಉಪಾಧ್ಯಕ್ಷರಾಗಿ ಎಂಟು ವರ್ಷ ಸೇವೆ ಸಲ್ಲಿಸಿದ್ದ ಬೈಡೆನ್ ಈ ಗದ್ದುಗೆ ಏರಬಹುದು ಎನ್ನುತ್ತಿವೆ ಇಲ್ಲಿಯವರೆಗಿನ ಸಮೀಕ್ಷೆಗಳು. ಆದರೆ ಹಿಂದಿನ ಬಾರಿ ಟ್ರಂಪ್‌ಗೆ ಬೆಂಬಲ ನೀಡಿದ್ದ “ಸೈಲೆಂಟ್ ಮೆಜಾರಿಟಿ’ ಎಂದು ಕರೆಸಿಕೊಳ್ಳುವ ಮಧ್ಯಮ, ಕೆಳ ಮಧ್ಯಮ ಹಾಗೂ ಬಡ ವರ್ಗದ ಶ್ವೇತವರ್ಣೀಯರು ಈಗ ಯಾರ ಪರ ನಿಲ್ಲುತ್ತಾರೆ ಎನ್ನುವುದೇ ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದೆ.
Advertisement
270 ಎಲಕ್ಟೋರಲ್ ಮತಗಳು ಅಗತ್ಯಅಮೆರಿಕದಲ್ಲಿ 50 ರಾಜ್ಯಗಳಿದ್ದು, ಪ್ರತಿಯೊಂದು ರಾಜ್ಯದಲ್ಲೂ ನಿರ್ದಿಷ್ಟ ಪ್ರಮಾಣದ ಎಲಕ್ಟೋರಲ್ ಮತಗಳು ಇರುತ್ತವೆ. ಒಟ್ಟು 538 ಎಲಕ್ಟೋರಲ್ ಮತಗಳಲ್ಲಿ ಯಾರಿಗೆ 270 ಅಥವಾ ಅದಕ್ಕಿಂತ ಹೆಚ್ಚು ಮತಗಳು ಬರುತ್ತವೋ ಅವರು ಅಧಿಕಾರಕ್ಕೇರುತ್ತಾರೆ. 2016ರಲ್ಲಿ ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ 232 ಎಲಕ್ಟೋರಲ್ ಮತಗಳನ್ನು ಪಡೆದಿದ್ದರೆ ಟ್ರಂಪ್ 306 ಮತ ಪಡೆದು ಅಧಿಕಾರಕ್ಕೇರಿದ್ದರು.
ಅಮೆರಿಕದಲ್ಲಿ ಆರ್ಥಿಕವಾಗಿ ಹಿಂದುಳಿದ ರಾಜ್ಯಗಳ ಬಹಳಷ್ಟಿದ್ದು, ಇವುಗಳನ್ನು ರಸ್ಟ್‌ಬೆಲ್ಟ್ ಎನ್ನಲಾಗುತ್ತದೆ. ಹೆಚ್ಚಾಗಿ ಬಡ ಹಾಗೂ ಕೆಳ ಮಧ್ಯಮ ವರ್ಗದ ಶ್ವೇತವರ್ಣೀಯರು ಇರುವ ಈ ಭಾಗಗಳ ಜನರಿಗೆ ವಲಸಿಗರು ತಮ್ಮ ಕೆಲಸಗಳನ್ನು ಕಸಿದುಕೊಳ್ಳುತ್ತಿದ್ದಾರೆ(ಮುಖ್ಯವಾಗಿ ಕಡಿಮೆ ಸಂಬಳದಲ್ಲಿ ದುಡಿಯುವ ಅಕ್ರಮ ವಲಸಿಗರು) ಎನ್ನುವ ಅಸಮಾಧಾನ ಅಧಿಕವಿದೆ. ಹೀಗಾಗಿ, “ಅಕ್ರಮ ವಲಸಿಗರನ್ನು ಹೊರದಬ್ಬಿ, ಅಮೆರಿಕನ್ನರಿಗೇ ಉದ್ಯೋಗ ನೀಡುತ್ತೇನೆ’ ಎಂಬ ಟ್ರಂಪ್‌ರ ಭರವಸೆ ಕಳೆದ ಚುನಾವಣೆಯಲ್ಲಿ ಈ ಪ್ರದೇಶಗಳ ಮತದಾರರ ಮನಸೆಳೆದಿತ್ತು. “ಟ್ರಂಪ್ ತಮ್ಮ ಮಾತನ್ನು ಉಳಿಸಿಕೊಳ್ಳಲು ವಿಫಲರಾಗಿದ್ದಾರೆ, ಹೀಗಾಗಿ ರಸ್ಟ್ ಬೆಲ್ಟ್ ಪ್ರದೇಶದ ಜನ ತಮ್ಮತ್ತ ವಾಲಲಿದ್ದಾರೆ’ ಎಂದು ಡೆಮಾಕ್ರಟಿಕ್ ಪಕ್ಷ ವಾದಿಸುತ್ತದೆ. ಆದರೆ, ತಮ್ಮ ಅವಧಿಯಲ್ಲಿ ಈ ಭಾಗಗಳಲ್ಲಿ ಅತಿಹೆಚ್ಚು ಉದ್ಯೋಗಗಳು ಸೃಷ್ಟಿಯಾಗಿವೆ ಎನ್ನುತ್ತಾರೆ ಟ್ರಂಪ್. ಹೆಚ್ಚು ಎಲಕ್ಟೋರಲ್ ಮತಗಳಿರುವ ರಾಜ್ಯ
ಕೆಲವು ರಾಜ್ಯಗಳು ಹೆಚ್ಚು ಎಲೆಕ್ಟೋರಲ್ ಮತಗಳನ್ನು ಹೊಂದಿದ್ದು, ಈ ಬಾರಿಯ ಚುನಾವಣೆಯಲ್ಲಿ ಈ ರಾಜ್ಯಗಳಲ್ಲಿನ ಗೆಲುವು ಅಭ್ಯರ್ಥಿಗಳ ಹಣೆಬರಹ ನಿರ್ಧರಿಸಬಲ್ಲದು. ಉದಾಹರಣೆಗೆ ಕ್ಯಾಲಿಫೋರ್ನಿಯಾ 55( ಹಿಂದಿನ ಬಾರಿ ಹಿಲರಿ ಗೆದ್ದಿದ್ದರು), ಟೆಕ್ಸಾಸ್38(ಟ್ರಂಪ್), ಫ್ಲೋರಿಡಾ 29(ಟ್ರಂಪ್), ನ್ಯೂಯಾರ್ಕ್ 29(ಹಿಲರಿ), ಇಲಿನಾಯ್ಸ 20(ಹಿಲರಿ), ಪೆನ್ಸಿಲ್ವೇನಿಯಾ 20(ಟ್ರಂಪ್), ಒಹಾಯೋ 18(ಟ್ರಂಪ್), ಜಾರ್ಜಿಯಾ 16(ಟ್ರಂಪ್), ಮಿಶಿಗನ್ 16 (ಟ್ರಂಪ್), ಉತ್ತರ ಕ್ಯಾರೊಲೀನಾ 15(ಟ್ರಂಪ್), ನ್ಯೂಜೆರ್ಸಿ 14 (ಹಿಲರಿ). ಕೇವಲ ಈ 11 ರಾಜ್ಯಗಳಲ್ಲೇ 270 ಎಲಕ್ಟೋರಲ್ ಮತಗಳು ಇವೆ. ಕಳೆದ ಬಾರಿ ಇವುಗಳಲ್ಲಿ ಹಿಲರಿ 118 ಮತ ಪಡೆದಿದ್ದರೆ, ಟ್ರಂಪ್ 152 ಮತ ಪಡೆದಿದ್ದರು. ಈ ಬಾರಿ ಕ್ಯಾಲಿಫೋರ್ನಿಯಾ, ಟೆಕ್ಸಾಸ್, ಫ್ಲೋರಿಡಾ, ಪೆನ್ಸಿಲ್ವೇನಿಯಾ, ಒಹಾಯೋ, ಉತ್ತರ ಕ್ಯಾರೋಲಿನಾ ರಾಜ್ಯಗಳಲ್ಲಿ ಬೈಡೆನ್ ಪರ ಜನರ ಒಲವು ಅಧಿಕವಿದೆ ಎನ್ನುತ್ತವೆ ಇಲ್ಲಿಯವರೆಗಿನ ಸಮೀಕ್ಷೆಗಳು. ಹಿಂದಿನ ಬಾರಿ ಈ 11 ರಾಜ್ಯಗಳಲ್ಲಿ 8 ರಾಜ್ಯಗಳನ್ನು ಹಿಲರಿ ಗೆಲ್ಲುತ್ತಾರೆ ಎಂದು ಸಮೀಕ್ಷೆಗಳು ಹೇಳಿದ್ದವು. ಆದರೆ, ಹಿಲರಿ ಗೆದ್ದದ್ದು 4 ರಾಜ್ಯಗಳನ್ನು ಮಾತ್ರ.
