Advertisement
ಕೊಹ್ಲಿ ಮದುವೆಗೆ ಕೇವಲ ಇಬ್ಬರು ಮಾಜಿಗಳಿಗಷ್ಟೇ ಆಹ್ವಾನ ನೀಡಲಾಗಿದೆ, ಇವರೆಂದರೆ ಸಚಿನ್ ತೆಂಡುಲ್ಕರ್ ಮತ್ತು ಯುವರಾಜ್ ಸಿಂಗ್ ಎಂಬುದು ಕೆಲವು ದಿನಗಳ ಹಿಂದೆ ಸುದ್ದಿಯಾಗಿತ್ತು. ಆದರೆ ಸಚಿನ್ ಮತ್ತು ಯುವರಾಜ್ ಈ ಮದುವೆಯಲ್ಲಿ ಕಾಣಿಸಿಕೊಳ್ಳಲಿಲ್ಲ. ಕೊಹ್ಲಿ-ಅನುಷ್ಕಾ ವಿವಾಹಕ್ಕೆ ಸಾಕ್ಷಿಯಾದದ್ದು ಕೇವಲ ಒಬ್ಬ ಕ್ರಿಕೆಟಿಗ ಎಂಬುದಾಗಿ ತಿಳಿದು ಬಂದಿದೆ. ಆದರೆ ಈತನ ಹೆಸರನ್ನುಈವರೆಗೆ ಯಾರೂ ಕೇಳಿಲ್ಲ ಎಂಬುದೊಂದು ಸ್ವಾರಸ್ಯ! ಈ ಕ್ರಿಕೆಟಿಗನ ಹೆಸರು ವರ್ತಿಕ್ ತಿಹಾರಾ! ಇವರು ಕೊಹ್ಲಿಯ ಬಾಲ್ಯದ ಕ್ರಿಕೆಟ್ ತಂಡದ ನಾಯಕರಾಗಿದ್ದರು. 12 ವರ್ಷಗಳ ಹಿಂದೆ ವರ್ತಿಕ್ ಸಾರಥ್ಯದಲ್ಲೇ ಕೊಹ್ಲಿ 17 ವಯೋಮಿತಿಯೊಳಗಿನ ತಂಡದಲ್ಲಿ ಆಡಿದ್ದರು. ವಿರಾಟ್ ಹಾಗೂ ವರ್ತಿಕ್ ಆತ್ಮೀಯ ಗೆಳೆಯರು. ಕೊಹ್ಲಿ ಕುಟುಂಬದ ಎಲ್ಲ ಸಮಾರಂಭಗಳಲ್ಲೂ ವರ್ತಿಕ್ ತಪ್ಪದೇ ಹಾಜರಿರುತ್ತಾರೆ.
ಈಗ ಕೊಹ್ಲಿ ಮದುವೆಗೂ ವಿಶೇಷ ಆಮಂತ್ರಣದ ಮೇರೆಗೆ ಆಗಮಿಸಿ ಗೆಳೆಯನನ್ನು ಹರಸಿದ್ದಾರೆ.
ತಮ್ಮ ಮದುವೆಯ ದಿನ ವಿರಾಟ್ ಕೊಹ್ಲಿ ಹಾಡಿದ್ದಾರೆ. ಅದೀಗ ಯೂಟ್ಯೂಬ್‌ನಲ್ಲಿ ಹಬ್ಬಿ ಹರಿದಾಡುತ್ತಿದೆ. ಬಾಲಿವುಡ್‌ನ ಖ್ಯಾತ ಗಾಯಕ ಕಿಶೋರ್ ಕುಮಾರ್ ಅವರು ಮಿಸ್ಟರ್ ಎಕ್ಸ್ ಇನ್ ಮುಂಬೈ ಎಂಬ ಸಿನಿಮಾಕ್ಕೆ ಹಾಡಿದ್ದ ಮೆಹೂºಬಾ ಖಯಾಮತ್ ಹೋಗಿ ಗೀತೆಯನ್ನು ಹಾಡುವ ಮೂಲಕ ಕೊಹ್ಲಿ ಗಾಯಕರಾಗಿ ಬದಲಾಗಿದ್ದಾರೆ! ಇವರ ಹಾಡಿಗೆ ಸ್ವತಃ ಅನುಷ್ಕಾ ತಲೆದೂಗಿ ಚಪ್ಪಾಳೆ ತಟ್ಟಿದ್ದಾರೆ. ನವ ದಂಪತಿಗೆ ಪಾಕ್ ಕ್ರಿಕೆಟಿಗರ ಶುಭಾಶಯ
ಭಾರತ ತಂಡದ ಕಪ್ತಾನ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮ ಇಟಲಿಯಲ್ಲಿ ಗೃಹಸ್ಥಾ ಶ್ರಮಕ್ಕೆ ಕಾಲಿಟ್ಟಿರುವ
ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಗಣ್ಯರು ಶುಭಾಶಯಗಳ ಮಳೆಯನ್ನೇ ಸುರಿಸಿದ್ದಾರೆ. ಪಾಕಿಸ್ತಾನ ಕ್ರಿಕೆಟಿಗರು ಕೂಡ
