ಸಹರಾನ್ ಪುರ(ಉತ್ತರಪ್ರದೇಶ): ಸದ್ಯ ಸಾಮಾಜಿಕ ತಾಣದಲ್ಲಿ ಪ್ರತಿನಿತ್ಯವೂ ನಾನಾ ಕಾರಣಗಳಿಂದ ಯಾರಾದರೊಬ್ಬರು ವೈರಲ್ ಆಗುತ್ತಲೇ ಇರುತ್ತಾರೆ. ಲೋಕಸಭಾ ಚುನಾವಣೆ ವೇಳೆ ಪೋಲಿಂಗ್ ಏಜೆಂಟ್ ಆಗಿರುವ ಮಹಿಳೆಯೊಬ್ಬರು ಮತಗಟ್ಟೆಯಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿ ಭಾರಿ ಸುದ್ದಿಯಾಗಿದ್ದಾರೆ.
ಸಹರಾನ್‌ಪುರ ಲೋಕಸಭಾ ಚುನಾವಣೆಯಲ್ಲಿ ಗಂಗೋಹ್ ವಿಧಾನಸಭಾ ಕ್ಷೇತ್ರದಲ್ಲಿ ಮತಗಟ್ಟೆಯಲ್ಲಿ ಕರ್ತವ್ಯವನ್ನು ಮಾಡುತ್ತಿರುವ ಇಶಾ ಅರೋರಾ ಇತರ ಪೋಲಿಂಗ್ ಏಜೆಂಟರೊಂದಿಗೆ ಬೂತ್‌ಗೆ ಬಂದಾಗ ಅವರ ಮೊದಲ ವೀಡಿಯೊ ವೈರಲ್ ಆಗಿತ್ತು. ಇಶಾ ಅರೋರಾ ಮತಗಟ್ಟೆಯಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿ ಬಿಟ್ಟರು.
ಸ್ಟೇಟ್ ಬ್ಯಾಂಕ್ ಉದ್ಯೋಗಿಯಾಗಿರುವ ಇಶಾ ಅರೋರಾ ಅವರು ಮದರಿ ಎಂಬ ಕುಗ್ರಾಮದಲ್ಲಿ ಚುನಾವಣೆಯ ಕರ್ತವ್ಯ ನಿರ್ವಹಿಸುತ್ತಿದ್ದಾರಾದರೂ ಭಾರಿ ಸುದ್ದಿಯಾಗಿದ್ದಾರೆ. ಇಶಾ ಅರೋರಾ ಈ ಹಿಂದೆ ಎರಡು ಬಾರಿ ಚುನಾವಣ ಕರ್ತವ್ಯ ನಿರ್ವಹಿಸಿದ್ದಾರೆ.
ವೈರಲ್ ಆಗಿರುವ ಕುರಿತು ಪ್ರತಿಕ್ರಿಯಿಸಿರುವ ಇಶಾ ‘ “ನೀವು ಯಾವುದೇ ಕರ್ತವ್ಯವನ್ನು ಪಡೆದರೆ ಸಮಯಪಾಲನೆ ಮಾಡಬೇಕು ಎಂದು ನಾನು ಭಾವಿಸುತ್ತೇನೆ. ನಾನು ನನ್ನ ಕರ್ತವ್ಯವನ್ನು ಸಮಯಕ್ಕೆ ಸರಿಯಾಗಿ ವಹಿಸಿಕೊಂಡಿದ್ದೇನೆ. ಕಾರ್ಯನಿರ್ವಹಣೆಯು ಸುಗಮವಾಗಿರಲು ಪ್ರತಿಯೊಬ್ಬರೂ ಸಮಯಪಾಲನೆ ಮಾಡಬೇಕು. ಇಲ್ಲದಿದ್ದರೆ ಇಷ್ಟು ದೊಡ್ಡ ಚುನಾವಣೆಗಳನ್ನು ನಡೆಸುವುದು ಸಾಧ್ಯವಿರಲಿಲ್ಲ. ವಿಡಿಯೋಗೆ ಬಂದಿರುವ ವೀಕ್ಷಿಸಲು ನನಗೆ ಸಮಯ ಸಿಗಲಿಲ್ಲ. ಇದು ಚುನಾವಣ ಸಮಯ ಮತ್ತು ಸಮಯಕ್ಕೆ ಬರುವುದು ನನ್ನ ಕರ್ತವ್ಯ ಆದ್ದರಿಂದ ನಾನು ಕಾರ್ಯನಿರತನಾಗಿದ್ದೇನೆ. ನನ್ನ ಸಮಯಪ್ರಜ್ಞೆ ಮತ್ತು ಭಕ್ತಿಯಿಂದ ಇದು ವೈರಲ್ ಆಗಿದೆ ಎಂದೆನಿಸುತ್ತದೆ” ಎಂದರು.