Advertisement

ಸರಣಿ ಕಳ್ಳತನ ಮಾಡಿದವರ ಬಂಧನ

01:07 PM Mar 12, 2017 | Team Udayavani |

ಹುಬ್ಬಳ್ಳಿ: ಇಲ್ಲಿನ ಅಮರಗೋಳದ ಶ್ರೀ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರದೇಶದ ಅಂಗಡಿಗಳಲ್ಲಿ ಸರಣಿ ಕಳ್ಳತನ ಮಾಡಿದ್ದ ತಂಡವನ್ನು ಎಪಿಎಂಸಿ- ನವನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

Advertisement

ಪ್ರಕರಣದಲ್ಲಿ ಇಲ್ಲಿನ ಆನಂದನಗರ ಕುಷ್ಠರೋಗ ಆಸ್ಪತ್ರೆ ಬಳಿಯ ಶಿವಾನಂದ ಊರ್ಫ್‌ ಮಚ್ಚರ್‌ಶಿವ್ಯಾ ಅಕ್ಕಿ ಹಾಗೂ ಯಲ್ಲಾಪುರ ಓಣಿ ಗೊಲ್ಲರ ಕಾಲೋನಿಯ ಜಂಗ್ಲಾ ಊರ್ಫ್‌ ರಾಜು ಬಿಲಾನಾ ಬಂಧಿತರಾಗಿದ್ದು, ಸೋನಿಯಾಗಾಂಧಿ ನಗರದ ಸಂತೋಷ ಊರ್ಫ್‌ ಅಪ್ಯಾ ಆದಾಪೂರ ಪರಾರಿಯಾಗಿದ್ದಾನೆ. 

ಬಂಧಿತರು ಎಪಿಎಂಸಿಯಲ್ಲಿ ಫೆಬ್ರುವರಿ 14ರಂದು ಅಂಗಡಿಗಳ ಶಟರ್ ಮುರಿದು, ಮೇಲ್ಛಾವಣಿಯ ತಗಡು ಕಿತ್ತು ಏಳು ಅಂಗಡಿಗಳಲ್ಲಿದ್ದ ಅಪಾರ ಪ್ರಮಾಣದ ಆಹಾರಧಾನ್ಯ ಹಾಗೂ ನಗದು ಕಳವು ಮಾಡಿದ್ದರು. ಶನಿವಾರವೂ ಬೆಳಗಿನ ಜಾವ ಕಳ್ಳತನಕ್ಕೆ ಪ್ರಯತ್ನಿಸುತ್ತಿದ್ದಾಗ ಎಪಿಎಂಸಿ-ನವನಗರ ಠಾಣೆ 

ಇನ್ಸ್‌ಪೆಕ್ಟರ್‌ ಆರ್‌.ಎಸ್‌. ನಾಯಕ ನೇತೃತ್ವದಲ್ಲಿ ಪೊಲೀಸರು ದಾಳಿ ಮಾಡಿ ಇಬ್ಬರನ್ನು ಬಂಧಿಸಿ, ಅವರಿಂದ ಒಂದು ಆಟೋರಿಕ್ಷಾ, ಒಂದು ಬೈಕ್‌, 8 ಸಾವಿರ ರೂ. ನಗದು ಹಾಗೂ ಕಳ್ಳತನಕ್ಕೆ ಬಳಸುತ್ತಿದ್ದ ಕಟರ್‌ ಸೇರಿದಂತೆ ಇನ್ನಿತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪರಾರಿಯಾಗಿರುವ ಇನ್ನೋರ್ವನ ಬಂಧನಕ್ಕೆ ಜಾಲ ಬೀಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next