Advertisement
ಕನಸೊಂದು ಮಾಯೆಯಂತೆ. ಸ್ವಾಮಿ ವಿವೇಕಾನಂದರು ಹೇಳುವಂತೆ ನಾವು ಕಾಣುವ ಕನಸು ಹೇಗಿರಬೇಕೆಂದರೆ ನಿದ್ದೆಯಲ್ಲೂ ನಮ್ಮನ್ನು ಎಚ್ಚರಿಸುವಂತಿರಬೇಕು. ಹಾಗೆಂದು ಪ್ರತಿಯೊಬ್ಬರು ತಮ್ಮ ಬಾಲ್ಯದ ವಯಸ್ಸಿನಲ್ಲಿ ಭವಿಷ್ಯತ್ತಿನ ಕನಸು ಕಾಣುತ್ತಲೇ ಇರುತ್ತಾರೆ. ಆದರೆ ಅದು ಕಾಲ ಕಳೆದಂತೆ ಬದಲಾಗುತ್ತಾ ಕೊನೆಗೊಂದು ಬೇರೆ ಆಯಾಮವನ್ನೇ ಪಡೆಯುತ್ತಾ ಜೀವನ ಕಟ್ಟಿಕೊಳ್ಳುವ ಸಲುವಾಗಿ ತಮ್ಮ ಕನಸಿಗೂ ಒಲ್ಲದ ಮಗದೊಂದು ಉದ್ಯೋಗದಲ್ಲಿ ತೊಡಗಿಸಿಕೊಂಡು ಬಿಡುತ್ತಾರೆ.
Related Articles
Advertisement
ಸ್ಟೀಫನ್ ಕಾಲೇಜಿನಲ್ಲಿ ಏವೀಯೇಷನ್ ಸಂಬಂಧಿತ ಕೋರ್ಸ್‌ಗೆ ಸೇರಿಕೊಂಡು ತನ್ನ 18ನೇ ವಯಸ್ಸಿನಲ್ಲಿ ಪೈಲಟ್ ಆಗಲು ಪರವಾನಿಗೆಯನ್ನು ಸಹ ಪಡೆಯುತ್ತಾಳೆ. ಸ್ಟೀಫನ್ ಕಾಲೇಜಿನಲ್ಲಿ ಅಲ್ಯುಮಿನಿಯಂ ಅಚೀವ್ ಮೆಂಟ್ ಅನ್ನು ಅತೀ ಸಣ್ಣ ವಯಸ್ಸಿಗೆ ಪಡೆದವರೆಂಬ ಹೆಗ್ಗಳಿಕೆಯೂ ಈಕೆಗಿದೆ. 1994ರಲ್ಲಿ ನ್ಯಾಷನಲ್ ಟ್ರಾನ್ಸ್‌ಫೋರ್ಟ್ ಸೇಫ್ ಬೋರ್ಡ್‌ಗೆ ಪ್ರಥಮ ಮಹಿಳಾ ಸೇಫ್ಟಿ ಸೇಫರ್ ಆಗಿ ನೇಮಕವಾಗುತ್ತಾರೆ. ಇಲ್ಲಿ 11ವರ್ಷ ಸೇವೆ ಸಲ್ಲಿಸಿ 450ಕ್ಕೂ ಅಧಿಕ ವಿಮಾನ ಅಪಘಾತ ತಡೆಯಲು ಯಶಸ್ವಿಯಾಗುತ್ತಾರೆ. ತಮ್ಮ 82ನೇ ವಯಸ್ಸಿನಲ್ಲಿ ಅಮೇಜಾನ್ ಸಂಸ್ಥೆಯ ಖಾಸಗಿ ಒಡೆತನದ ಬ್ಲೂ ಒರಿಜಿನ್ ಬಾಹ್ಯಾಕಾಶ ಪ್ರಯಾಣ ಮಾಡಿದ ಅತೀ ಹಿರಿಯ ಮಹಿಳೆ ಎಂಬ ಹೆಗ್ಗಳಿಕೆ ಈಕೆಗಿದ್ದು ಈ ಕನಸು ಈಡೇರಿಕೆಗೆ 60ವರ್ಷ ಕಾದಿದ್ದರು. ಶ್ರಮಿಸಿದ್ದರು ಎಂಬುದು ಇಲ್ಲಿ ಸ್ಮರಿಸಲೇ ಬೇಕಾಗಿದೆ. ಹೀಗಾಗಿಯೇ ಕನಸು ಕಾಣುವುದು ಸುಲಭ ಅದರ ಈಡೇರಿಕೆಗಾಗಿ ಪಡುವ ಶ್ರಮ ಕಷ್ಟ. ಕನಸಿನ ಈಡೇರಿಕೆಗೆ ವಯಸ್ಸಿನ ಹಂಗು ತೊರೆದ ಈಕೆಯ ವ್ಯಕ್ತಿತ್ವ ಎಲ್ಲರಿಗೂ ಮಾದರಿ ಎನ್ನಬಹುದು.