Advertisement

“ಸಮಯ’ದ ಸದ್ಬಳಕೆ ಬಲ್ಲವನೇ ಜಾಣ

11:39 PM Jan 29, 2024 | Team Udayavani |

ಎಂದಿನಂತೆ ಕಚೇರಿ ಕೆಲಸಕ್ಕೆ ಹೋಗು ತ್ತಿದ್ದ ಸೋನಾಳಿಗೆ ಬೀದಿಯ ಕೊನೆಯ ಮನೆಯ ಮುಂದೆ ಸಾಕಷ್ಟು ಜನ ಸೇರಿದ್ದು ಕಂಡು ಗಾಬರಿಯಾಯಿತು. ಶ್ವೇತವರ್ಣದ ಸೀರೆಯನ್ನುಟ್ಟ ನಾರಿಯರ ಗುಂಪನ್ನು ಕಂಡ ತತ್‌ಕ್ಷಣ ಆ ಮನೆಯಲ್ಲಿ ಸಾವು ಸಂಭ ವಿಸಿದೆ ಎನ್ನುವುದು ಆಕೆಗೆ ಖಚಿತ ವಾಯಿತು. ಒಂದು ಕ್ಷಣ ಅಲ್ಲೇ ನಿಂತಳು. ಪಾಪ, ಇನ್ನೂ ನಲುವತ್ತರ ಹರೆಯ. ಇಷ್ಟು ಬೇಗ ದೇವರು ಕರೆಸಿ ಕೊಳ್ಳಬಾರದಿತ್ತು…. ನೆರೆದವರೊಬ್ಬರ ಮಾತು ಕೇಳಿ, ಅಯ್ಯೋ…! ಸುಮಂ ಗಲಿ ತೀರಿಕೊಂಡಳೇ…! ಸೋನಾ ಗರ ಬಡಿದವಳಂತೆ ಅಲ್ಲೇ ನಿಂತುಬಿಟ್ಟಳು. ಅನಾರೋಗ್ಯದಿಂದ ಬಳಲುತ್ತಿದ್ದ ಸುಮಂಗಲಿಯನ್ನು ನೋಡಿ, ಮಾತ ನಾಡಿಸಿ ಬರಬೇಕೆಂದು ಒಂದು ವಾರದಿಂದ ಯೋಚಿಸುತ್ತಲೇ ಇದ್ದ ಆಕೆಗೆ ಹೋಗಲು ಪುರುಸೊತ್ತೇ ಆಗಿ ರಲಿಲ್ಲ. ನಾಳೆ ಹೋದರಾಯಿತು.. ನಾಡಿದ್ದು ಹೋದರಾಯಿತು ಎಂದು ಕೊಳ್ಳುತ್ತಿರುವಾಗಲೇ ತಿರುಗಿ ಬಾರದ ಊರಿಗೆ ಸುಮಂಗಲಿ ಪಯಣ ಬೆಳೆಸಿ ಆಗಿತ್ತು. ಹೂ ಗಿಡಗಳಿಗೆ ನೀರುಣಿಸುತ್ತಾ ಹೂ ಚಟ್ಟಿಯಿಂದ ಕಳೆ ಕೀಳುತ್ತಾ ಕಾಲ ಕಳೆಯುತ್ತಿದ್ದ ಸುಮಂಗಲಿ ಕಳೇ ಬರವಾಗಿ ಮಲಗಿ¨ªಾಳೆ… ಛೇ, ತಾನು ನಿಧಾನ ಮಾಡಬಾರದಾಗಿತ್ತು.. ಪಶ್ಚಾ ತ್ತಾಪದಿಂದ ನಲುಗಿ ಹೋದಳು ಸೋನಾ!
ಮದುವೆ ಸಮಾರಂಭವೊಂದರಲ್ಲಿ ಓಡಿ ಆಡುತ್ತಿದ್ದ ಪುಟ್ಟ ಮಕ್ಕಳ ತುಂಟಾಟವನ್ನು ನೋಡುತ್ತಾ ಮಹಿಳೆಯರಿಬ್ಬರು ಮಾತನಾಡಿ ಕೊಳ್ಳುತ್ತಿದ್ದರು. ಮಕ್ಕಳ ಪುಂಡುತನ ನೋಡು ವುದೇ ಕಣ್ಣಿಗೊಂದು ಹಬ್ಬ. ಆದರೆ ನಮ್ಮ ಮಕ್ಕಳು ಈ ಹಂತದಲ್ಲಿ ಇದ್ದಾಗ ನಾವು ಅವರ ತುಂಟಾಟವನ್ನು ಕಂಡು ಆನಂದಿಸಿದ್ದೇ ಕಡಿಮೆ. ಓದಿಸುವ, ಬರೆಯಿಸುವ ಭರದಲ್ಲಿ ಅವರ ಬಾಲ್ಯ ಕಳೆದದ್ದೇ ಗೊತ್ತಾಗಲಿಲ್ಲ. ಮಕ್ಕ ಳಾಟ ನೋಡುತ್ತಾ ಕೂರಲು ಪುರುಸೊತ್ತೇ ಇರುತ್ತಿರಲಿಲ್ಲ.

