ಎನ್ನುವ ಕಾರಣದಿಂದ ರಾಜ್ಯದ ಅಥ್ಲೆಟಿಕ್ಸ್ ಕೋಚ್ ಒಬ್ಬರ ವಿರುದ್ಧ ವೈಯಕ್ತಿಕ ದ್ವೇಷ ಸಾಧಿಸುತ್ತಿದ್ದಾರೆಯೇ? ಹೀಗೊಂದು ಆರೋಪವನ್ನು ರಾಜ್ಯದ ಅಥ್ಲೆಟಿಕ್ಸ್ ಕೋಚ್ ಯತೀಶ್ ಕುಮಾರ್ ಮಾಡಿದ್ದಾರೆ.
Advertisement
ಯತೀಶ್ ಕುಮಾರ್ ತಮ್ಮ ವಿದ್ಯಾರ್ಥಿಗಳೊಂದಿಗೆ ಕಂಠೀರವ ಕ್ರೀಡಾಂಗಣಕ್ಕೆ ಶನಿವಾರ ಬೆಳಗ್ಗೆ ಅಭ್ಯಾಸಕ್ಕೆ ತೆರಳಿದ್ದಾರೆ. ಈ ವೇಳೆ ಅವರಿಗೆ ಅಲ್ಲಿನ ಭದ್ರತಾ ಸಿಬ್ಬಂದಿ ಒಳಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ. ಬೇರೆ ದಾರಿ ಕಾಣದೆ ಯತೀಶ್ ಕುಮಾರ್ ಅಥ್ಲೀಟ್‌ಗಳನ್ನು ಕರೆದುಕೊಂಡು ಕಬ್ಬನ್‌ಪಾರ್ಕ್‌ಗೆ ತೆರಳಿ ಅಭ್ಯಾಸ ನಡೆಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಹಿಂದೆ ಇಲಾಖೆ ನಿರ್ದೇಶಕ ಅನುಪಮ್ ಇದ್ದಾರೆ ಎನ್ನುವುದು ಯತೀಶ್ ಅವರ ನೇರ ಆರೋಪವಾಗಿದೆ.
Related Articles
ಅನುಪಮ್ ಅಗರ್ವಾಲ್ ಪತ್ನಿ ಕ್ರೀಡಾಂಗಣದ ಸಿಂಥೆಟಿಕ್ ಟ್ರ್ಯಾಕ್ ಮೇಲೆ ವಾಕಿಂಗ್ ಮಾಡು ತ್ತಿದ್ದರು. ಈ ಸಂದರ್ಭ ನಮ್ಮ ತಂಡದ ವಿದ್ಯಾರ್ಥಿನಿ ಯೊಬ್ಬರಿಗೆ ಅವರ ಪತ್ನಿ ಅಡ್ಡ ಬಂದಿದ್ದರಿಂದ ಸ್ವಲ್ಪ ಬದಿಗೆ ಸರಿಯುವಂತೆ ಕ್ರೀಡಾ ಪಟು ಹೇಳಿದ್ದಾರೆ. ಇದನ್ನು ಗಮನಿಸಿದ ಅನು ಪಮ್ ಅಗರ್ವಾಲ್ ನನ್ನ ಬಳಿಗೆ ಬಂದು ಮನಬಂದಂತೆ ಬೈದರು. ನನ್ನ ಪತ್ನಿ ಜತೆ ನೀನು ಅನುಚಿತ ವರ್ತನೆ ತೋರಿದ್ದೀಯಾ. ಯಾರು ನಿನಗೆ ಇಲ್ಲಿ ಅಭ್ಯಾಸ ನಡೆಸಲು ಅವಕಾಶ ನೀಡಿದ್ದು? ಇಲಾಖೆಗೆ ನೀನು μàಸ್ ಕಟ್ಟುತ್ತಿದ್ದೀಯಾ? ಎಲ್ಲಿದೆ ನಿನ್ನ ಅರ್ಹತಾ ಪತ್ರ? ಎಂದೆಲ್ಲ ಏರು ಧ್ವನಿಯಲ್ಲಿ ಮಾತನಾಡಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ನಾನು ನಯವಾಗಿಯೇ ಮಾತನಾಡಿದೆ. ಅವರೊಂದಿಗೆ ಅನುಚಿತ ವರ್ತನೆ ತೋರಿಲ್ಲ.
Advertisement
ನಮ್ಮ ಮಹಿಳಾ ಅಥ್ಲೀಟ್ ಮಾತನಾಡಿದ್ದಾರೆ ಅಷ್ಟೇ ಎಂದು ಹೇಳಿದೆ. ಆದರೆ ಅವರು ಕೇಳಲಿಲ್ಲ. ಈ ವೇಳೆ ಜಗದೀಶ್ ಎನ್ನುವ ಭದ್ರತಾ ಸಿಬ್ಬಂದಿ ನನಗೆ ಪ್ರಾಣ ಬೆದರಿಕೆ ಹಾಕಿದ್ದಾನೆ. ಇದಾದ ಬಳಿಕ ಸೆ.20ರಂದು ನಾನು ಅರ್ಹತಾ ಪ್ರಮಾಣ ಪತ್ರವನ್ನು ಸಲ್ಲಿಸಲು ಇಲಾಖೆ ನನಗೆ ನೋಟಿಸ್ ಜಾರಿ ಮಾಡಿತು. ನಾನು ಪ್ರಮಾಣ ಪತ್ರ ಸಲ್ಲಿಸಿದೆ. ಆದರೆ ಅದಕ್ಕೆ ಇಲಾಖೆಯಿಂದ ಪ್ರತಿಕ್ರಿಯೆ ಬರಲಿಲ್ಲ. ಇದಾದ ಬಳಿಕ ಕಂಠೀರವದಲ್ಲಿ ನಮಗೆ ಅಭ್ಯಾಸ ನಡೆಸಲು ಬಿಡಲಿಲ್ಲ. ಗೇಟ್ ನಿಂದ ಹೊರಗೆ ಕಳುಹಿಸಿದರು. ಇದರ ವಿರುದಟಛಿ ಪೊಲೀಸ್ ದೂರು ನೀಡಿದೆ. ಅದನ್ನು ಪೊಲೀಸರು ಸ್ವೀಕರಿಸಲಿಲ್ಲ. ಕ್ರೀಡಾ ಸಚಿವರು ಬಳಿ ಹೋದೆ. ಅವರಿಂದಲೂ ನ್ಯಾಯ ಸಿಗಲಿಲ್ಲ.ಬಳಿಕ ಇಲಾಖೆ ನಿರ್ದೇಶಕರ ಬಳಿ ಹೋಗಿ ಕ್ಷಮೆ ಕೇಳಿದೆವು.ಅದನ್ನು ಅವರು ಪುರಸ್ಕರಿಸಿದರು. ಆದರೆ ಈಗ ಮತ್ತೆ ಅಭ್ಯಾಸ ನಡೆಸಲು ಅವಕಾಶ ನಿರಾಕರಿಸಿದ್ದಾರೆ’ ಎಂದು ತಿಳಿಸಿದ್ದಾರೆ.