ಮಂಡ್ಯ: ಲೋಕಾಯುಕ್ತರಿಗೆ ಚಾಕು ಇರಿತ ಪ್ರಕರಣವನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳಲು ಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ತಾಲೂಕಿನ ತೂಬಿನಕೆರೆ ಹೆಲಿಪ್ಯಾಡ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತರಿಗೆ ಭದ್ರತೆ ಇದೆ. ಅವರಿಗೆ ಗನ್‌ಮ್ಯಾನ್ ಕೂಡ ಇದ್ದಾರೆ. ಇಂಥದೊಂದು ಘಟನೆ ನಡೆಯಬಾರದಿತ್ತು, ನಡೆದುಹೋಗಿದೆ. ಕಚೇರಿಯಲ್ಲಿ ಆಗಿರಬಹುದಾದ ಭದ್ರತಾ ವೈಫಲ್ಯ ಕುರಿತು ಗೃಹ ಕಾರ್ಯದರ್ಶಿಗೆ ತನಿಖೆಗೆ ಸೂಚಿಸಿದ್ದೇನೆ. ಲೋಪವಾಗಿದ್ದರೆ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದೇನೆಂದು ಹೇಳಿದರು.
ಈ ಪ್ರಕರಣದಲ್ಲಿ ನನ್ನ ರಾಜೀನಾಮೆ ಕೇಳಲು ಅವರು (ಬಿಜೆಪಿಯವರು) ಯಾರು? ಬಿಜೆಪಿಯವರಿಗೆ ಸಂವಿಧಾನ ಗೊತ್ತಿಲ್ಲ. ಅದಕ್ಕಾಗಿ ರಾಷ್ಟ್ರಪತಿ ಆಳ್ವಿಕೆ ಕೇಳುತ್ತಿದ್ದಾರೆ. ಈಶ್ವರಪ್ಪಗೆ ಬ್ರೆ„ನ್ ಇಲ್ಲ ಎಂದು ಟಾಂಗ್ ನೀಡಿದರು.
ರಾಜ್ಯಸಭೆ ಚುನಾವಣೆಗೂ ಬಿಬಿಎಂಪಿ ಹೊಂದಾಣಿಕೆಗೂ ಯಾವುದೇ ಸಂಬಂಧವಿಲ್ಲ. ಚುನಾವಣೆಯಲ್ಲಿ ಕಾಂಗ್ರೆಸ್‌ನ ಮೂರು ಮಂದಿ ಗೆಲ್ಲುವ ಅವಕಾಶವಿದೆ. ಅಧಿಕಾರ ಹಂಚಿಕೆ ವಿಷಯದಲ್ಲಿ ಬಿಬಿಎಂಪಿಯಲ್ಲಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದೇವೆ. ಅವರು ಬೆಂಬಲ ವಾಪಸ್ ಪಡೆಯುವುದಾದರೆ ಪಡೆಯಲಿ. ಅದಕ್ಕೆ ನಮ್ಮ ಅಭ್ಯಂತರವೇನಿಲ್ಲ.
-ಸಿದ್ದರಾಮಯ್ಯ, ಮುಖ್ಯಮಂತ್ರಿ