Advertisement

ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಹುಡುಗನ ತಾಯಿಯೊಬ್ಬಳು ಆತನನ್ನು ಮರು ಪರೀಕ್ಷೆಗೆ ಕೂರಿಸುವ ವಿಚಾರವಾಗಿ ಕಾಲೇಜಿನ ಕಚೇರಿಯಲ್ಲಿ ಮಾತನಾಡುತ್ತಾ, ಅವನ ಮಾರ್ಕ್ಸ್ ನೋಡಿ. ಕಾಲೇಜಿಗೆ ಬಂದು ನಮ್ಮ ಜತೆಗೆ ಸ್ವಲ್ಪ ಮಾತನಾಡಿ, ನಮ್ಮ ಜತೆಗೆ ಸಹಕರಿಸಿ.. ಎಂದು ಉಪನ್ಯಾಸಕರು ಪದೇ ಪದೆ ಫೋನ್‌ ಮಾಡಿದಾಗಲೂ ಬರಲು ಪುರುಸೊತ್ತೇ ಆಗಿರಲಿಲ್ಲ… ಈಗ ನೋಡಿದರೆ ಹೀಗೆ ಆಯಿತು. ಪಶ್ಚಾತ್ತಾಪದ ಕಣ್ಣ ಹನಿಗಳು.
“” “ಸಮಯ’ ಅನ್ನೋದು ಒಮ್ಮೆ ಕಳೆದರೆ ಹಿಂದಿರುಗಿ ಪಡೆಯಲಾಗದ ಒಂದು ಅಮೂಲ್ಯ ಆಸ್ತಿ” ಎನ್ನುವ ಆಂಗ್ಲವಾಣಿ ಇದನ್ನೇ ಹೇಳುತ್ತದೆ. ಬಿಟ್ಟ ಬಾಣ, ಆಡಿದ ಮಾತು, ಹರಿದು ಹೋದ ನೀರು, ಕಳೆದು ಹೋದ ಕಾಲ ಇವು ಎಂದಿಗೂ ತಿರುಗಿ ಬರಲಾರವು. ಸಮಯ ಎಲ್ಲರಿಗೂ ಒಂದೇ ರೀತಿಯಲ್ಲಿ ಇರುವುದು. ಆದರೆ ಅದನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುವ ಕಲೆಗಾರಿಕೆಯ ಮೇಲೆ ನಮ್ಮ ದೈನಂದಿನ ಕೆಲಸ -ಕಾರ್ಯಗಳ ಸಫ‌ಲತೆ-ವಿಫ‌ಲತೆ ನಿಂತಿದೆ.

