Advertisement

ಕೋವಿಡ್ ಲಸಿಕೆಗೆ ಅನುಮತಿ;DCGI ನಿರ್ಧಾರವನ್ನು ಸ್ವಾಗತಿಸಿ, ಇದೊಂದು ಐತಿಹಾಸಿಕ ಕ್ಷಣ ಎಂದ WHO

06:40 PM Jan 03, 2021 | Team Udayavani |

ಜಿನೆವಾ : ಭಾರತದಲ್ಲಿ ಸ್ವದೇಶಿಯವಾಗಿ ತಯಾರಿಸಲಾಗಿರುವ ಎರಡು ಕೋವಿಡ್ ಲಸಿಕೆಗಳ ತುರ್ತು ಬಳಕೆಗೆ  ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮತಿ ನೀಡಿರುವುದನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಸ್ವಾಗತಿಸಿದೆ.

Advertisement

ಭಾರತದ ಆಕ್ಸ್ ಫರ್ಡ್- ಆಸ್ಟ್ರಾಜನಿಕಾ ಕೋವಿಡ್ ಲಸಿಕೆ ಹಾಗೂ ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ ಲಸಿಕೆಗಳ ಸಾರ್ವತ್ರಿಕ ತುರ್ತು ಬಳಕೆಗೆ ಅನುಮತಿಯನ್ನು ನೀಡಿರುವ ಡಿಸಿಜಿಐ ನಿರ್ಧಾರ ಸ್ವಾಗತರ್ಹವಾದದ್ದು. ವಿಶ್ವವನ್ನು ಕಾಡುತ್ತಿರುವ ಕೋವಿಡ್ ಮಹಾಮಾರಿಯನ್ನು ಹೊಡೆದೋಡಿಸುವಲ್ಲಿ ಇದು ಒಂದು ಮಹತ್ವದ ತೀರ್ಮಾನವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸಂತಸ ವ್ಯಕ್ತಪಡಿಸಿದೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ   ಏಷ್ಯಾ ಪ್ರದೇಶದ ಪ್ರಾದೇಶಿಕ ನಿರ್ದೇಶಕ ಡಾ. ಪೂನಂ ಖೇತ್ರಪಾಲ್ ಸಿಂಗ್ ಅವರು, ಭಾರತದ ಈ ನಿರ್ಧಾರವನ್ನು ಐತಿಹಾಸಿಕ ಕ್ಷಣ ಎಂದಿದ್ದು, ಇದನ್ನು WHO  ಸ್ವಾಗತಿಸುತ್ತದೆ ಎಂದಿದ್ದಾರೆ.

ಇದನ್ನೂ ಓದಿ:ಮನಾಲಿ: ಹಿಮಪಾತದಲ್ಲಿ ಸಿಲುಕಿದ 500ಕ್ಕೂ ಅಧಿಕ ಪ್ರವಾಸಿಗರು; ಸ್ಥಳಕ್ಕೆ ಧಾವಿಸಿದ ರಕ್ಷಣಾತಂಡ

ಭಾರತದಂತಹ ದೊಡ್ಡ ದೇಶದಲ್ಲಿ ಈ ಲಸಿಕೆಯನ್ನು ಜನರಿಗೆ ಒದಗಿಸುವುದು ಒಂದು ಸವಾಲಿನ ವಿಚಾರವಾದ್ದು, ಈ ಸವಾಲನ್ನು  ಕೆಂದ್ರ ಸರ್ಕಾರ ಯಶಸ್ವಿಯಾಗಿ ನಿರ್ವಹಿಸಲಿದೆ ಎಂದು ಡಾ, ಪೂನಂ ಖೇತ್ರಪಾಲ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಇದನ್ನೂ ಓದಿ:ಮೆಲ್ಬರ್ನ್: ಮಳೆಗೆ ಬಲಿಯಾದ ಭಾರತದ ಅಭ್ಯಾಸ ಅವಧಿ

ಡಿಸಿಜಿಐನ ಈ ನಿರ್ಧಾರವನ್ನು ಸೆಂಟ್ರಲ್ ಡ್ರಗ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್ (CDSCO) ಕಮಿಟಿ ಕೂಡ ಸ್ವಾಗತಿಸಿದ್ದು, ಇವು ಸುರಕ್ಷಿತವಾದ ಲಸಿಕೆಗಳಾಗಿದೆ. ಆದರೆ ಸಣ್ಣ ಪ್ರಮಾಣದ ಜ್ವರ, ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next