Related Articles
ಈಗ ರಸ್ಟ್ ಬೆಲ್ಟ್ ಎಂದು ಕರೆಸಿಕೊ ಳ್ಳುವ ಪ್ರದೇಶಗಳು ಒಂದು ಕಾಲಕ್ಕೆ ಅಮೆರಿಕದ ಬಹುದೊಡ್ಡ ಉತ್ಪಾದನಾ ಕೇಂದ್ರಗಳಾಗಿದ್ದವು. ಬೃಹತ್ ಸರೋವರ ಗಳು, ನಾಲೆಗಳು ಹಾಗೂ ನದಿಗಳನ್ನು ಹೊಂದಿರುವ ಈ ಪ್ರದೇಶಗಳಲ್ಲಿ ನೈಸರ್ಗಿಕ ಸಂಪನ್ಮೂಲ ಅಧಿಕವಿದ್ದ ಕಾರಣ ಸಹಜವಾಗಿಯೇ 1930ರಿಂದ ಬೃಹತ್ ಉದ್ಯಮಗಳು, ಕಾರ್ಖಾನೆಗಳು ಈ ಭಾಗಗಳಲ್ಲಿ ಆರಂಭವಾದವು. ಆದರೆ 1970ರಿಂದ ಈ ಪ್ರದೇಶಗಳಿಂದ ಕಂಪೆನಿಗಳು ನೆಲೆ ಬದಲಿಸಲಾರಂಭಿಸಿ ದವು. ಕಾರ್ಖಾನೆಗಳಲ್ಲಿನ ವಸ್ತುಗಳೆಲ್ಲ ತುಕ್ಕು (ರಸ್ಟ್) ಹಿಡಿದವು. ಈ ಕಾರಣ ಕ್ಕಾಗಿಯೇ ಈ ಪ್ರದೇಶಗಳನ್ನು ರಸ್ಟ್ ಬೆಲ್ಟ್ ಎನ್ನಲಾಗುತ್ತದೆ. ಹೀಗಾಗಿ ಸ್ಥಳೀಯರೆಲ್ಲ ಉದ್ಯೋಗ ಕಳೆದುಕೊಂಡರು, ಬಡತನ, ಅನರಕ್ಷರತೆ ಹೆಚ್ಚಿಬಿಟ್ಟಿತು.
Advertisement
ರಸ್ಟ್ ಬೆಲ್ಟ್ ನಲ್ಲಿ ವಾಸಿಸುವವರ ಬಗ್ಗೆ ಚುನಾವಣೆಗಳಲ್ಲಿ ಹೆಚ್ಚು ಚರ್ಚೆಯಾಗು ತ್ತಲೇ ಇರಲಿಲ್ಲ. ಆದರೆ ಡೊನಾಲ್ಡ್ ಟ್ರಂಪ್ ಕಳೆದ ಬಾರಿ ಈ ಭಾಗಗಳಿಗೆಲ್ಲ ತೆರಳಿ ಹೆಚ್ಚು ಪ್ರಚಾರ ನಡೆಸಿದ್ದರು.
ರಸ್ಟ್ ಬೆಲ್ಟ್ ರಾಜ್ಯ– ಇಂಡಿಯಾನಾ(ಟ್ರಂಪ್ ಗೆದ್ದಿದ್ದರು)
– ಇಲಿನಾಯ್ಸ (ಹಿಲರಿ)
– ಮಿಚಿಗನ್(ಟ್ರಂಪ್)
– ಮಿಸೌರಿ (ಟ್ರಂಪ್)
– ಒಹಾಯೋ (ಟ್ರಂಪ್)
– ಪೆನ್ಸಿಲ್ವೇನಿಯಾ (ಟ್ರಂಪ್)
– ಪಶ್ಚಿಮ ವರ್ಜೀನಿಯಾ(ಟ್ರಂಪ್)
– ವಿಸ್ಕಾನ್ಸಿನ್ (ಟ್ರಂಪ್) ಈ ಎಂಟು ರಾಜ್ಯಗಳಲ್ಲಿ ಎಲಕ್ಟೋರಲ್ ಮತಗಳ ಸಂಖ್ಯೆ 110 ಇದ್ದು, ಕಳೆದ ಚುನಾವಣೆಯಲ್ಲಿ ಟ್ರಂಪ್ 90 ಮತಗಳನ್ನು ಪಡೆದಿದ್ದರು. ರಸ್ಟ್ ಬೆಲ್ಟ್‌ಗಳಷ್ಟೇ ಅಲ್ಲದೇ, ಅಮೆರಿಕದಲ್ಲಿ ಬಡತನ ಅಧಿಕವಿರುವ ಇತರೆ ರಾಜ್ಯಗಳೂ ಇವೆ. ಉದಾಹರಣೆಗೆ ಕೆಂಟುಕಿ, ಲೂಸಿಯಾನಾ ಮತ್ತು ಅಲಬಾಮಾ. ಟ್ರಂಪ್ ಕಳೆದ ಬಾರಿ ಈ ಮೂರೂ ರಾಜ್ಯಗಳಲ್ಲೂ ಜಯಗಳಿಸಿದ್ದರು.