Advertisement
ವಿಪಕ್ಷ ಗಳ ಲೆಕ್ಕಾಚಾರ ಕೆಳಗೆಈಗಿನ ಫಲಿತಾಂಶ ಬಿಜೆಪಿಗೆ ಲಾಭ ತಂದುಕೊಟ್ಟಿದೆ ಎಂಬುದರಲ್ಲಿ ಸಂಶಯವಿಲ್ಲ. ಆದರೆ, ವಿಪ ಕ್ಷಗಳ ಯೋಜನೆಗೆ ಶಾಕ್ ನೀಡಿದೆ. ಈಗಾಗಲೇ ಟಿಆರ್ ಎಸ್ ನಾಯಕ ಮತ್ತು ತೆಲಂಗಾಣ ಸಿಎಂ ಕೆ.ಸಿ. ಚಂದ್ರಶೇಖರ ರಾವ್ ಅವರು, ವಿಪಕ್ಷ ನಾಯಕರ ಭೇಟಿ ಮಾಡಿ, ವಿಪಕ್ಷಗಳ ಕಡೆ ಯಿಂದ ಶರದ್ ಪವಾರ್ ಅವರನ್ನು ರಾಷ್ಟ್ರಪತಿ ಚುನಾವಣೆಯಲ್ಲಿ ಕಣಕ್ಕಿಳಿಸಲು ಪ್ಲ್ಯಾನ್ ಮಾಡಿ ದ್ದರು. ಒಂದೊಮ್ಮೆ ಉತ್ತರ ಪ್ರದೇಶದಲ್ಲಿ ಅಖೀಲೇಶ್ ಕೈ ಮೇಲಾದರೆ, ಯತ್ನಿಸಬಹುದು ಎಂಬುದು ಅವರ ಲೆಕ್ಕಾಚಾರವಾಗಿತ್ತು. ಹಾಗೆಯೇ, ಜೆಡಿಯು ನಾಯಕ ನಿತೀಶ್ ಕುಮಾರ್‌ರನ್ನು ಎನ್ ಡಿಎಯಿಂದ ಬೇರ್ಪಡಿಸಿ, ಚುನಾವಣೆಗೆ ನಿಲ್ಲಿಸುವ ಪ್ರಯತ್ನಗಳೂ ನಡೆದಿದ್ದವು. ನಿತೀಶ್ ಒಪ್ಪಿರಲಿಲ್ಲ.
ಇಡೀ ದೇಶದಲ್ಲಿ ಉತ್ತರ ಪ್ರದೇಶ ಅತ್ಯಂತ ದೊಡ್ಡ ರಾಜ್ಯ. ಹೀಗಾಗಿ ಇಲ್ಲಿನ ಪ್ರತಿಯೊಬ್ಬ ಶಾಸ ಕನ ಮತ ಮೌಲ್ಯ 208 ಇದೆ. ಪಂಜಾಬ್‌ನ ಮತ ಮೌಲ್ಯ 116, ಉತ್ತರಾಖಂಡ 64, ಗೋವಾ 20 ಮತ್ತು ಮಣಿಪುರದ್ದು 18 ಇದೆ. ಕಳೆದ ಬಾರಿ ಉತ್ತರ ಪ್ರದೇಶದಲ್ಲಿ 300ಕ್ಕೂ ಹೆಚ್ಚು ಶಾಸಕರನ್ನು ಹೊಂದಿದ್ದ ಬಿಜೆಪಿ, ಅತ್ಯಂತ ಸಲೀಸಾಗಿ ರಾಮನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿ ಹುದ್ದೆಗೆ ಆರಿಸಿತ್ತು. ಈ ಬಾರಿ ಉತ್ತರ ಪ್ರದೇಶದಲ್ಲಿ ಕೊಂಚ ಕಡಿಮೆಯಾಗಿದ್ದರೂ ಬೇಕಾದ ಮತ ಪಡೆಯುವುದಕ್ಕೆ ತೊಂದರೆಗಳಾಗುವುದಿಲ್ಲ ಎಂದೇ ವಿಶ್ಲೇಷಿಸಲಾಗಿದೆ. ಶೇ.50ಕ್ಕಿಂತ ಹೆಚ್ಚು ಮತ
ರಾಷ್ಟ್ರಪತಿಗಳನ್ನು ಆಯ್ಕೆ ಮಾಡಲು ಒಂದು ಎಲೆಕ್ಟೋರಲ್ ಕಾಲೇಜು ಇರುತ್ತದೆ. ಇದರ ಒಟ್ಟಾರೆ ಮತ 10,98,903 ಇದೆ. ಇದರಲ್ಲಿ 776 ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು, 4,120 ಶಾಸಕರು ಇರುತ್ತಾರೆ. ಸಂಸದರ ಮತ ಮೌಲ್ಯ 708. ಅದೇ ಶಾಸಕರ ಮತ ಮೌಲ್ಯ ಆಯಾ ರಾಜ್ಯಗಳ ಭೌಗೋಳಿಕ ಸನ್ನಿವೇಶಕ್ಕೆ ತಕ್ಕಂತೆ ಬೇರೆ ಬೇರೆಯಾಗಿರುತ್ತದೆ. ಬಿಜೆಪಿ ಅರ್ಧಕ್ಕಿಂತ ಹೆಚ್ಚು ಮತ ಇರಿಸಿಕೊಂಡಿದೆ.
Related Articles
ಹಿಂದಿನ ರಾಷ್ಟ್ರಪತಿ ಚುನಾವಣೆಯಂತೆ ಈಗಲೂ ಅಷ್ಟೇ ಕೂತುಹಲ ಎಲ್ಲರಲ್ಲಿ ಇದೆ. ಕೋವಿಂದ್ ಅವರ ಹೆಸರನ್ನೂ ಅಚ್ಚರಿಯ ರೀತಿ ಘೋಷಿಸಲಾಗಿತ್ತು. ವೆಂಕಯ್ಯ ನಾಯ್ಡು ಹೆಸರಿದೆಯಾದರೂ ಇನ್ನೂ ಖಚಿತವಾಗಿಲ್ಲ.
Advertisement