Advertisement

ಯಾರಿಟ್ಟರೀ ಚುಕ್ಕಿ? ಸೀರೆಗೆ, ಪರ್ಸಿಗೆ, ಛತ್ರಿಗೆ…

03:45 AM May 10, 2017 | |

ಪ್ಲೇನ್‌ ಕಲರಿನ ಬಟ್ಟೆಗಳ ಮೇಲೆ ಕೆಂಪು, ಕಪ್ಪು ಬಣ್ಣದ ಚುಕ್ಕೆಗಳು! ಹೆಸರು ಪೋಲ್ಕಾ ಡಾಟ್ಸ್‌ ಡ್ರೆಸ್‌. ಈ ದಿನಗಳ ಹೊಸ ಟ್ರೆಂಡ್‌ ಆಗಿರುವ ಪೋಲ್ಕಾ ಡಾಟ್ಸ್‌ ಡ್ರೆಸ್‌ಗೆ ದಶಕಗಳ ಇತಿಹಾಸವಿದೆ. ಸುರಸುಂದರಿಯರು ಅನ್ನಿಸಿಕೊಂಡಿದ್ದ ಮರ್ಲಿನ್‌ ಮನ್ರೊ ಹಾಗೂ ಜೂಲಿಯಾ ರಾಬರ್ಟ್ಸ್ ಕೂಡಾ ಪೋಲ್ಕಾ ಡ್ರೆಸ್‌ ಧರಿಸಿ ಮಿಂಚಿದ್ದರು!

Advertisement

1928 ರಲ್ಲಿ ಡಿಸ್ನಿ ಪಾತ್ರ ಮಿನ್ನಿ ಮೌಸ್‌ ಕೆಂಪು ಪೋಲ್ಕಾ ಡಾಟ್ಸ… ಡ್ರೆಸ್‌ ಮತ್ತು ಮ್ಯಾಚಿಂಗ್‌ ಬೋ ತೊಟ್ಟದ್ದೇ ತಡ, ಫ್ಯಾಷನ್‌ ಲೋಕಕ್ಕೆ ಈ ಚುಕ್ಕಿಗಳ ಬಟ್ಟೆ ಕಾಲಿಟ್ಟೇ ಬಿಟ್ಟಿತು. ಕ್ರಿಶ್ಚಿಯನ್‌ ಡಿಯೋರ್‌ನ ನ್ಯೂ ಲುಕ್‌ ಪ್ರಸಿದ್ಧಿ ಪಡೆಯಿತು. ಅದಾದ ನಂತರ 1951ರಲ್ಲಿ ಖ್ಯಾತ ಹಾಲಿವುಡ್‌ ನಟಿ ಮರ್ಲಿನ್‌ ಮನ್ರೊà ಪೋಲ್ಕಾ ಡಾಟ್ಸ… ಇರುವ ಈಜುಡುಗೆ ತೊಟ್ಟು ಛಾಯಾಚಿತ್ರಕಾರನ ಕಣ್ಣಿಗೆ ಬಿದ್ದು ಸುದ್ದಿ ಮಾಡಿದರು. ವರ್ಷಗಳ ಬಳಿಕ ಹಾಲಿವುಡ್‌ ಚಿತ್ರ “ಪ್ರಟಿ ವುಮನ್‌’ನಲ್ಲಿ ನಟಿ ಜೂಲಿಯಾ ರಾಬರ್ಟ್ಸ್ ಪೋಲ್ಕಾ ಕೂಡಾ ಡಾಟ್ಸ… ಡ್ರೆಸ್‌ ತೊಟ್ಟು ಕಾಣಿಸಿಕೊಂಡರು. ಆ ಮೂಲಕ ಈ ಉಡುಪನ್ನು ಎಲ್ಲ ಮಹಿಳೆಯರ ಅಚ್ಚು ಮೆಚ್ಚಿನ ಬಟ್ಟೆಯನ್ನಾಗಿಸಿಬಿಟ್ಟರು.

