Advertisement
ಆ ಹುಬ್ಬಳ್ಳಿ ಎಕ್ಸ್‌ಪ್ರೆಸ್ ಟ್ರೈನಿನ ಮೂರನೇ ಬೋಗಿಯ ಕಿಟಕಿಯಂಚಿನ ಬದಿಗೆ ಕುಳಿತು, ಮುಂಬರುವ ಬದುಕಿನ ಬಗ್ಗೆ ಅದೆಷ್ಟು ಕನಸುಗಳನ್ನು ಹೆಣೆದಿರಲಿಲ್ಲ ಹೇಳು? ನಾಲ್ಕು ದಿನದ ಈ ಜೀವನದಲ್ಲಿ ಬಂಡೆಗಲ್ಲಿನಂತೆ ಎದುರಾಗುವ ಸಮಸ್ಯೆಗಳಿಗೆ ಎದೆಯೊಡ್ಡಬೇಕು, ನಾವೇನು ಎಂಬುದನ್ನು ಸಮಾಜಕ್ಕೆ ತೋರಿಸಬೇಕು ಎಂದೆÇÉಾ ಮಾತಾಡಿಕೊಂಡಿದ್ದೆವು…
Related Articles
ಜೀವನದ ಜಂಜಾಟದಲ್ಲಿ ನನ್ನೊಳಗೆ ಮೂಡುವ ಭಾವನೆಗಳಿಗೆ ಸ್ಪಂದಿಸುವ ಜೀವ ನೀನಾಗಬೇಕೆಂಬ ಬಯಕೆ ಆರಂಭವಾಯಿತು. ನಿನ್ನ ಬೆಚ್ಚನೆಯ ಉಸಿರಿಗೆ ನಾನು ಪ್ರತಿ ಉಸಿರಾಗ್ಬೇಕು, ಜಗತ್ತನ್ನೇ ಮೆಚ್ಚಿಸುವ ಪ್ರೇಮ
ನಮ್ಮದಾಗಬೇಕೆಂಬ ತುಮುಲ. ನಿನ್ನನ್ನು ಮೆಚ್ಚಿಸುವ ಬಯಕೆಯೇನೋ ಆಯ್ತು. ಆದರೆ, ಆ ಪಯಣ ಹೂವಿನ
ಹಾಸಿಗೆಯಾಗಿರದೆ, ಹಗ್ಗದ ಮೇಲಿನ ನಡಿಗೆಯಾಗಿತ್ತು. ಇಂದಿನ ಸ್ಮಾರ್ಟ್‌ಫೋನ್ ಜಮಾನದಲ್ಲಿ, ಫೇಸುºಕ್
-ವಾಟ್ಸಾéಪ್‌ನಲ್ಲಿ ಕತೆ, ಕವನ, ಕವಿತೆಗಳನ್ನು ಗೀಚಿ, ನಿನ್ನ ಹೃದಯದಲ್ಲಿ ಪುಟ್ಟ ಜಾಗ ಮೀಸಲಿರಿಸಲು ಅದೆಷ್ಟು
ಒದ್ದಾಡಿದ್ದೇನೆ. ನೀನು ಸಿಕ್ಕಾಗ, ಆ ಸಂಭ್ರಮದ ಏಣಿ ಅನಂತದವರೆಗೂ ಚಾಚಿತ್ತು. ಈಗಿನ ಪ್ರೇಮಿಗಳಂತೆ ನಾವೇನು ಪಾರ್ಕ್, ಸಿನಿಮಾ, ಮಾಲ್ ಅಂತ ಸುತ್ತಲಿಲ್ಲ.
Advertisement
ಎಳ್ಳಷ್ಟೂ ಕಲ್ಮಶವಿಲ್ಲದ, ಪ್ರಬುದ್ಧ ಪ್ರೇಮವನ್ನು ಕಾಪಿಟ್ಟುಕೊಂಡವರು ನಾವು. ಆ ಹುಬ್ಬಳ್ಳಿ ಎಕ್ಸ್‌ಪ್ರೆಸ್ ಟ್ರೈನಿನಮೂರನೇ ಬೋಗಿಯ ಕಿಟಕಿಯಂಚಿನ ಬದಿಗೆ ಕುಳಿತು, ಮುಂಬರುವ ಬದುಕಿನ ಬಗ್ಗೆ ಅದೆಷ್ಟು ಕನಸುಗಳನ್ನು
ಹೆಣೆದಿರಲಿಲ್ಲ ಹೇಳು? ನಾಲ್ಕು ದಿನದ ಈ ಜೀವನದಲ್ಲಿ ಬಂಡೆಗಲ್ಲಿನಂತೆ ಎದುರಾಗುವ ಸಮಸ್ಯೆಗಳಿಗೆ
ಎದೆಯೊಡ್ಡಬೇಕು, ನಾವೇನು ಎಂಬುದನ್ನು ಸಮಾಜಕ್ಕೆ ತೋರಿಸಬೇಕು ಎಂದೆÇÉಾ ಮಾತಾಡಿಕೊಂಡಿದ್ದೆವು.
