ಬೆಂಗಳೂರು: ಬಹಳ ದಿನಗಳಿಂದ ರಾಜ್ಯ ರಾಜಕೀಯದಲ್ಲಿ ಎದ್ದಿದ್ದ ಕುತೂಹಲಕ್ಕೆ ಇಂದು ತೆರೆ ಬಿದಿದ್ದು, ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ.
ಯಡಿಯೂರಪ್ಪ ರಾಜೀನಾಮೆ ನೀಡುತ್ತಿದ್ದಂತೆ ತೆರೆ ಮರೆಯಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು, ಕರ್ನಾಟಕದ ಮುಂದಿನ ಸಿಎಂ ಯಾರಾಗಲಿದ್ದಾರೆ ಎನ್ನುವ ಕುತೂಹಲ ಭರಿತ ಪ್ರಶ್ನೆಗಳು ರಾಜ್ಯದ ಜನತೆಯಲ್ಲಿ ಹುಟ್ಟಿಕೊಟ್ಟಿದೆ.
ಸಿಎಂ ರೇಸ್ ನಲ್ಲಿರುವವರು ಯಾರು ?
ಸಿಎಂ ಬದಲಾವಣೆಯ ಸಾದ್ಯತೆಯ ಸುದ್ದಿ ಕೇಳಿ ಬಂದಾಗಿನಿಂದಲೂ ಕೆಲವೊಂದು ಹೆಸರುಗಳು ಮುನ್ನೆಲೆ ಬಂದಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಮುಖ್ಯಮಂತ್ರಿ ಹುದ್ದೆಯ ರೇಸ್ ನಲ್ಲಿರುವ ಪ್ರಮುಖರ ಹೆಸರುಗಳು ಇಂತಿವೆ ನೋಡಿ…
- ಗೃಹ ಸಚಿವ ಬಸವರಾಜ್ ಬೊಮ್ಮಾಯಿ
- ಸಚಿವ ಮುರುಗೇಶ್ ನಿರಾಣಿ
- ಶಾಸಕ ಅರವಿಂದ್ ಬೆಲ್ಲದ
- ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ
- ಉಪಮುಖ್ಯಮಂತ್ರಿ ಸಿಎನ್ ಅಶ್ವಥ್ ನಾರಾಯಣ
- ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
- ಆರ್ ಎಸ್ ಎಸ್ ಮುಖಂಡ ಬಿ.ಎಲ್ ಸಂತೋಷ
- ಸಚಿವ ಜಗದೀಶ್ ಶೆಟ್ಟರ್,
ಈ ಮೇಲಿನ ನಾಯಕರಲ್ಲಿ ಯಾರಿಗೆ ಅದೃಷ್ಟ ಖುಲಾಯಿಸುತ್ತದೆಯೋ ಎಂಬುದು ಇದುವರೆಗೆ ರಹಸ್ಯವಾಗಿಯೆ ಉಳಿದಿದೆ. ಬಿಜೆಪಿ ಹೈ ಕಮಾಂಡ್ ಕರ್ನಾಟಕಕ್ಕೆ ಮುಂದಿನ ಮುಖ್ಯಮಂತ್ರಿ ನೇಮಕ ಮಾಡಲಿದ್ದು, ಅಚ್ಚರಿ ಎನ್ನುವಂತೆ ಮೇಲಿನ ಪಟ್ಟಿಯಲ್ಲಿರದ ಹೆಸರು ಕೂಡ ಅಂತಿಮವಾಗಬಲ್ಲದು ಎನ್ನುತ್ತಾರೆ ರಾಜಕೀಯ ಪಂಡಿತರು.