1996ರಲ್ಲಿ ವಿಶ್ವಾಸಮತ ಯಾಚನೆ ಚರ್ಚೆಯಲ್ಲಿ ಮಹಾಭಾರತ ಪ್ರಸ್ತಾಪ
ಅಧ್ಯಕ್ಷರೇ, ಬಹುಮತಕ್ಕೆ ನೀವು ಯಾವುದೇ ವ್ಯಾಖ್ಯಾನವನ್ನೂ ಸಮ್ಮತಿಸಬಹುದು. ಆದರೆ ಈ ಸದನದಲ್ಲಿ ಏನಾಗುತ್ತಿದೆ ಎಂಬುದನ್ನು ನಿರ್ಲಕ್ಷಿಸಲಾಗದು. ಮೊದಲು ಒಂದು ಪಕ್ಷದ ಸರ್ಕಾರ ಹಾಗೂ ಸಣ್ಣ ಸಣ್ಣ ವಿಪಕ್ಷಗಳು ಇರುತ್ತಿದ್ದವು. ಆದರೆ ಈಗ ನಮ್ಮಲ್ಲಿ ಸಣ್ಣ ಸಣ್ಣ ಪಕ್ಷಗಳ ಆಡಳಿತ ಹಾಗೂ ಒಂದು ಸಂಘಟಿತ ವಿಪಕ್ಷವಿದೆ. ಇದು ಜನರ ಬಹುಮತವನ್ನು ಹಾಡಹಗಲೇ ತಿರಸ್ಕರಿಸಿದಂತೆ ಕಾಣಿಸುತ್ತಿಲ್ಲವೇ?
Advertisement
ರಾಮ ಮತ್ತು ಯುಧಿಷ್ಟಿರರ ಆಡಳಿತದ ಹಕ್ಕನ್ನು ಮಂಥರೆ ಮತ್ತು ಶಕುನಿ ಕಸಿದುಕೊಳ್ಳಬಹುದಾದರೆ, ಈ ಸದನವನ್ನು ನೋಡಿ. ಇಲ್ಲಿ ಹಲವು ಮಂಥರೆ ಮತ್ತು ಶಕುನಿಯರಿದ್ದಾರೆ. ಹೀಗಿದ್ದಾಗ ನಾವು ಅಧಿಕಾರದಲ್ಲಿರುವುದು ಹೇಗೆ? ಈ ಅವಿಶ್ವಾಸಮತ ಯಾಚನೆಯು ರಾಮರಾಜ್ಯ ಮತ್ತು ಸುರಾಜ್ಯದ ರೀತಿ ಎಂದು ನಾನು ನೋಡುತ್ತೇನೆ. ನಾವು ಸಂಪ್ರದಾಯವಾದಿಗಳು, ಯಾಕೆಂದರೆ ನಾವು ವಂದೇ ಮಾತರಂ ಎಂದು ಹೇಳುತ್ತೇವೆ, ನಾವು ಸಂಪ್ರದಾಯವಾದಿಗಳು, ಯಾಕೆಂದರೆ ನಾವು ನಮ್ಮ ರಾಷ್ಟ್ರಧ್ವಜವನ್ನು ಗೌರವಿಸುತ್ತೇವೆ, ನಾವು ಸಂಪ್ರದಾಯವಾದಿಗಳು, ಯಾಕೆಂದರೆ ನಾವು 370 ಅನ್ನು ತೆಗೆದುಹಾಕಲು ಬಯಸುತ್ತೇವೆ, ನಾವು ಸಂಪ್ರದಾಯವಾದಿಗಳು, ಯಾಕೆಂದರೆ ಜಾತಿ ಮತ್ತು ಜನಾಂಗದ ಆಧಾರದ ಮೇಲೆ ತಾರತಮ್ಯಕ್ಕೆ ಕೊನೆ ಹಾಡಲು ಬಯಸುತ್ತೇವೆ, ನಾವು ಸಂಪ್ರದಾಯವಾದಿಗಳು ಯಾಕೆಂದರೆ ಸಮಾನ ನಾಗರಿಕ ಸಂಹಿತೆಯನ್ನು ದೇಶದಲ್ಲಿ ಜಾರಿಗೊಳಿಸಲು ಬಯಸುತ್ತೇವೆ.
ಮನಮೋಹನ ಸಿಂಗ್‌ಗೆ ಕಾವ್ಯಬಾಣ!
2013ರಲ್ಲಿ ಯುಪಿಎ ಕಾಲದ ಹಗರಣಗಳ ಬಗ್ಗೆ ಲೋಕಸಭೆಯಲ್ಲಿ ಮಾತನಾಡುವಾಗ ಸುಷ್ಮಾ ಹಾಗೂ ಆಗಿನ ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ಘಾಲಿಬ್‌ರ ಕವನದ ಮೂಲಕವೇ ತಿರುಗೇಟು ನೀಡಿದ್ದರು.

