ನವದೆಹಲಿ: ಭಾರತದಲ್ಲಿ ವಾಸವಾಗಿರುವ ಮುಸ್ಲಿಮರು ಭಯಪಡಬೇಕಾಗಿಲ್ಲ. ಆದರೆ ಅವರು ತಾವೇ ಶ್ರೇಷ್ಠರು ಎಂಬ ಅಬ್ಬರದ ಶ್ರೇಷ್ಠತೆಯ ಪ್ರತಿಪಾದನೆ ತ್ಯಜಿಸಬೇಕು ಎಂದು ಆರ್ ಎಸ್ ಎಸ್ ವರಿಷ್ಠ ಮೋಹನ್ ಭಾಗವತ್ ಅವರ ಸಲಹೆಗೆ ಪ್ರತಿಕ್ರಿಯೆ ನೀಡಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಭಾರತದಲ್ಲಿ ಮುಸ್ಲಿಮರು ವಾಸ್ತವ್ಯ ಹೂಡಲು ಅನುಮತಿ ನೀಡಲು ಅವರು (ಭಾಗವತ್) ಯಾರು ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಮೆಟ್ರೋ ಪಿಲ್ಲರ್ ದುರಂತ: ದಾವಣಗೆರೆಯಲ್ಲಿ ತೇಜಸ್ವಿನಿ- ವಿಹಾನ್ ಅಂತ್ಯಕ್ರಿಯೆ
“ಭಾರತದಲ್ಲಿ ಮುಸ್ಲಿಮರು ವಾಸಿಸಲು ಅಥವಾ ನಮ್ಮ ನಂಬಿಕಯನ್ನು ಅನುಸರಿಸಲು ಅನುಮತಿ ನೀಡಲು ಮೋಹನ್ ಭಾಗವತ್ ಯಾರು? ಅಲ್ಲಾಹುವಿನ ಇಚ್ಛೆಯಂತೆ ನಾವು ಭಾರತೀಯರಾಗಿದ್ದೇವೆ. ನಮ್ಮ ಪೌರತ್ವದ ಮೇಲೆ ಷರತ್ತು ವಿಧಿಸಲು ಅವರು ಎಷ್ಟು ಧೈರ್ಯ ಹೊಂದಿದ್ದಾರೆ. ನಾವು ಇಲ್ಲಿ ನಮ್ಮ ನಂಬಿಕೆ ಜತೆಗಿನ ಹೊಂದಾಣಿಕೆ ಅಥವಾ ನಾಗ್ಪುರದ ಬ್ರಹ್ಮಾಚಾರಿಗಳ ಗುಂಪನ್ನು ಮೆಚ್ಚಿಸಲು ನಾವು ಇಲ್ಲಿಲ್ಲ ಎಂದು ಒವೈಸಿ ವಾಗ್ದಾಳಿ ನಡೆಸಿದ್ದಾರೆ.
“ಆರ್ ಎಸ್ ಎಸ್ ನ ಶ್ರೇಷ್ಠತೆಯನ್ನು ಪ್ರತಿಪಾದಿಸುವ ಅಬ್ಬರದ ಭಾಷಣವನ್ನು ಮೆಚ್ಚುವ ಸಾಕಷ್ಟು ಹಿಂದೂಗಳಿದ್ದಾರೆ. ಪ್ರತಿಯೊಬ್ಬ ಅಲ್ಪಸಂಖ್ಯಾತ ಏನು ಭಾವಿಸಿಕೊಳ್ಳುತ್ತಾನೆ ಎಂಬುದನ್ನು ಬಿಟ್ಟು ಬಿಡಿ. ಯಾಕೆಂದರೆ ನಿಮ್ಮದೇ ದೇಶದಲ್ಲಿ (ಭಾರತ) ನೀವು ದೇಶವನ್ನು ವಿಭಜಿಸಲು ನಿರತರಾಗಿರುವ ನೀವು (ಆರ್ ಎಸ್ಎಸ್) ಜಗತ್ತಿಗೆ ವಸುದೈವ ಕುಟುಂಬದ ಪಾಠ ಹೇಳಲು ಸಾಧ್ಯವಿಲ್ಲ” ಎಂದು ಒವೈಸಿ ತಿರುಗೇಟು ನೀಡಿರುವುದಾಗಿ ವರದಿ ತಿಳಿಸಿದೆ.