ಎಂಥ ತುರ್ತು ಪರಿಸ್ಥಿತಿಯಿದ್ದರೂ ಬಸವನ ಹುಳುವಿನ ಅವಸರವಿಲ್ಲದ ನಿರುಮ್ಮಳ ನಡಿಗೆ ನಮಗೆಲ್ಲರಿಗೂ ಮಾದರಿ. ಆದರೆ ಇವುಗಳ ಅತಿ ನಿಧಾನವೇ ಅವುಗಳ ಜೀವಕ್ಕೆ ಸಂಚಕಾರ ತರುತ್ತಿರುವುದು ವಿಪರ್ಯಾಸ. ರಸ್ತೆ ದಾಟಲು ಗಂಟೆಗಳಷ್ಟು ಸಮಯ ತೆಗೆದುಕೊಳ್ಳುವ ಬಸವನಹುಳುಗಳು ಪೂರ್ತಿಯಾಗಿ ರಸ್ತೆ ದಾಟುವ ಮುನ್ನವೇ ವಾಹನಗಳಿಗೆ ಸಿಕ್ಕಿ ಸಾಯುವುದು ತಿಳಿದಿರುವುದೇ. ರೋಡಿನಿಂದ ಯಾವುದೇ ಪ್ರಾಣಿ ಅಡ್ಡ ಬಂದರೂ ಗಾಡಿ ನಿಲ್ಲಿಸಬಹುದು. ಜಿಂಕೆ ಮುಂತಾದ ಕಾಡು ಪ್ರಾಣಿಗಳು ಅಡ್ಡ ಬಂದರೆ ಕಾನೂನು ಪ್ರಕಾರ ನಿಲ್ಲಿಸಲೇಬೇಕು. ಅದರ ಮೇಲೆ ಹಾಯ್ದರೆ ಫಾರೆಸ್ಟ್ ಗಾರ್ಡ್ ಬಿಡ. ಬೆಕ್ಕು ಅಡ್ಡ ಬಂದರಂತೂ ಶಾಸ್ತ್ರ ಪ್ರಕಾರವಾಗಿ ನಿಲ್ಲಿಸಬೇಕು. ಇಲ್ಲವಾದರೆ ಶನಿ ದೇವ ಬಿಡ. ಆದರೆ ಬಸವನಹುಳುಗಳಿಗೆ ಈ ಸವಲತ್ತುಗಳಿಲ್ಲ. ರಸ್ತೆ ಮಧ್ಯೆ ಬಸವನಹುಳು ಎಲ್ಲಿದೆಯೆಂದು ಭೂತಗನ್ನಡಿ ಇಟ್ಟುಕೊಂಡು ಗಾಡಿ ಓಡಿಸಲಾದೀತೇ? ಇದರಿಂದ ತಿಳಿದು ಬರುವುದೇನೆಂದರೆ ಅತಿ ನಿಧಾನವೂ ಒಳ್ಳೆಯದಲ್ಲ ಎನ್ನುವುದು. ಇದಕ್ಕೆ ಪರಿಹಾರವೆಂದರೆ ಬಸವನಹುಳುಗಳಿಗೂ ಹೆಲ್ಮೆಟ್ ಕಡ್ಡಾಯ ಮಾಡುವುದು ಅಥವಾ “ಝೀಬ್ರಾ ಕ್ರಾಸಿಂಗ್’ನಂತೆ ಬಸವನಹುಳುಗಳಿಗೆಂದೇ ಪ್ರತ್ಯೇಕವಾಗಿ “ಸ್ನೇಲ್ ಕ್ರಾಸಿಂಗ್’ ನಿರ್ಮಿಸಬೇಕಷ್ಟೇ!
Advertisement