Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಸಚಿವ ಎನ್.ಎಚ್. ಶಿವಶಂಕರ ರೆಡ್ಡಿ ಅಧ್ಯಕ್ಷತೆ ವಹಿಸಿ ಪದವಿ ಮತ್ತು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ನವದೆಹಲಿಯ ಕೃಷಿ ಅನುಸಂಧಾನ ಪರಿಷತ್ ಮಹಾನಿರ್ದೇಶಕ ಡಾ| ತ್ರಿಲೋಚನ ಮಹಾಪಾತ್ರ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಈ ಸಲ ಯಾರಿಗೂ ಗೌರವ ಡಾಕ್ಟರೇಟ್ ಪ್ರದಾನ ಮಾಡುತ್ತಿಲ್ಲ ಎಂದು ತಿಳಿಸಿದರು.
Related Articles
Advertisement
ಬೀಜ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸೀಮಾ ದೊಡ್ಡಮನಿ, ಕೃಷಿ ಸಂಖ್ಯಾಶಾಸ್ತ್ರದಲ್ಲಿ ವೇಣುಗೋಪಾಲ ವಿ., ಕೃಷಿ ಕೀಟಶಾಸ್ತ್ರದಲ್ಲಿ ನೀನು ಅಗಸ್ಟಿನ್, ಆಹಾರ ತಂತ್ರಜ್ಞಾನದಲ್ಲಿ ಆಲ್ಫೋನ್ಸಾ ಜೇಮ್ಸ್, ಅಗ್ರಿ ಬಿಸಿನೆಸ್ ಮ್ಯಾನೇಜ್‌ಮೆಂಟ್‌ನಲ್ಲಿ ಪೋತನೂರು ಸಂತೋಷಕುಮಾರ, ಗೃಹ ವಿಜ್ಞಾನ ವಿಸ್ತರಣೆ ಮತ್ತು ಸಂವಹನ ನಿರ್ವಹಣೆಯಲ್ಲಿ ದೇವಿಕಾ ಹಿರೇಮಠ, ಆಹಾರ ವಿಜ್ಞಾನ ಮತ್ತು ಪೋಷಣೆಯಲ್ಲಿ ವಿಜಯಕುಮಾರ ಪಾಟೀಲ, ಸಿಲ್ವಿಕಲ್ಚರ್ ಮತ್ತು ಅಗ್ರೋ ಫಾರೆಸ್ಟ್ರಿ (ಅರಣ್ಯ)ಯಲ್ಲಿ ಪ್ರಿಯಾದರ್ಶಿನಿ ಸಾಹು, ಫಾರೆಸ್ಟ್ ಬಯೋಲೋಜಿ ಮತ್ತು ಟ್ರಿ ಇಂಪ್ರೂವ್‌ಮೆಂಟ್ (ಅರಣ್ಯ)ದಲ್ಲಿ ಕೃಷ್ಣ, ನ್ಯಾಚುರಲ್ ರಿಸೋರ್ಸ್ ಮ್ಯಾನೇಜ್‌ಮೆಂಟ್ (ಅರಣ್ಯ)ದಲ್ಲಿ ರೌನಕ್ ಕೀರ್ತಿ ತಲಾ ಒಂದು ಚಿನ್ನದ ಪದಕ ಪಡೆದಿದ್ದಾರೆ ಎಂದು ಡಾ| ಚೆಟ್ಟಿ ತಿಳಿಸಿದರು.
ಪಿಎಚ್‌ಡಿ ಪದವಿ: ಸಸ್ಯ ರೋಗ ಶಾಸ್ತ್ರದಲ್ಲಿ ಬಸಮ್ಮಾ ಹಾದಿಮನಿ ಚಿನ್ನದ ಪದಕ, ಸ್ಮಾರಕ ನಗದು ಬಹುಮಾನ ಪಡೆದಿದ್ದಾರೆ. ಬೇಸಾಯ ಶಾಸ್ತ್ರದಲ್ಲಿ ಶಿಲ್ಪಾ ಚೋಗಟಾಪುರ, ಬೀಜ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಕರ್ತೂರಿ ಸಾಯಿ ಸಂತೋಷ, ಅನುವಂಶೀಯತೆ ಮತ್ತು ಸಸ್ಯ ತಳಿ ಅಭಿವೃದ್ಧಿ ಶಾಸ್ತ್ರದಲ್ಲಿ ವೃಂದಾ ಜೋಶಿ, ಕೃಷಿ ಅರ್ಥಶಾಸ್ತ್ರದಲ್ಲಿ ರಾಧಿಕಾ ವಿ.ಎಸ್., ಕೃಷಿ ಕೀಟಶಾಸ್ತ್ರದಲ್ಲಿ ಮಧುರೀಮಾ ವಿನೋದ್, ಅಗ್ರಿ ಬಿಜಿನೆಸ್ ಮ್ಯಾನೇಜ್‌ಮೆಂಟ್‌ನಲ್ಲಿ ನೀಲಮ್ಮ ಕೋಲಗೇರಿ, ತೋಟಗಾರಿಕೆಯಲ್ಲಿ ಹರ್ಷವರ್ಧನಗೌಡ ವಿ. ತಲಾ, ಕುಟುಂಬ ಸಂಪನ್ಮೂಲ ನಿರ್ವಹಣೆ ವಿಜ್ಞಾನದಲ್ಲಿ ಶೋಭಾ ಹುಯಿಲಗೋಳ, ಗೃಹ ವಿಜ್ಞಾನ ವಿಸ್ತರಣೆ ಮತ್ತು ಸಂವಹನ ನಿರ್ವಹಣೆಯಲ್ಲಿ ಸುಪ್ರಿಯಾ ಪಾಟೀಲ, ಮಾನವ ಅಭಿವೃದ್ಧಿ ಮತ್ತು ಕುಟುಂಬ ಅಧ್ಯಯನ ಶಾಸ್ತ್ರದಲ್ಲಿ ಪವಿತ್ರಾ ಭಟ್‌ಗೆ ತಲಾ ಒಂದು ಚಿನ್ನದ ಪದಕ ಲಭಿಸಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಸ್ತರಣಾ ನಿರ್ದೇಶಕ ಎಚ್. ವೆಂಕಟೇಶ, ಈಶ್ವರಚಂದ್ರ ಹೊಸಮನಿ ಇದ್ದರು.