Advertisement

Vasundhra Oswal; ಭಾರತೀಯ ಬಿಲಿಯನೇರ್ ನ ಪುತ್ರಿ ಉಗಾಂಡಾದಲ್ಲಿ ವಶಕ್ಕೆ!

07:51 PM Oct 19, 2024 | Team Udayavani |

ಹೊಸದಿಲ್ಲಿ: ಭಾರತೀಯ ಬಿಲಿಯನೇರ್ ಪಂಕಜ್ ಓಸ್ವಾಲ್ ಅವರ ಪುತ್ರಿ ವಸುಂಧರಾ ಓಸ್ವಾಲ್ ಅವರನ್ನು ಉಗಾಂಡಾದ ಸ್ಥಳೀಯ ಪೊಲೀಸರು ಆರ್ಥಿಕ ಮತ್ತು ಕ್ರಿಮಿನಲ್ ಅಪರಾಧಗಳು ಸೇರಿದಂತೆ ವಿವಿಧ ಆರೋಪಗಳ ಮೇಲೆ ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣ ಮಾಧ್ಯಮಗಳ ಗಮನವನ್ನು ಸೆಳೆದಿದ್ದು,  ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Advertisement

ಉಗಾಂಡಾದ ಕೆಲವು ಮಾಧ್ಯಮ ವರದಿಗಳು ಮತ್ತು ವಿಡಿಯೋಗಳಲ್ಲಿ ಕಾಣೆಯಾದ ಬಾಣಸಿಗನ ಅಪಹರಣ ಮತ್ತು ಕೊಲೆಗೆ ಸಂಬಂಧಿಸಿರಬಹುದೆಂದು ಹೇಳಿದ್ದು, ಇತರರು ವಂಚನೆಯ ಚಟುವಟಿಕೆಗಳಲ್ಲಿ, ವಿಶೇಷವಾಗಿ ಕ್ರಿಪ್ಟೋಕರೆನ್ಸಿ ಯೋಜನೆಗೆ ಸಂಬಂಧಿಸಿದಂತೆ ಆಕೆಯ ಆಪಾದಿತ ಪಾಲ್ಗೊಳ್ಳುವಿಕೆಯ ಕುರಿತು ಉಲ್ಲೇಖಿಸಿದ್ದಾರೆ.

1999 ರಲ್ಲಿ ಜನಿಸಿದ ವಸುಂಧರಾ ಓಸ್ವಾಲ್ ಬಿಲಿಯನೇರ್ ಪಂಕಜ್ ಓಸ್ವಾಲ್ ಅವರ ಪುತ್ರಿ. ಅವರು ಭಾರತ, ಆಸ್ಟ್ರೇಲಿಯ ಮತ್ತು ಸ್ವಿಟ್ಜರ್ಲೆಂಡ್‌ನಲ್ಲಿ ಬೆಳೆದು ಸ್ವಿಸ್ ವಿಶ್ವವಿದ್ಯಾನಿಲಯದಿಂದ ಹಣಕಾಸು ವಿಷಯದಲ್ಲಿ ಪದವಿ ಪಡೆದಿದ್ದಾರೆ. ಓಸ್ವಾಲ್ ಗ್ರೂಪ್ ಗ್ಲೋಬಲ್‌ನ ಭಾಗವಾಗಿರುವ ಪ್ರೊ ಇಂಡಸ್ಟ್ರೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿದ್ದಾರೆ. ವೆಬ್‌ಸೈಟ್ ಪ್ರಕಾರ, ಪ್ರೊ ಇಂಡಸ್ಟ್ರೀಸ್ ಆಫ್ರಿಕಾದ ಪ್ರಧಾನ ಅತ್ಯಾಧುನಿಕ ಎಥೆನಾಲ್ ಉತ್ಪಾದಕ ಘಟಕವಾಗಿದೆ.

ಓಸ್ವಾಲ್ ಅವರ ಕುಟುಂಬ’ ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ”ವಸುಂಧರಾ ಅವರನ್ನು ಅನ್ಯಾಯವಾಗಿ ಕಳೆದ ಎರಡೂವರೆ ವಾರಗಳಿಂದ ಸಂಕಷ್ಟದ ಸ್ಥಿತಿಯಲ್ಲಿ ಇರಿಸಲಾಗಿದೆ. ಸ್ನಾನ ಮಾಡಲು ಅಥವಾ ಬಟ್ಟೆ ಬದಲಾಯಿಸಲೂ ಸಾಧ್ಯವಾಗದ ಬೂಟುಗಳಿಂದ ತುಂಬಿದ ಕೋಣೆಯಲ್ಲಿ ಉಳಿಯಲು ಒತ್ತಾಯಿಸಲಾಗಿದೆ” ಎಂದು ಹೇಳಿಕೊಂಡಿದ್ದಾರೆ.

Advertisement

ಅಕ್ಟೋಬರ್ 1 ರಂದು, ENA ಸ್ಥಾವರದಲ್ಲಿ 20 ಶಸ್ತ್ರಸಜ್ಜಿತ ಪುರುಷರ ಗುಂಪು ವಸುಂಧರಾ ಅವರನ್ನು ವಶಕ್ಕೆ ಪಡೆದಿದೆ ಎಂದು ವರದಿಯಾಗಿದೆ. ಸ್ಥಳೀಯ ಅಧಿಕಾರಿಗಳು ಆಕೆಯ ಬಂಧನವನ್ನು ಕಾಣೆಯಾದ ವ್ಯಕ್ತಿಯ ಬಗ್ಗೆ ನಡೆಯುತ್ತಿರುವ ತನಿಖೆಗೆ ಸಂಪರ್ಕಿಸಿದ್ದಾರೆ, ಆದರೂ ಆಕೆಯ ಕುಟುಂಬವು ಆರೋಪಗಳನ್ನು ತೀವ್ರವಾಗಿ ನಿರಾಕರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next