Advertisement
ಹಾಗಾಗಿ, ಇದೇ ಮೊದಲ ಸಲ ಗಾಯಗೊಂಡು ಹೊರ ನಡೆದ ಕ್ರಿಕೆಟಿಗನಿಗೆ ಪರ್ಯಾಯವಾಗಿ ಬದಲಿ ಆಟಗಾರನಿಗೆ ಆಡುವ ಅವಕಾಶ ನೀಡುವ ಬಗ್ಗೆ ಐಸಿಸಿ ಚಿಂತನೆ ನಡೆಸಿದಿದೆ. ಮುಂದಿನ ಆ್ಯಶಸ್ ಸರಣಿಯಿಂದ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತದೆ. ಆ ಬಳಿಕ ವಿಶ್ವದ ಎಲ್ಲ ಮಾದರಿ ಕ್ರಿಕೆಟ್‌ನಲ್ಲಿ ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಐಸಿಸಿ ಮೂಲಗಳು ತಿಳಿಸಿವೆ.
ತಲೆಗೆ ಬೌನ್ಸರ್ ಏಟು ಬಿದ್ದರೂ ಚಿಕಿತ್ಸೆ ಪಡೆದು ಬಂದು ಬಳಿಕ ಬ್ಯಾಟಿಂಗ್ ಮುಂದುವರಿಸುವುದನ್ನು ನೋಡಿದ್ದೇವೆ. ಆದರೆ ಇಂಥ ಸಂದರ್ಭದಲ್ಲಿ ಬದಲಿ ಆಟಗಾರನನ್ನು ಸೇರಿಸಿಕೊಳ್ಳಲು ನಿಯಮಾವಳಿಯಲ್ಲಿ ಅವಕಾಶ ಇಲ್ಲ. ಹೀಗಾಗಿ ತಲೆಗೆ ಚೆಂಡಿನೇಟು ತಿಂದ ಆಟಗಾರ ಮತ್ತೆ ಕ್ರೀಸ್‌ಗೆ ಇಳಿಯುವ ಅನಿವಾರ್ಯತೆ ಎದುರಾಗುವುದುಂಟು. ಈ ಬಗ್ಗೆ ಇತ್ತೀಚೆಗೆ ಲಂಡನ್‌ನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಆಟಗಾರರ ಪ್ರಾಣ ರಕ್ಷಣೆಗಾಗಿ ಬದಲಿ ಆಟಗಾರನ ವ್ಯವಸ್ಥೆ ಅನಿವಾರ್ಯ ಎನ್ನುವುದು ಚರ್ಚೆಗೆ ಬಂದಿದೆ. ಹೀಗಾಗಿ ಮಹತ್ವದ ನಿರ್ಣಯ ಹೊರಬಿದ್ದಿದೆ.