ಆದ್ಯತೆಗೆ ಅನುಗುಣವಾಗಿ ಸಮಯವನ್ನು ಬಳಸುವ ಜಾಣ್ಮೆಯನ್ನು ಮೈಗೂಡಿಸಿ ಕೊಳ್ಳದಿದ್ದರೆ “ಪುರುಸೊತ್ತಿಲ್ಲ’ ಎನ್ನುವ ನುಡಿಗೇ ಮತ್ತೆ ಮತ್ತೆ ಮುಗಿ ಬೀಳಬೇಕಾ ಗುತ್ತದೆ. ಸಮಯವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಯಾರಿಗೂ ಇಲ್ಲ. ಆದರೆ ಅದನ್ನು ವ್ಯವಸ್ಥಿತವಾಗಿ ಬಳಸಿಕೊಂಡು ಹೋದರೆ ನಮ್ಮ ಆಲೋಚಿತ ಕೆಲಸ ಕಾರ್ಯಗಳಿಗೆ ಪುರುಸೊತ್ತು ಸಿಕ್ಕೀತು. ಊಟ, ನಿದ್ದೆ, ಮನೋ ರಂಜನೆ ಇತ್ಯಾದಿಗಳಿಗೆ ಸಮಯ ಸಿಗುವ ಹಾಗೆ ಬಾಂಧವ್ಯಗಳನ್ನು ಉಳಿಸಿಕೊಳ್ಳಲು, ಬೆಳೆಸಿಕೊಳ್ಳಲು ಸಮಯ ಸಿಗಬೇಕಾದರೆ ದಿನ ದಲ್ಲಿ ಪೂರೈಸಬೇಕಾದ ಕೆಲಸ-ಕಾರ್ಯಗಳ ಬಗ್ಗೆ ನಿಖರವಾದ ನಿಲುವು ಮತ್ತು ಆ ಗುರಿ ತಲುಪಲೇಬೇಕು ಎನ್ನುವ ಛಲವೂ ಇರಬೇಕು. “ಇವತ್ತು ನೀನು ಮಾಡುವ ಕಾರ್ಯಗಳ ಮೇಲೆ ನಾಳಿನ ನಿನ್ನ ಭವಿಷ್ಯ ನಿರ್ಧರಿತವಾಗುತ್ತದೆ’ ಎನ್ನುವ ಮಾತೊಂದಿದೆ. ಶ್ರೇಷ್ಠ ವ್ಯಕ್ತಿಗಳು ಸಮಯದ ನಿರ್ವಹಣೆ ಯನ್ನು ಮಾಡಿದ್ದರಿಂದಲೇ ಶ್ರೇಷ್ಠ ಎನಿಸಲು ಸಾಧ್ಯವಾಯಿತು ಎಂದಿ¨ªಾನೆ ಅಲೆಕ್ಸಾಂಡರ್‌ ಗ್ರಹಾಂಬೆಲ…. ಹಿಡಿದ ಕೆಲಸವನ್ನು ಪೂರ್ಣ ಗೊಳಿಸದೆ ಇನ್ನೊಂದು ಕೆಲಸಕ್ಕೆ ತೊಡಗು ವುದು, ಗುರಿಯ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು, ಸ್ವಯಂ ಶಿಸ್ತಿನ ಅಭಾವ ಇವೆಲ್ಲ ಪುರುಸೊತ್ತಿಲ್ಲ ಎನ್ನುವ ಕಾರಣಕ್ಕೆ ಪೂರಕ ಅಂಶಗಳು. ಹತ್ತೆಡೆಯೊಳು ತೋಡಿ ಒಂದಡಿಯಷ್ಟನು ಬರಲಿಲ್ಲ ನೀರೆನ್ನಬೇಡ, ಒಂದೆಡೆಯೊಳು ತೋಡು ಹತ್ತಡಿಯಷ್ಟನು ಚಿಮ್ಮುವುದುದಕವು ನೋಡಾ ಎನ್ನುವ ಎಸ್‌.ವಿ. ಪರಮೇಶ್ವರ ಭಟ್ಟರ ಮಾತಿನಂತೆ ಹಿಡಿದ ಕಾರ್ಯವನ್ನು ನಿಷ್ಠೆ ಮತ್ತು ಬದ್ಧತೆಯಿಂದ ಮಾಡಿ ಮುಗಿ ಸುವ ಏಕಾಗ್ರತೆ ಉಳ್ಳವನಿಗೆ ಇನ್ನೊಂದು ಕೆಲಸಕ್ಕೆ ಸಮಯ ಕೂಡಿ ಬರುತ್ತದೆ. ಯಾವುದು ಮೊದಲು? ಯಾವುದು ಅನಂತರ? ಎನ್ನುವ ನಿಯೋಜಿತ ಸಂಕಲ್ಪ ಹೊಂದಿದವನಿಗೆ ಇಂದಿನ ಕೆಲಸವನ್ನು ನಾಳೆಗೆ ಮುಂದೂಡುವ ಸಂದಿಗ್ಧತೆ ಎದುರಾಗುವುದಿಲ್ಲ. ಯಾವ ಕ್ರಮದಲ್ಲಿ ತನ್ನ ಇಂದಿನ ಕೆಲಸ-ಕಾರ್ಯಗಳು ಸಾಗ ಬೇಕು ಎನ್ನುವ ಯೋಜನೆಯನ್ನು ಹಾಕಿ ಕೊಂಡು ಅದರಂತೆ ನಡೆಯುವವನಿಗೆ ಸಮಯವನ್ನು ಸರಿದೂಗಿಸಿಕೊಂಡು ಹೋಗಲು ಕಷ್ಟ ಎನಿಸುವುದಿಲ್ಲ.

