Advertisement

Leader of Opposition;ಅರ್ಜಿ ಸಲ್ಲಿಸಿಲ್ಲ,ಅಂತಹ ಸಂಸ್ಕೃತಿ ನಮ್ಮಲ್ಲಿಲ್ಲ:ಆರ್.ಅಶೋಕ್

08:17 PM Nov 16, 2023 | Team Udayavani |

ಬೆಂಗಳೂರು: ”ವಿಧಾನಸಭೆಯ ವಿಪಕ್ಷ ನಾಯಕನ ಸ್ಥಾನಕ್ಕೆ ನಾವೇನೂ ಅರ್ಜಿ ಸಲ್ಲಿಸಿಲ್ಲ, ಅಂತಹ ಸಂಸ್ಕೃತಿ ನಮ್ಮ ಪಕ್ಷದಲ್ಲಿ ಇಲ್ಲ. ಪಕ್ಷ ನಿರ್ಧರಿಸಿವರಿಗೆ ಆ ಹುದ್ದೆ ಸಿಗುತ್ತದೆ”ಎಂದು ಬಿಜೆಪಿಯ ಹಿರಿಯ ಶಾಸಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ ಅವರು ಗುರುವಾರ ಹೇಳಿಕೆ ನೀಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ”ಬಿಜೆಪಿ ರಾಜ್ಯಾ ಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಅವರ ನೇಮಕಾತಿಯನ್ನು ಹೇಗೆ ಘೋಷಿಸಲಾಯಿತು ಎಂದು ನಿಮಗೆ ತಿಳಿದಿದೆ, ಅದೇ ರೀತಿ ವಿರೋಧ ಪಕ್ಷದ ನಾಯಕ ಕೂಡ ಒಂದು ಪ್ರಮುಖ ಹುದ್ದೆಯಾಗಿದೆ, ಏಕೆಂದರೆ ಒಬ್ಬರು ವಿಧಾನಸಭೆಯ ಒಳಗೆ ಮತ್ತು ಹೊರಗೆ ಪಕ್ಷದ ಬೂತ್ ಅನ್ನು ಮುನ್ನಡೆಸಬೇಕಾಗುತ್ತದೆ. ಇದೆಲ್ಲವನ್ನೂ ಗಣನೆಗೆ ತೆಗೆದುಕೊಂಡು ನಾಳೆ ನಡೆಯುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೇಂದ್ರ ವೀಕ್ಷಕರ ಸಮ್ಮುಖದಲ್ಲಿ ನಾಯಕನನ್ನು ಘೋಷಿಸಲಾಗುವುದು” ಎಂದರು.

”ನಾನು ಸೇರಿದಂತೆ ನಾಲ್ಕೈದು ಮಂದಿ ಆಕಾಂಕ್ಷಿಗಳಿದ್ದೇವೆ. ನಮ್ಮ ಏಕೈಕ ಉದ್ದೇಶವೆಂದರೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು, ಆದ್ದರಿಂದ ಯಾವುದೇ ಗೊಂದಲ ಅಥವಾ ಅಡೆತಡೆಗಳಿಲ್ಲದೆ ಹೊಸ ನಾಯಕನನ್ನು ಆಯ್ಕೆ ಮಾಡಲಾಗುವುದು. ನಾನು ನಿನ್ನೆ ವಿ.ಸುನೀಲ್ ಕುಮಾರ್, ಸಿ.ಎನ್.ಅಶ್ವಥ್ ನಾರಾಯಣ್ ಅವರೊಂದಿಗೆ ಮಾತನಾಡಿದ್ದೇನೆ. ಯಾರೇ ನಾಯಕರಾಗಲಿ, ಅಭ್ಯಂತರವಿಲ್ಲ. ಪಕ್ಷ ಬಲಾಢ್ಯವಾಗಿದ್ದು, ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ – ಎಂಬುದೇ ನಮ್ಮ ಘೋಷಣೆ” ಎಂದರು.

ಜುಲೈನಲ್ಲಿ ವಿಧಾನಸಭೆ ಅಧಿವೇಶನ ವಿರೋಧ ಪಕ್ಷದ ನಾಯಕನಿಲ್ಲದೇ ನಡೆದಿತ್ತು. ಇದು ಬಿಜೆಪಿಗೆ ತೀವ್ರ ಮುಜುಗರಕ್ಕೂ ಕಾರಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next