ಈ ಟ್ರೆಂಡ್‌ ಫೀನಿಕ… ಹಕ್ಕಿಯಂತೆ ಫ್ಯಾಷನ್‌ ಲೋಕದಲ್ಲಿ ಮತ್ತೆ ಮತ್ತೆ ತಲೆ ಎತ್ತುತ್ತಲೇ ಇದೆ.ಇದೀಗ 2017ರ ಸದ್ಯದ ಟ್ರೆಂಡ್‌ ಈ ಪೋಲ್ಕಾ ಡಾಟ್ಸ…. ಈ ಶೈಲಿಯ ಬಟ್ಟೆಯ ವೈಶಿಷ್ಟ್ಯ ಏನೆಂದರೆ ಯಾವುದೇ ಬಣ್ಣದ ಪ್ಲೇನ್‌ ಬಟ್ಟೆಯ ಮೇಲೆ ಕಪ್ಪು ಬಣ್ಣದ ದೊಡ್ಡ ದೊಡ್ಡ ಚುಕ್ಕಿಗಳಿದ್ದರೆ ಆಯಿತು. ವಸ್ತ್ರ ವಿನ್ಯಾಸಕರು ಬಣ್ಣ, ಆಕಾರ ಮತ್ತು ವಿನ್ಯಾಸಗಳ ಜೊತೆ ಪ್ರಯೋಗ ನಡೆಸುತ್ತ ಕಪ್ಪು ಬಣ್ಣದ ಬದಲಿಗೆ ಬೇರೆ ಬಣ್ಣಗಳ ಪೋಲ್ಕಾ ಡಾಟ… ಗಳನ್ನೂ ತಮ್ಮ ಉಡುಪಿನಲ್ಲಿ ಅಳವಡಿಸಿ¨ªಾರೆ. ಆದರೆ ಕಪ್ಪು ಮತ್ತು ಬಿಳುಪಿನ ಬಣ್ಣದ ಪೋಲ್ಕಾ ಡಾಟ್ಸ… ಎಂದಿಗೂ ಕ್ಲಾಸಿಕ್‌!

ಬೊಹೆಮಿಯಾದಲ್ಲಿ 19 ನೇ ಶತಮಾನದಲ್ಲಿ ಒಂದು ಜಾನಪದ ನೃತ್ಯ ಪ್ರಕಾರ ಹುಟ್ಟಿಕೊಂಡಿತು.ಅದುವೇ ಪೋಲ್ಕಾ ಡಾ®Õ…. ಈ ಸಂಗೀತ, ನೃತ್ಯ ಕಲೆ ಯುರೋಪ್‌, ಅಮೆರಿಕಾದಲ್ಲೆಡೆ ಹರಡಿದಾಗ ಇದರಲ್ಲಿ ಮತ್ತಷ್ಟು ಹೊಸ ಹೊಸ ಪ್ರಕಾರಗಳು ಹುಟ್ಟಿಕೊಂಡವು. ಫ್ಲಮೆಂಕೋ ನೃತ್ಯಗಾರರು ಪ್ರದರ್ಶನದ ವೇಳೆಯಲ್ಲಿ ಚುಕ್ಕಿಗಳಿರುವ ಬಟ್ಟೆಗಳನ್ನು ತೊಡುತ್ತಿದ್ದರು. ಇಂತಹ ಬಟ್ಟೆ ಉಟ್ಟು ಪೋಲ್ಕಾ ಡಾ… ಮಾಡುತ್ತಿದ್ದುದರಿಂದ ಈ ಬಟ್ಟೆಗೆ ಪೋಲ್ಕಾ ಡಾಟ್ಸ… ಡ್ರೆಸ್‌ ಎಂಬ ಹೆಸರು ಬಂತು.

