Advertisement

ಯಾರು ಸೇರ್ತಾರೆ ಮೋದಿ ಸಂಪುಟ?

09:23 AM May 26, 2019 | mahesh |

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿರುವ ಬಿಜೆಪಿ, ಸರ್ಕಾರ ರಚನೆಯ ಸಿದ್ಧತೆಗಳನ್ನು ಆರಂಭಿಸಿದೆ. ಹೊಸದಾಗಿ ರಚನೆಯಾಗಲಿರುವ ಮೋದಿ ಸಂಪುಟದಲ್ಲಿ ಸೇರುವವರು ಯಾರು, ಯಾರಿಗೆ ಸಚಿವ ಸ್ಥಾನ ಕೈತಪ್ಪಲಿದೆ ಎಂಬ ಬಗ್ಗೆಯೂ ಚರ್ಚೆಗಳು ಶುರುವಾಗಿದೆ. ಕೆಲವೊಂದು ಹೊಸ ಮುಖಗಳೂ ಸೇರ್ಪಡೆಯಾಗುವ ಸಾಧ್ಯತೆಗಳಿವೆ.

Advertisement

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಸಂಪುಟ ಸೇರಲಿದ್ದಾರೆ ಎಂಬ ಬಗ್ಗೆ ಸುದ್ದಿಗಳು ಜೋರಾಗಿಯೇ ಓಡುತ್ತಿವೆ. ರಾಜನಾಥ್‌ ಸಿಂಗ್‌, ನಿರ್ಮಲಾ ಸೀತಾರಾಮನ್‌ ಅವರು ಕ್ಯಾಬಿನೆಟ್‌ನ ಅಗ್ರ 4 ಸ್ಥಾನಗಳಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ನಿರ್ಮಲಾ ಸೀತಾರಾಮನ್‌ ಅವರಿಗೆ ವಿದೇಶಾಂಗ ಸ್ಥಾನ, ರಾಜನಾಥ್‌ಗೆ ರಕ್ಷಣೆ ಮತ್ತು ಅಮಿತ್‌ ಶಾ ಅವರಿಗೆ ರಕ್ಷಣಾ ಖಾತೆ ಸಿಗುವ ಸಂಭವವಿದೆ ಎನ್ನಲಾಗಿದೆ.

ಆದರೆ, ಪ್ರಮುಖ ಖಾತೆಗಳನ್ನು ಹೊತ್ತಿದ್ದ ಸುಷ್ಮಾ ಸ್ವರಾಜ್‌ ಮತ್ತು ಅರುಣ್‌ ಜೇಟ್ಲಿ ಅವರು, ಆರೋಗ್ಯದ ಸಮಸ್ಯೆಯಿಂದ ಸಂಪುಟದಿಂದ ಹೊರಗುಳಿಯಲಿದ್ದಾರೆ ಎಂದೇ ಹೇಳಲಾಗುತ್ತಿದೆ. ಈ ಎರಡರಲ್ಲಿ ಒಂದು ಸ್ಥಾನ ಅಮಿತ್‌ ಶಾ ಅವರಿಗೆ ಸಿಗಬಹುದು ಎನ್ನಲಾಗಿದ್ದು, ಮತ್ತೂಂದು ಸ್ಥಾನ ಸ್ಮತಿ ಇರಾನಿ ಅವರಿಗೆ ಸಿಗಬಹುದೇ ಎಂಬ ಮಾತುಗಳು ಕೇಳಿಬರುತ್ತಿವೆ. ಅಮೇಠಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸೋಲಿಸಿರುವ ಸ್ಮತಿ ಇರಾನಿ ಅವರಿಗೆ ಪ್ರಮುಖ ಖಾತೆಯನ್ನೇ ನೀಡಬಹುದು ಎಂದು ಮೂಲಗಳು ಹೇಳಿವೆ.

ಶಿವಸೇನೆ, ಜೆಡಿಯು ಮತ್ತು ಎಲ್ಜೆಪಿಯ ಸಂಸತ್‌ ಸದಸ್ಯರು ಸಂಪುಟ ಸೇರ್ಪಡೆಯಾಗುವ ಸಾಧ್ಯತೆ ಇದೆ.

ಯಾರಿಗೆ ಸಿಗುತ್ತೆಸಚಿವ ಸ್ಥಾನ?

Advertisement

1. ರಾಜನಾಥ್‌ ಸಿಂಗ್‌ 2. ಅಮಿತ್‌ ಶಾ 3. ನಿರ್ಮಲಾ ಸೀತಾರಾಮನ್‌ 4. ನಿತಿನ್‌ ಗಡ್ಕರಿ 5. ಸ್ಮತಿ ಇರಾನಿ 6. ರವಿಶಂಕರ್‌ ಪ್ರಸಾದ್‌ 7. ಪಿಯೂಶ್‌ ಗೋಯಲ್ 8. ಸದಾನಂದಗೌಡ 9. ಪ್ರಹ್ಲಾದ್‌ ಜೋಶಿ 10. ಪ್ರಕಾಶ್‌ ಜಾವಡೇಕರ್‌

ಮೇ 30ಕ್ಕೆ ಪ್ರಮಾಣ ವಚನ; ಇಂದು ಸಭೆ

ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಮೇ 30ಕ್ಕೆ 2ನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಅದಕ್ಕೆ ಪೂರಕವಾಗಿ ಶನಿವಾರ ಸಂಜೆ ನವದೆಹಲಿಯಲ್ಲಿ ಎನ್‌ಡಿಎ ಸಂಸದರ ಸಭೆ ನಡೆಯಲಿದ್ದು, ಅದರಲ್ಲಿ ವಿಧ್ಯುಕ್ತವಾಗಿ ನರೇಂದ್ರ ಮೋದಿಯವರನ್ನು ಮೈತ್ರಿಕೂಟದ ನಾಯಕ ಎಂದು ಆಯ್ಕೆ ಮಾಡಲಾಗುತ್ತದೆ. ಹೀಗಾಗಿ ಬಿಜೆಪಿಯ ಮತ್ತು ಮೈತ್ರಿಕೂಟದ ನೂತನ ಸಂಸದರು ಈಗಾಗಲೇ ರಾಜಧಾನಿ ತಲುಪಿದ್ದಾರೆ. 2014ರಲ್ಲಿ ಮೇ 26ರಂದು ಮೋದಿ ಪ್ರಧಾನಿಯಾಗಿ ಪ್ರಮಾಣ ಸ್ವೀಕರಿಸಿದ್ದರು.
Advertisement

Udayavani is now on Telegram. Click here to join our channel and stay updated with the latest news.

Next