ಇದಕ್ಕೆ ಹೊರತಾಗಿಲ್ಲ. ಹೌದು, ಪಾಕಿಸ್ತಾನ ಅನುಭವಿ ಕ್ರಿಕೆಟಿಗ ಶಾಹಿದ್ ಅಫ್ರಿದಿ, ವೇಗಿ ಮೊಹಮ್ಮದ್ ಅಮೀರ್, ಮಾಜಿ ಕ್ರಿಕೆಟಿಗ
ಶೋಯಿಬ್ ಅಖ್ತರ್, ಉಮರ್ ಅಕ್ಮಲ್, ಅಜರ್ ಮೊಹಮ್ಮದ್ ಸೇರಿದಂತೆ ಪಾಕ್ ಕ್ರಿಕೆಟ್‌ನ ಹಲವು ಗಣ್ಯರು ಕೊಹ್ಲಿ ದಂಪತಿಗೆ
ಶುಭಾಶಯ ತಿಳಿಸಿದ್ದಾರೆ. ಈ ಹಿಂದೆ ವಿರಾಟ್ ಕೊಹ್ಲಿ ಪಾಕ್ ಕ್ರಿಕೆಟ್ ನಾಯಕರಾಗಿದ್ದ ಅಫ್ರಿದಿಗೆ ಜೆರ್ಸಿ ಮೇಲೆ ಭಾರತೀಯ
ಆಟಗಾರರ ಸಹಿ ಹಾಕಿ ಕಳುಹಿಸಿಕೊಟ್ಟಿದ್ದರು. ಆ ಬಳಿಕ ಉಭಯ ರಾಷ್ಟ್ರಗಳ ಕ್ರಿಕೆಟ್ ಅಭಿಮಾನಿಗಳ ನಡುವೆ ಬಾಂಧವ್ಯ
ಹೆಚ್ಚಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
Related Articles
ಮಿಲಾನ್ (ಇಟಲಿ): ಭಾರತ ಕ್ರಿಕೆಟ್ ತಂಡದ ನಾಯಕ ಕೊಹ್ಲಿ-ಬಾಲಿವುಡ್ ನಟಿ ಅನುಷ್ಕಾ ಶರ್ಮ ವಿವಾಹ
ಮುಕ್ತಾಯವಾಗುವುದರೊಂದಿಗೆ ಒಂದೊಂದೇ ಸಂಗತಿಗಳು ಮಹತ್ವ ಪಡೆಯತೊಡಗಿವೆ. ಕೊಹ್ಲಿಗೆ ಸಾರ್ವಜನಿಕವಾಗಿ ಪ್ರೇಮ ನಿವೇದನೆ ಮಾಡಿದ್ದ ಇಂಗ್ಲೆಂಡ್ ಕ್ರಿಕೆಟ್ ಆಟಗಾರ್ತಿ ಡೇನಿಯೆಲ್ ವ್ಯಾಟ್ ಅವರ ಶುಭ ಹಾರೈಕೆ ಇದರಲ್ಲೊಂದು. 2014ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊಹ್ಲಿ 72 ಬಾರಿಸಿದ್ದಾಗ ವ್ಯಾಟ್, ಕೊಹ್ಲಿಯ ಅಭಿಮಾನಿ ಯಾಗಿ ಬದಲಾಗಿದ್ದರು. ಆಗ ಅವರು ಸಾರ್ವಜನಿಕ ನನ್ನ ಮದುವೆಯಾಗ್ತಿàಯಾ ಎಂದು ಕೊಹ್ಲಿಗೆ ಕೇಳಿದ್ದರು. ಅದಕ್ಕೆ ಕೊಹ್ಲಿ ಗಮನ ಕೊಟ್ಟಿರಲಿಲ್ಲ. ಎರಡೂ ಕುಟುಂಬದವರು ಅದಕ್ಕೆ ಮಹತ್ವ ನೀಡಿರಲಿಲ್ಲ. ಇದೀಗ ಕೊಹ್ಲಿ ಮದುವೆಯಾಗಿರುವಾಗ ವ್ಯಾಟ್ ಪ್ರತಿಕ್ರಿಯೆ ಹೇಗಿರುತ್ತದೆ ಎನ್ನುವುದು ಅಭಿಮಾನಿಗಳ ಕುತೂಹಲವಾಗಿತ್ತು. ಇಂತಹ ಸಂದರ್ಭದಲ್ಲಿ ತಣ್ಣಗೆ ಪ್ರತಿಕ್ರಿಯಿಸಿರುವ ವ್ಯಾಟ್, ಶುಭಾಶಯಗಳು ಅನುಷ್ಕಾ-ಕೊಹ್ಲಿ ಜೋಡಿಗೆ ಎಂದಷ್ಟೇ ಹೇಳಿದ್ದಾರೆ. ಇದಕ್ಕೆ ಕೆಲವೇ ನಿಮಿಷದಲ್ಲಿ ಸಾವಿರಾರು ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಅಷ್ಟೂ ಮಾತ್ರವಲ್ಲ
ಕೆಲವರು ಕಾಲೆಳೆಯಲು ಪ್ರಯತ್ನಿಸಿದ್ದಾರೆ.
Advertisement