“ಪುರುಸೊತ್ತಿಲ್ಲ’ ಎನ್ನುವ ಪದ ಸೋಮಾರಿಗಳ ಮೊದಲ ಲಕ್ಷಣ. ನಾವಾಗಿ ಬಿಡುವು ಮಾಡಿಕೊಳ್ಳದ ಹೊರತು ನಮಗೆ ಸಮಯ ಸಿಗುವುದಿಲ್ಲ. ಕೆಲವರು ಸಮಯ ಹಂಚಿಕೆಯಲ್ಲಿ ಸಿದ್ಧಹಸ್ತರು. ಅಂಥ ವ್ಯಕ್ತಿಗಳು ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಒಂದು ಸೀಮಾರೇಖೆಯನ್ನು ಹಾಕಿ ಕೊಂಡಿರುತ್ತಾರೆ. ಅಪೇಕ್ಷಿತ, ಅನಗತ್ಯ ಎನಿಸುವ ಆಹ್ವಾನ ಇರ ಬಹುದು, ಕೆಲಸ ಕಾರ್ಯಗಳಿರಬಹುದು “ಇಲ್ಲ… ಆಗಲ್ಲ…’ ಎನ್ನುವುದನ್ನು ಅವರು ಕಲಿತಿರುತ್ತಾರೆ. ಡಾ| ಶಿವರಾಮ ಕಾರಂತರು ಕೆಲವೊಂದು ಆಹ್ವಾನಗಳಿಗೆ ಈ ರೀತಿ ಉತ್ತರಿ ಸುತ್ತಿದ್ದರಂತೆ, ನಾನು ಸದಾ ನಡೆದಾಡುವ ವ್ಯಕ್ತಿ. ನನಗೆ ಬರಲು ಬಿಡುವಿಲ್ಲ! ಎಲ್ಲವನ್ನೂ ಎಳೆದು ಹಾಕಿ ಕೊಂಡು ಕೊನೆಗೆ ಮಾಡ ಲೇಬೇಕಾದ ಕಾರ್ಯವನ್ನು ಮಾಡದೆ ಕೊನೆಗೆ ಪಶ್ಚಾತ್ತಾಪ ಪಡುವುದಕ್ಕಿಂತ ಕೆಲವೊಮ್ಮೆ “ನೋ’ ಅನ್ನುವುದನ್ನು ರೂಢಿಸಿಕೊಳ್ಳಬೇಕು.

ಒಟ್ಟಿನಲ್ಲಿ ಸಮಯದ ಸದ್ಬಳಕೆ ಮಾಡಬಲ್ಲವನಿಗೆ “ಪುರುಸೊತ್ತಿಲ್ಲ’ ಎನ್ನುವ ಸಮಸ್ಯೆ ಕಾಡುವುದಿಲ್ಲ. ಆತ ಪಶ್ಚಾತ್ತಾಪದ ಬೇಗೆಯಲ್ಲಿ ಬೇಯಬೇಕಾದ ಪರಿಸ್ಥಿತಿ ಬಂದೊದಗುವುದಿಲ್ಲ. ಮಾನಸಿಕ ಒತ್ತಡ ದೊಂದಿಗೆ ಕೆಲಸ ನಿರ್ವಹಿಸಬೇಕಾದ ಅನಿ ವಾರ್ಯತೆಯೂ ಅವನಿಗೆ ಎದುರಾ ಗುವುದಿಲ್ಲ.

Advertisement

ಶ್ರೇಷ್ಠ ವ್ಯಕ್ತಿಗಳು ಸಮಯದ ನಿರ್ವಹಣೆಯನ್ನು ಮಾಡಿದ್ದರಿಂದಲೇ ಶ್ರೇಷ್ಠ ಎನಿಸಲು ಸಾಧ್ಯವಾಯಿತು. ಹಿಡಿದ ಕೆಲಸವನ್ನು ಪೂರ್ಣಗೊಳಿಸದೆ ಇನ್ನೊಂದು ಕೆಲಸಕ್ಕೆ ತೊಡಗುವುದು, ಗುರಿಯ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು, ಸ್ವಯಂ ಶಿಸ್ತಿನ ಅಭಾವ ಇವೆಲ್ಲ ಸಮಯದ ನಿರ್ವಹಣೆಯಲ್ಲಿ ಸೋಲಲು ಕಾರಣಗಳು. ಆಡಿದ ಮಾತನ್ನು ಹೇಗೆ ಹಿಂದೆಗೆದುಕೊಳ್ಳಲು ಆಗುವುದಿಲ್ಲವೋ ಹಾಗೇ ಕಳೆದು ಹೋದ ಸಮಯವೂ ಮರಳಿ ಬರಲಾರದು. ಸಮಯದ ಸದ್ಬಳಕೆ ಮಾಡಬಲ್ಲವನಿಗೆ ಮಾನಸಿಕ ಒತ್ತಡದೊಂದಿಗೆ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆ ಎದುರಾಗುವುದಿಲ್ಲ, ಆತ ಪಶ್ಚಾತ್ತಾಪದ ಬೇಗೆಯಲ್ಲಿ ಬೇಯಬೇಕಾದ
ಪರಿಸ್ಥಿತಿಯೂ ಬಂದೊದಗುವುದಿಲ್ಲ.

ಜಯಲಕ್ಷ್ಮೀ ಕೆ., ಮಡಿಕೇರಿ

Advertisement

Udayavani is now on Telegram. Click here to join our channel and stay updated with the latest news.

Next