Advertisement
205 ರನ್ ಗುರಿ ಬೆನ್ನತ್ತಿದ ಆರ್ ಸಿಬಿಗೆ ಕೆಕೆಆರ್ ಸ್ಪಿನ್ನರ್ ಗಳು ಕಾಡಿದರು. ಅನುಭವಿಗಳಾದ ಸುನೀಲ್ ನರೈನ್, ವರುಣ್ ಚಕ್ರವರ್ತಿ ಜೊತೆ ಹೊಸ ಆಟಗಾರ ಸುಯಶ್ ಶರ್ಮಾ ಈಡನ್ ಗಾರ್ಡನ್ ನಲ್ಲಿ ಮಿಂಚಿದರು. ಈ ಮೂವರೇ ಆರ್ ಸಿಬಿಯ 9 ವಿಕೆಟ್ ಕಿತ್ತರು.
Related Articles
Advertisement
ಮತ್ತೊಂದು ಗಮನಿಸಬೇಕಾದ ವಿಚಾರವೆಂದರೆ, ದೆಹಲಿಯ U-25 ತಂಡಕ್ಕಾಗಿ ಆಡುವ ಸುಯಶ್ ಇದಕ್ಕೂ ಮೊದಲು ಯಾವುದೇ ಲಿಸ್ಟ್ ಎ, ಪ್ರಥಮ ದರ್ಜೆ, ಅಥವಾ ಟಿ20 ಪಂದ್ಯಗಳನ್ನು ಆಡಿಲ್ಲ.
ಪಂದ್ಯದ ನಂತರ ಸುಯಶ್ ಬಗ್ಗೆ ಮಾತನಾಡಿದ ಕೆಕೆಆರ್ ನಾಯಕ ನಿತೀಶ್ ರಾಣಾ, “ಸುಯಶ್ ಆತ್ಮವಿಶ್ವಾಸದ ಯುವಕ ಮತ್ತು ಅವರು ತಮ್ಮ ಮೇಲೆ ನಂಬಿಕೆ ಹೊಂದಿದ್ದಾರೆ. ಅವರು ತಮ್ಮ ಅವಕಾಶವನ್ನು ಚೆನ್ನಾಗಿ ಬಳಸಿದ್ದಾರೆ, ಅವರು ಆ ರೀತಿ ಬೌಲ್ ಮಾಡುವುದನ್ನು ನೋಡುವುದು ಅದ್ಭುತವಾಗಿದೆ” ಎಂದು ಹೇಳಿದರು.
ಕೆಕೆಆರ್ ಕೋಚ್ ಚಂದ್ರಕಾಂತ್ ಪಂಡಿತ್ ಮಾತನಾಡಿ, “ವರುಣ್, ಸುನೀಲ್ ನರೈನ್ ಉತ್ತಮವಾಗಿ ಬೌಲಿಂಗ್ ಮಾಡಿದರು. ಹೊಸಬರು ಬೆಂಬಲ ನೀಡಿದರು. ನಾವು ಸುಯಶ್ ನನ್ನು ಟ್ರಯಲ್ ಮ್ಯಾಚ್ ಗಳಲ್ಲಿ ನೋಡಿದ್ದೇವೆ, ಆತ ಬೌಲಿಂಗ್ ಮಾಡುವ ವಿಧಾನ ಚೆನ್ನಗಿದೆ. ವೇಗವಾಗಿ ಚೆಂಡೆಸುತ್ತಾರೆ. ಅನನುಭವಿ ಆದರೆ ಉತ್ತಮ ಆತ್ಮವಿಶ್ವಾಸದಿಂದ ಆಡುತ್ತಾರೆ” ಎಂದರು.
ಆರ್ ಸಿಬಿ ವಿರುದ್ಧ ನಾಲ್ಕು ಓವರ್ ಬೌಲಿಂಗ್ ಮಾಡಿದ ಸುಯಶ್ ಶರ್ಮಾ 30 ರನ್ ನೀಡಿ ಮೂರು ವಿಕೆಟ್ ಕಿತ್ತರು. ದಿನೇಶ್ ಕಾರ್ತಿಕ್, ಅನುಜ್ ರಾವತ್ ಮತ್ತು ಕರಣ್ ಶರ್ಮಾ ಅವರನ್ನು ಸುಯಶ್ ಔಟ್ ಮಾಡಿದರು.