Advertisement

Toolkit ಕೇಸ್: ದಿಶಾ ಸೆರೆ ಬೆನ್ನಲ್ಲೇ ನಿಕಿತಾ ವಿರುದ್ಧ ಜಾಮೀನು ರಹಿತ ವಾರಂಟ್

04:03 PM Feb 15, 2021 | Team Udayavani |

ನವದೆಹಲಿ:ಕೃಷಿ ಕಾಯ್ದೆಗಳ ವಿರುದ್ಧದ ರೈತರ ಪ್ರತಿಭಟನೆ ಮತ್ತು ಗ್ರೇಟಾ ಥನ್ ಬರ್ಗ್ ಅವರ ಟೂಲ್ ಕಿಟ್ ಪ್ರಕರಣದಲ್ಲಿ ಬೆಂಗಳೂರಿನ ದಿಶಾ ರವಿ(21ವರ್ಷ) ಎಂಬಾಕೆಯನ್ನು ದಿಲ್ಲಿ ಪೊಲೀಸ್ ಸೈಬರ್ ಘಟಕ ಬಂಧಿಸಿದ ಬೆನ್ನಲ್ಲೇ ಇದೀಗ ದೆಹಲಿ ಪೊಲೀಸರು ನಿಕಿತಾ ಜಾಕೋಬ್ ಹಾಗೂ ಶಾಂತನು ಸೇರಿದಂತೆ ಇಬ್ಬರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದ್ದಾರೆ.

Advertisement

ಇದನ್ನೂ ಓದಿ:ಚೆನ್ನೈನಲ್ಲಿ ಇಂಗ್ಲೆಂಡ್ ಸ್ಪಿನ್ ವ್ಯೂಹ ಬೇಧಿಸಿದ ಅಶ್ವಿನ್ ಮನಮೋಹಕ ಶತಕ, ಭಾರತ ಬೃಹತ್ ಮೊತ್ತ

ಟೂಲ್ ಕಿಟ್ ಪ್ರಕರಣದಲ್ಲಿ ಶಾಮೀಲಾಗಿರುವ ನಿಕಿತಾ ಜಾಕೋಬ್ ಮತ್ತು ಶಾಂತನು ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಜಾಡು ಹಿಡಿದು ಹೊರಟಿದ್ದ ದೆಹಲಿ ಪೊಲೀಸರಿಗೆ ವಕೀಲೆ ನಿಕಿತಾ ಮತ್ತು ಶಾಂತನು ಶಾಮೀಲಾತಿ ಪತ್ತೆಯಾಗಿದ್ದು, ಲ್ಯಾಪ್ ಟಾಪ್ ಅನ್ನು ವಶಪಡಿಸಿಕೊಂಡಿದ್ದರು. ಇದೀಗ ಬಂಧನ ಭೀತಿ ಎದುರಿಸುತ್ತಿರುವ ನಿಕಿತಾ ಜಾಕೋಬ್ ಪೊಲೀಸರು ತನ್ನನ್ನು ಬಂಧಿಸದಂತೆ ತಾತ್ಕಾಲಿಕ ರಕ್ಷಣೆ ನೀಡುವಂತೆ ಕೋರಿ ಬಾಂಬೆ ಹೈಕೋರ್ಟ್ ಮೊರೆ ಹೋಗಿರುವುದಾಗಿ ವರದಿ ತಿಳಿಸಿದೆ.

ತನ್ನ ಕಕ್ಷಿದಾರರ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕೆಂದು ಕೋರಿ ನಿಕಿತಾ ಪರ ವಕೀಲರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಾಳೆ(ಮಂಗಳವಾರ ಫೆ.16) ನಡೆಸುವುದಾಗಿ ಬಾಂಬೆ ಹೈಕೋರ್ಟ್ ಪೀಠ ಹೇಳಿದೆ.

Advertisement

ಎಎನ್ ಐ ವರದಿ ಪ್ರಕಾರ, ನಾಲ್ಕು ದಿನಗಳ ಹಿಂದೆ ದೆಹಲಿ ಸ್ಪೆಷಲ್ ಸೆಲ್ ತಂಡ ನಿಕಿತಾ ಜಾಕೋಬ್ ಮನೆಗೆ ತೆರಳಿದ್ದು, ಈ ವೇಳೆ ಆಕೆಯ ಗ್ಯಾಡ್ಜೆಟ್ ಅನ್ನು ಪರಿಶೀಲಿಸಿದ್ದರು. ಎರಡನೇ ಬಾರಿ ವಿಚಾರಣೆ ನಡೆಸಲು ಮನೆಗೆ ತೆರಳಿದಾಗ ಆಕೆ ಲಭ್ಯವಾಗಿರಲಿಲ್ಲವಾಗಿತ್ತು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ವರದಿ ಪ್ರಕಾರ, ಪೊಯೆಟಿಕ್ ಜಸ್ಟೀಸ್ ಫೌಂಡೇಶನ್ ಫೌಂಡರ್ ಎಂಒ ಧಾಲಿವಾಲ್ ಕೆನಡಾದಲ್ಲಿರುವ ನಿಕಿತಾ ಸ್ನೇಹಿತ ಪುನೀತ್ ಮೂಲಕ ನಿಕಿತಾ ಜಾಕೋಬ್ ಳನ್ನು ಸಂಪರ್ಕಿಸಿದ್ದು, ಗಣರಾಜ್ಯೋತ್ಸವ ದಿನ ಟ್ವೀಟರ್ ನಲ್ಲಿ ಸಂಚನ್ನು ನಡೆಸುವುದು ಇದರ ಉದ್ದೇಶವಾಗಿತ್ತು. ಗಣರಾಜ್ಯೋತ್ಸವ ಮುನ್ನ ಝೂಂ ಮೀಟಿಂಗ್ ನಡೆದಿದ್ದು, ಈ ಸಭೆಯಲ್ಲಿ ಧಾಲಿವಾಲ್, ನಿಕಿತಾ, ದಿಶಾ ರವಿ ಹಾಗೂ ಇತರರು ಭಾಗವಹಿಸಿದ್ದರು ಎಂದು ವಿವರಿಸಿದೆ.

ಯಾರೀಕೆ ನಿಕಿತಾ ಜಾಕೋಬ್:

ನಿಕಿತಾ ಜಾಕೋಬ್ ಮುಂಬೈ ಮೂಲದ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದು, ಈಕೆ ಪುಣೆಯ ಇಂಡಿಯನ್ ಲಾ ಸೊಸೈಟಿ ಕಾಲೇಜಿನಲ್ಲಿ ಪದವಿ ಪಡೆದಿದ್ದಳು. ಈಕೆ ಮಹಾರಾಷ್ಟ್ರದ ಬಾಂಬೆ ಹೈಕೋರ್ಟ್ ಮತ್ತು ಗೋವಾ ಬಾರ್ ಕೌನ್ಸಿಸಲ್ ನಲ್ಲಿ ವಕೀಲರಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು, ಈಕೆ ದಾವೆ, ವಿವಾದ ಪರಿಹಾರ ಹಾಗೂ ಸಲಹಾ ಕಾರ್ಯಗಳಲ್ಲಿ ಪರಿಣತರಾಗಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next