Advertisement
78 ವರ್ಷದ ಡೊನಾಲ್ಡ್ ಟ್ರಂಪ್ ಭರ್ಜರಿ ಗೆಲುವು ಸಾಧಿಸುವ ಮೂಲಕ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ತಮ್ಮ ಪ್ರತಿಸ್ಪರ್ಧಿ ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಅವರನ್ನು ಸೋಲಿಸುವ ಮೂಲಕ 2ನೇ ಬಾರಿ ಅಮೆರಿಕದ ಅಧ್ಯಕ್ಷ ಗಾದಿಗೆ ಏರಿದ್ದಾರೆ.
Related Articles
Advertisement
ಕಾಶ್ ಪಟೇಲ್ ಡೊನಾಲ್ಡ್ ಟ್ರಂಪ್ ನಿಕಟವರ್ತಿ, ಪಟೇಲ್ ಗುಪ್ತಚರ ಮತ್ತು ರಕ್ಷಣಾ ವಿಭಾಗ ಎರಡರಲ್ಲೂ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಪಟೇಲ್ 1986ರಲ್ಲಿ ನ್ಯೂಯಾರ್ಕ್ ನ ಗಾರ್ಡನ್ ಸಿಟಿಯಲ್ಲಿ ಜನಿಸಿದ್ದರು. ಭಾರತದ ಗುಜರಾತಿನ ವಲಸಿಗ ದಂಪತಿಯ ಪುತ್ರ ಕಾಶ್ ಪಟೇಲ್. ಪಟೇಲ್ ಪೋಷಕರು ಪೂರ್ವ ಆಫ್ರಿಕಾದಲ್ಲಿ ಬೆಳೆದಿದ್ದು, ಪಟೇಲ್ ತಂದೆ 1970ರಲ್ಲಿ ಈದಿ ಅಮೀನ್ ಆಡಳಿತ ನಡೆಸುತ್ತಿದ್ದ ವೇಳೆ ಉಗಾಂಡಕ್ಕೆ ಓಡಿ ಹೋಗಿದ್ದು, ನಂತರ ಪೋಷಕರು ಅಮೆರಿಕಕ್ಕೆ ವಲಸೆ ಹೋಗಿದ್ದರು.
ಪೇಸ್ ಯೂನಿರ್ವಸಿಟಿಯಲ್ಲಿ ಕಾನೂನು ಪದವಿ ಪಡೆದ ನಂತರ ಆರಂಭದಲ್ಲಿ ಪಟೇಲ್ ಉದ್ಯೋಗ ಗಿಟ್ಟಿಸಿಕೊಳ್ಳಲು ತುಂಬಾ ಶ್ರಮಪಟ್ಟಿದ್ದರು. ಬಳಿಕ ಸುಮಾರು 9 ವರ್ಷಗಳ ಕಾಲ ವಕೀಲರಾಗಿ ಕಾರ್ಯನಿರ್ವಹಿಸಿದ್ದು, ತದನಂತರ ಅಮೆರಿಕದ ಜಸ್ಟೀಸ್ ಡಿಪಾರ್ಟ್ ಮೆಂಟ್ ಗೆ ಆಯ್ಕೆಯಾಗಿದ್ದರು.
2017ರಲ್ಲಿ ಪಟೇಲ್ ಅವರು ಟ್ರಂಪ್ ಅವರ ನಿಕಟವರ್ತಿಯಾದ ರಿಪಬ್ಲಿಕನ್ ಕಾಂಗ್ರೆಸ್ ನ ಡೆವಿನ್ ನೂನ್ಸ್ ನೇತೃತ್ವದ ಗುಪ್ತಚರ ಇಲಾಖೆಯ ಖಾಯಂಮಾತಿ ಆಯ್ಕೆ ಸಮಿತಿಯ ಸದಸ್ಯರಾಗಿ ನೇಮಕಗೊಂಡಿದ್ದರು.
2016ರಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾದ ಕೈವಾಡ ಇದ್ದಿರುವ ಆರೋಪ ಬಗ್ಗೆ ಸಮಿತಿಯ ತನಿಖೆಯ ನಂತರ ಪಟೇಲ್ ದೇಶದಲ್ಲಿ ಗಮನ ಸೆಳೆದಿದ್ದರು. ಟ್ರಂಪ್ ಪ್ರಚಾರದ ವೇಳೆ ಎಫ್ ಬಿಐ ಕಣ್ಗಾವಲು ಅಧಿಕಾರಿಯನ್ನು ದುರುಪಯೋಗಪಡಿಸಿಕೊಂಡಿ ಎಂದು ಆರೋಪಿಸಿ ವಿವಾದಾತ್ಮಕ ನ್ಯೂನ್ಸ್ ಮೆಮೊ ಕೊಡುವಲ್ಲಿ ಪಟೇಲ್ ಪ್ರಮುಖ ಪಾತ್ರ ವಹಿಸಿದ್ದರು.
ಈ ಮೆಮೊ ಅಮೆರಿಕ ನ್ಯಾಯಾಂಗ ಇಲಾಖೆಯ ಕಾರ್ಯವೈಖರಿ ಬಗ್ಗೆ ಭಾರೀ ಟೀಕೆಗೆ ಕಾರಣವಾಗಿತ್ತು. ಇದು ಟ್ರಂಪ್ ಅವರ ಗಮನ ಸೆಳೆಯುವ ಮೂಲಕ ಪಟೇಲ್ ನಿಕಟವರ್ತಿಯಾಗಲು ನೆರವಾಯಿತು ಎಂದು ವರದಿ ವಿವರಿಸಿದೆ.
ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ ನ ಭಯೋತ್ಪಾದಕ ನಿಗ್ರಹ ನಿರ್ದೇಶಕರಾಗಿ ಆಯ್ಕೆಗೊಂಡಿದ್ದ ಸಂದರ್ಭದಲ್ಲಿ ಪಟೇಲ್ ಅವರು, ಐಸಿಸ್, ಅಲ್ ಬಗ್ದಾದಿ ಮತ್ತು ಖಾಸೆಮ್ ಅಲ್ ರಿಮಿಯಂತಹ ನಾಯಕತ್ವವನ್ನು ನಾಮಾವಶೇಷಗೊಳಿಸುವ ಕಾರ್ಯಚರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು.
ಟ್ರಂಪ್ ಪ್ರಥಮ ಬಾರಿಯ ಅಧ್ಯಕ್ಷ ಅವಧಿಯಲ್ಲಿ ಪಟೇಲ್ ಜವಾಬ್ದಾರಿ:
ಡೊನಾಲ್ಡ್ ಟ್ರಂಪ್ ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕಾಶ್ ಪಟೇಲ್ ನ್ಯಾಷನಲ್ ಸೆಕ್ಯುರಿಟಿ ಸೇರಿದಂತೆ ಹಲವು ಉನ್ನತ ಮಟ್ಟದ ಹುದ್ದೆಯನ್ನು ನಿರ್ವಹಿಸಿದ್ದರು. ಡೊನಾಲ್ಡ್ ಟ್ರಂಪ್ ಅವರ ಆಡಳಿತಾವಧಿಯಲ್ಲಿ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ (NSC)ನ ಭಯೋತ್ಪಾದಕ ನಿಗ್ರಹ ಸಲಹೆಗಾರರಾಗಿ ಕರ್ತವ್ಯ ನಿರ್ವಹಿಸಿದ್ದರು.