ಲಲಿತ್ ಮೋದಿ ಪ್ರಕರಣದಲ್ಲಿ ಸಮರ್ಥನೆ
ಸುಷ್ಮಾ ಸಚಿವೆಯಾಗಿ ನರೇಂದ್ರ ಮೋದಿ ಸಂಪುಟಕ್ಕೆ ಸೇರುತ್ತಿದ್ದಂತೆಯೇ ಐಪಿಎಲ್ನ ಮಾಜಿ ಮುಖ್ಯಸ್ಥ ಲಲಿತ್ ಮೋದಿಗೆ ವಿದೇಶಕ್ಕೆ ಪರಾರಿಯಾಗಲು ಸಹಕರಿಸಿದ್ದಾರೆ ಎಂಬ ಆರೋಪ ಕೇಳಿಬಂತು. ಆಗ ಸಂಸತ್ತಿನಲ್ಲಿ ಮಾತನಾಡಿದ ಸುಷ್ಮಾ ‘ಲಲಿತ್ ಮೋದಿ ವಿದೇಶಕ್ಕೆ ಪ್ರಯಾಣಿಸಲು ಅನುಕೂಲ ಮಾಡಿಕೊಡುವಂತೆ ಬ್ರಿಟಿಷ್ ಪ್ರಾಧಿಕಾರಕ್ಕೆ ಯಾವುದೇ ವಿನಂತಿಯನ್ನಾಗಲೀ ಶಿಫಾರಸನ್ನಾಗಲೀ ಮಾಡಿಲ್ಲ. ಲಲಿತ್ ಮೋದಿಯ ಅನಾರೋಗ್ಯಕ್ಕೊಳಗಾಗಿರುವ ಪತ್ನಿಗೆ ಕೇವಲ ಶುದ್ಧ ಮಾನವೀಯ ನೆಲೆಯಲ್ಲಿ ಸಹಾಯ ಮಾಡಿದ್ದೇನೆ. ನನ್ನ ಸ್ಥಾನದಲ್ಲಿ ನೀವು ಇದ್ದರೆ ಏನು ಮಾಡುತ್ತಿದ್ದಿರಿ ಎಂದು ನಾನು ಕೇಳುತ್ತೇನೆ. ನನ್ನ ಸ್ಥಾನದಲ್ಲಿದ್ದರೆ ಸೋನಿಯಾ ಗಾಂಧಿ ಏನು ಮಾಡುತ್ತಿದ್ದರು? ಲಲಿತ್ ಮೋದಿ ಪತ್ನಿ ಸಾವನ್ನಪ್ಪಲು ಬಿಡುತ್ತಿದ್ದಿರೇ? ಒಬ್ಬ ಮಹಿಳೆಗೆ ಸಹಾಯ ಮಾಡುವುದು ಅಪರಾಧವಾದರೆ ನಾನು ಈ ಅಪರಾಧ ಮಾಡಿದ್ದೇನೆ ಎಂದು ಒಪ್ಪಿಕೊಳ್ಳುತ್ತೇನೆ, ಈ ಸದನದಲ್ಲಿ ನಿಂತು ನಾನು ಅಪರಾಧ ಮಾಡಿದ್ದೇನೆ ಎಂದು ಇಡೀ ದೇಶಕ್ಕೆ ಹೇಳುತ್ತೇನೆ. ಈ ಸದನ ನನಗೆ ನೀಡುವ ಯಾವುದೇ ಶಿಕ್ಷೆಯನ್ನೂ ಸ್ವೀಕರಿಸಲು ನಾನು ಸಿದ್ಧಳಿದ್ದೇನೆ’ ಎಂದಿದ್ದರು.

