ಜಿನೇವಾ : ಇನ್ಮುಂದೆ ಜಗತ್ತಿನಾದ್ಯಂತ ಮಾರುಕಟ್ಟೆಗಳ್ಲಲಿ ಯಾವುದೇ ಕಾಡು ಪ್ರಾಣಿಗಳನ್ನು ಮಾರಾಟ ಮಾಡುವಂತಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಆದೇಶ ಹೊರಡಿಸಿದೆ. ಅದರಲ್ಲೂ ವಿಶೇಷವಾಗಿ ಸಸ್ತನಿಗಳನ್ನು ಮಾರಾಟ ಮಾಡುವಂತಿಲ್ಲ ಎಂದು ತಿಳಿಸಿದೆ.
ಕೆಲವೊಂದು ದೇಶಗಳಲ್ಲಿ ಜನ ಸಾಮಾನ್ಯರಿಗೆ ನಿತ್ಯ ಅಗತ್ಯವಿರುವ ಆಹಾರ ಪಧಾರ್ಥಗಳನ್ನು ಪೂರೈಸುವ ಮಾರುಕಟ್ಟೆ ಪ್ರದೇಶಗಳಲ್ಲಿ ಕೆಲಸ ನಿರ್ವಹಿಸುವ ಜನರು ಕೂಡ ತಮ್ಮ ಆರೋಗ್ಯದ ಬಗ್ಗೆ ಗಮದಲ್ಲಿಟ್ಟುಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಓದಿ : ಇಂದಿನಿಂದ ಒನ್ ಪ್ಲಸ್ 9 ಮತ್ತು ಒನ್ ಪ್ಲಸ್ 9 ಆರ್ ಭಾರತದಲ್ಲಿ ಲಭ್ಯ..!
ಕಳೆದ ಬಾರಿ ಇಡೀ ವಿಶ್ವವನ್ನೇ ಅಡಿಮೇಲಾಗಿ ಮಾಡಿದ ಚಿನಾದ ವುಹಾನ್ ನಗರದಲ್ಲಿ ಮಾರಾಟವಾದ ಬಾವಲಿಯ ಕಾರಣದಿಂದಲೇ ಕೋವಿಡ್ ಸೋಂಕು ಜಗತ್ತಿನೆಲ್ಲೆಡೆ ಹರಡುವುದಕ್ಕೆ ಸಾಧ್ಯವಾಯಿತು ಎಂದು ಇಂದಿಗೂ ಜಗತ್ತು ನಂಬಿಕೊಂಡಿದೆ. ಆ ಹಿನ್ನಲೆಯಲ್ಲಿ ವಿಶ್ವದ ಯಾವುದೇ ಮಾರುಕಟ್ಟೆಯಲ್ಲಿ ಜೀವಂತ ಸಸ್ತನಿಗಳನ್ನು ಮಾರಾಟ ಮಾಡುವಂತಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಈ ಆದೇಶವನ್ನು ಹೊರಡಿಸಿದೆ.
ವಿಶ್ವ ಪ್ರಾಣಿಗಳ ಆರೋಗ್ಯ ಸಂಸ್ಥೆ (ಒಐಇ – World Organisation for Animal Health) ಮತ್ತು ವಿಶ್ವ ಸಂಸ್ಥೆಯ ಪರಿಸರ ಕಾರ್ಯಕ್ರಮ (ಯು ಎನ್ ಇ ಪಿ – United Nations Environment Programme ) ನಡುವೆ ನಡೆದ ವಿಶೇಷ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅಂತರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
“ಜಗತ್ತಿನ ಯಾವುದೇ ದೇಶದಲ್ಲಿ ಸೆರೆಹಿಡಿದ ಜೀವಂತ ಕಾಡು ಸಸ್ತನಿಗಳ ಮಾರಾಟವನ್ನು ತುರ್ತು ಕ್ರಮವಾಗಿ ಆಹಾರ ಮಾರುಕಟ್ಟೆಗಳಲ್ಲಿ ಸ್ಥಗಿತಗೊಳಿಸಬೇಕೆಂದು ತಿಳಿಸಿದೆ.
ಪ್ರಾಣಿಗಳು, ಅದರಲ್ಲೂ ಕಾಡು ಪ್ರಾಣಿಗಳು, ಸಸ್ತನಿಗಳು ಮಾನವರಲ್ಲಿ ಕಾಣಿಸಿಕೊಳ್ಳುವ ಸಾಂಕ್ರಾಮಿಕ ಕಾಯಿಲೆಗಳಿಗೆ 70 ಪ್ರತಿಶತಕ್ಕಿಂತಲೂ ಹೆಚ್ಚು ಮೂಲ ಕಾರಣವಾಗಿವೆ. ಕಾಡು ಸಸ್ತನಿಗಳು, ಹೊಸ ರೋಗಗಳು ಹುಟ್ಟಿಕೊಳ್ಳುವುದಕ್ಕೆ ಕಾರಣವಾಗುತ್ತವೆ, ಎಂದು ಹೇಳಿದೆ.
ಓದಿ : ಎಕ್ಕೂರು: ಲಾರಿಗೆ ಢಿಕ್ಕಿ ಹೊಡೆದು ರಸ್ತೆಗೆ ಬಿದ್ದ ಸ್ಕೂಟರ್ ಸವಾರನ ಮೇಲೆ ಹರಿದ ಬಸ್!