ಆದರೆ ಈ ಅನಿರೀಕ್ಷಿತ ಬದುಕಿನಲ್ಲಿ ನಾವು ಎಣಿಸಿದಂತೆ ಏನೂ ಆಗುವುದಿಲ್ಲವಲ್ಲ. ನಾನು ಸ್ನೇಹದ ಹಂಗು ತೊರೆದು
ಪ್ರೀತಿಯ ಗುಂಗು ಹಿಡಿದಾಗ ನನ್ನ ಗೆಳೆಯ ಒಂದು ಮಾತು ಹೇಳಿದ್ದ- “ಪ್ರೀತಿಯಲ್ಲಿ ಮೊಗೆದಷ್ಟೂ ಸುಖ
ಇರುವುದಕ್ಕಿಂತ, ಅದರಾಚೆಗೆ ಕೊನೆಯಿರದ ದುಃಖದ ಕರಿ ಛಾಯೆ ಇರುತ್ತೆ ಕಣೋ’. ಪ್ರೀತಿಯ ಅಮಲಿನಲ್ಲಿ
ತೇಲುತ್ತಿದ್ದ ನನಗೆ ಅವನ ಮಾತು ಮನದಲ್ಲಿ ನಾಟಲೇ ಇಲ್ಲ. ದಿನ ಕಳೆದಂತೆ ನಮ್ಮಿಬ್ಬರ ನಡುವೆ ಹುಸಿಕೋಪ, ಮುನಿಸು, ಜಗಳ ಒಂದೊಂದಾಗಿ ಪ್ರವೇಶ ಮಾಡಿದವು. ಬಹುಶಃ ಆ ವಿಧಿ ನಮ್ಮ ಕತೆಯನ್ನು ಬೇರೆಯದೇ ರೀತಿಯಲ್ಲಿ ಬರೆದಿರಬೇಕು ಅಥವಾ ನಮ್ಮ ಅನ್ಯೋನ್ಯ ಸಾಂಗತ್ಯವೇ ಅದಕ್ಕೆ ಹೊಟ್ಟೆಕಿಚ್ಚು ಮಾಡಿರಬೇಕು. ಪೂರ್ತಿ ಬದುಕು ಯೂಟರ್ನ್ ಆಗಿದ್ದು ಇಲ್ಲೇ ನೋಡು. ಎಲ್ಲರ ಪ್ರೀತಿಯಲ್ಲಿ ಇಣುಕುವಂತೆ ಜಾತಿ, ಅಂತಸ್ತು ಎಂಬ ಭೂತ ನಮ್ಮನ್ನೂ ಚೂರಿಯಂತೆ ಇರಿಯಿತು. ಅದ್ಯಾವ ಘಳಿಗೆಯಲ್ಲಿ ಗೆಳೆಯ ಭವಿಷ್ಯ ನುಡಿದಿದ್ದನೋ, ಕೊನೆಗೂ ಅದೇ ದಿಟವಾಗಿ ಪ್ರೀತಿಯ ಉಸಿರುಗಟ್ಟಿಸಿತು. ದಂಡೆಗೆ ಪದೇ ಪದೆ ಮುತ್ತಿಕ್ಕುವ ಸಮುದ್ರದ ಅಲೆಗಳಂತೆ ನನ್ನ ಹೃದಯಕ್ಕೆ ಬರೀ ದುಃಖದ ಅಲೆಗಳೇ ಕೊನೆಯಾಯಿತು. ಚೂರಾದ ಗಾಜಿನಂತಾಗಿದೆ ಹೃದಯವೀಗ. ಭರವಸೆಯ ಕಿರಣವಾಗಿದ್ದ ತಂದೆ ತಾಯಿಗೆ, ಗೆಳೆಯರಿಗೆ ನನ್ನಿಂದ
ಸಿಕ್ಕಿದ್ದಾದರೂ ಏನು? ಸೋಲು, ಅಪಮಾನ, ನೋವು, ಕಣ್ಣೀರು! ಕೊನೆಯದಾಗಿ ಕೇಳ್ತಿದ್ದೀನಿ ಹೇಳು, ನಮ್ಮಿಬ್ಬರ
ಪ್ರೀತಿಯ ಕತ್ತು ಹಿಸುಕಿದ್ದು ಯಾರು? – ಅಂಬಿ ಎಸ್. ಹೈಯ್ನಾಳ್