ಕುಲಭೂಷಣ ಜಾಧವ್ ಪ್ರಕರಣದಲ್ಲಿ ಅಪ್ರತಿಮ ಸಮರ್ಥನೆ
ಮೋದಿ ಸರ್ಕಾರದಲ್ಲಿ ವಿದೇಶಾಂಗ ಸಚಿವೆಯಾಗಿದ್ದಾಗ ಪಾಕಿಸ್ತಾನದಲ್ಲಿ ಬಂಧಿತ ಕುಲಭೂಷಣ್ ಜಾಧವ್ ಪ್ರಕರಣವನ್ನು ಹಲವು ಬಾರಿ ವಿವಿಧ ಸನ್ನಿವೇಶದಲ್ಲಿ ಪ್ರಸ್ತಾಪಿಸಿದ್ದರು ಸುಷ್ಮಾ. ಜಾಧವ್ ಗಲ್ಲು ಶಿಕ್ಷೆಯನ್ನು ಜಾರಿಗೊಳಿಸಿದರೆ ಅದನ್ನು ಕೊಲೆ ಎಂದು ಪರಿಗಣಿಸಲಾಗುತ್ತದೆ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆಯನ್ನೂ ಅವರು ನೀಡಿದ್ದರು. ಅಲ್ಲದೆ, ಜಾಧವ್ ಪತ್ನಿ ಮತ್ತು ತಾಯಿಗೆ ಭೇಟಿ ಮಾಡುವ ಅವಕಾಶವನ್ನೂ ಅವರು ಒದಗಿಸಿದ್ದರು. ಆದರೆ ಜಾಧವ್ ಪತ್ನಿ ಮತ್ತು ತಾಯಿಯನ್ನು ಸರಿಯಾಗಿ ನಡೆಸಿಕೊಳ್ಳದ್ದಕ್ಕೆ ಪಾಕಿಸ್ತಾನವನ್ನು ಖಂಡಿಸಿದ್ದರು.ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಕರೆದಿದ್ದರು.

Related Articles
ವಿಶ್ವವೇ ಮೆಚ್ಚಿದ ಟೀಕೆ
2018ರಲ್ಲಿ 73ನೇ ವಿಶ್ವಸಂಸ್ಥೆ ಅಧಿವೇಶನದಲ್ಲಿ ಪಾಕಿಸ್ತಾನದ ವಿರುದ್ಧ ಸುಷ್ಮಾ ವಾಗ್ಧಾಳಿ ಭಾರಿ ಜನಪ್ರಿಯವಾಗಿತ್ತು. ಮಾತುಕತೆ ಮತ್ತು ಭಯೋತ್ಪಾದನೆಗಳೆರಡೂ ಒಟ್ಟಿಗೆ ಸಾಗುವುದಿಲ್ಲ ಎಂಬ ಭಾರತದ ನಿಲುವನ್ನು ಸ್ಪಷ್ಟಪಡಿಸಿದ ಅವರು, ಹೇಳುವುದೊಂದು ಮಾಡುವುದೊಂದು ನೀತಿಯನ್ನು ಅನುಸರಿಸುವಲ್ಲಿ ಪಾಕಿಸ್ತಾನ ಪರಿಣಿತಿ ಸಾಧಿಸಿದೆ ಎಂದು ಟೀಕಿಸಿದ್ದರು.

ನಮ್ಮಲ್ಲಿ ಉಗ್ರವಾದ ಎಂಬುದು ದೂರದಲ್ಲೆಲ್ಲೋ ಇಲ್ಲ, ಇದು ನಮ್ಮ ಗಡಿಯಲ್ಲೇ ಇದೆ. ನಮ್ಮ ನೆರೆಯವರು ಕೇವಲ ಉಗ್ರವಾದವನ್ನು ಪೋಷಿಸುವುದರಲ್ಲಿ ಪರಿಣಿತಿ ಹೊಂದಿಲ್ಲ, ಬದಲಿಗೆ ಮಾತು ಮತ್ತು ಕೃತ್ಯದಲ್ಲಿ ಅಂತರವನ್ನು ಕಾಯ್ದುಕೊಳ್ಳುವುದರಲ್ಲೂ ಪರಿಣಿತರಾಗಿದ್ದಾರೆ ಎಂದಿದ್ದರು.
ಇನ್ನು 2017 ರಲ್ಲಿ ಅವರ ವಿಶ್ವಸಂಸ್ಥೆಯ ಭಾಷಣದಲ್ಲಿನ ಹೇಳಿಕೆಯಂತೂ ಪಾಕಿಸ್ತಾನದ ಅಸ್ತಿತ್ವವನ್ನೇ ಪ್ರಶ್ನಿಸಿತ್ತು. ಭಾರತವು ಐಐಎಂಗಳು, ಏಮ್ಸ್‌ಗಳು ಮತ್ತು ಐಐಟಿಗಳನ್ನು ಸ್ಥಾಪಿಸಿ ವೈದ್ಯರು, ಇಂಜಿನಿಯರುಗಳನ್ನು ಸೃಷ್ಟಿಸಿದೆ. ಆದರೆ ಪಾಕಿಸ್ತಾನ ಏನು ಸೃಷ್ಟಿಸಿದೆ? ಕೇವಲ ಉಗ್ರಗಾಮಿಗಳು ಹಾಗೂ ಉಗ್ರರ ಕ್ಯಾಂಪ್‌ಗ್ಳನ್ನು ಸೃಷ್ಟಿಸಿದೆ ಎಂದಿದ್ದರು.