ಕೆಲ ದಿನಗಳ ನಂತರ, ಈ ಚುಕ್ಕಿಗಳು ಕೇವಲ ಬಟ್ಟೆಗಳಿಗೆ ಸೀಮಿತವಾಗದೆ ಹ್ಯಾಟ…ಗಳು ಮತ್ತು ಜಾಕೆಟ…ಗಳಲ್ಲೂ ಕಾಣಿಸಿಕೊಳ್ಳಲು ಶುರುವಾದವು. ಹೀಗೆ ಪೋಲ್ಕಾ ಡಾಟ್ಸ… ರಿಬ್ಬನ್‌ಗಳಲ್ಲಿ,ನೆಲಹಾಸಿನಲ್ಲಿ, ಬೆಡ್‌ಶೀಟ… ಗಳಲ್ಲಿ ಬಳಸಲು ಶುರು ಮಾಡಿದ ಮೇಲೆ ಈ ಆಕಾರ ಒಂದು ಟ್ರೆಂಡೇ ಆಗಿ ಹೋಯಿತು! ಇಲ್ಲಿ ಕಾಣುವ ಒಂದು ವಿಶೇಷವನ್ನೂ ಹೇಳಿಬಿಡಬೇಕು. ಏನೆಂದರೆ- ಪೋಲ್ಕಾ ಡಾಟ್ಸ…ನಲ್ಲಿ ಕಾಣುವ ಪ್ರತಿ ಚುಕ್ಕಿಯೂ ಒಂದೇ ಆಕಾರದ್ದಾಗಿರುತ್ತದೆ. ಒಂದು ಚಿಕ್ಕದು,ಒಂದು ದೊಡ್ಡದಾಗಿರುವುದಿಲ್ಲ. ಮತ್ತು ಪ್ರತಿ ಚುಕ್ಕಿಯೂ ಇನ್ನೊಂದು ಚುಕ್ಕಿಯಿಂದ ಒಂದೇ ಅಳತೆಯ ದೂರದಲ್ಲಿರುತ್ತದೆ. ಹಾಗಾಗಿ ಈ ವಿನ್ಯಾಸ ಅಂದವಾಗಿ ಕಾಣುತ್ತದೆ.

Advertisement

ಚುಕ್ಕಿಗಳಿಂದಲೇ ತುಂಬಿ ಹೋಗಿರುವ ಈ ಬಟ್ಟೆಗೆ ಹೆಂಗಸರು ಆ ಪರಿಯಲ್ಲಿ ಮರುಳಾಗಿದ್ದೇಕೆ ಎಂಬ ಪ್ರಶ್ನೆಗೆ ಉತ್ತರದ ರೂಪದಲ್ಲಿ ಇನ್ನೂ ಒಂದು ಕಥೆಯಿದೆ. ಹಾತೆಗಳು ಬಟ್ಟೆಗಳಲ್ಲಿ ರಂಧ್ರ ಮಾಡಿದ್ದರೆ ಅವನ್ನು ಮುಚ್ಚಲು ಪೋಲ್ಕಾ ಡಾಟ್ಸ… ಅನ್ನು ಬಳಸಲು ಮಹಿಳೆಯರು ಮುಂದಾದರು.ಹೀಗಾಗಿ ಮಹಿಳೆಯರ ಉಡುಪಿನ ಅಂಗವಾಗಿಬಿಟ್ಟಿತು ಈ ಪೋಲ್ಕಾ ಡಾಟ… ವಿನ್ಯಾಸ. ಇದೀಗ ಡ್ರೆಸ್‌ ಮಾತ್ರವಲ್ಲದೆ ಪೋಲ್ಕಾ ಡಾಟ್ಸ…ನ ಸ್ಕಾಫ್ì, ದುಪಟ್ಟಾ, ಸೀರೆ, ರವಿಕೆ, ಕ್ರಾಪ್‌ ಟಾಪ್‌, ಲಂಗ, ಪ್ಯಾಂಟ…, ಶಾರ್ಟ್ಸ್, ಅಂಗಿ ಮತ್ತು ಕೋಟ…ಗಳೂ ಸಿಗುತ್ತವೆ. ಬ್ಯಾಗ್‌, ಪರ್ಸ್‌, ಸಾಕ…, ಶೂ, ಚಪ್ಪಲಿ ಹಾಗು ಛತ್ರಿಗಳ ಮೇಲೂ ಪೋಲ್ಕಾ ಡಾಟ್ಸ… ಅನ್ನು ನೀವು ನೋಡಬಹುದು. ಪೋಲ್ಕಾ ಡಾಟ್ಸ… ಫ್ಯಾಷನ್‌ನಿಂದ ಹೋದರೂ ಮತ್ತೆ ಬಂದೆ ಬರುತ್ತದೆ ಎಂಬುದು ಗೊತ್ತಿರುವ ಕಾರಣ ಕಪಾಟಿನಲ್ಲಿ ಪೋಲ್ಕಾ ಡಾಟ್ಸ… ಇರುವ ಉಡುಪುಗಳನ್ನು ಚಿಂತೆ ಇಲ್ಲದೆ ಇಟ್ಟುಕೊಳ್ಳಬಹುದು!

ಅದಿತಿಮಾನಸ ಟಿ. ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next