ನವದೆಹಲಿ: ನವಜ್ಯೋತ್ ಸಿಂಗ್ ಸಿಧು ಪಾಕಿಸ್ತಾನದ ಅಧ್ಯಕ್ಷರ ಜತೆ ನಿಕಟ ಸಂಪರ್ಕ ಹೊಂದಿದ್ದು, ಇದು ದೇಶದ ಭದ್ರತೆಗೆ ಅಪಾಯಕಾರಿ ಎಂದು ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾ.ಅಮರಿಂದರ್ ಸಿಂಗ್ ಆರೋಪಿಸಿದ್ದರು. ಆದರೆ ಇದೀಗ ಹಿಂದಿನ ಸಹೋದ್ಯೋಗಿ ಪಂಜಾಬ್ ಉಪ ಮುಖ್ಯಮಂತ್ರಿ ಸುಖ್ ಜಿಂದರ್ ಸಿಂಗ್ ರಾಂಧವಾ ಮತ್ತು ಅಮರಿಂದರ್ ಸಿಂಗ್ ನಡುವಿನ ವಾಕ್ಸಮರ ತಾರಕ್ಕೇರಿದೆ. ಅದಕ್ಕೆ ಕಾರಣ
ಪಾಕಿಸ್ತಾನದಲ್ಲಿರುವ ಕ್ಯಾ.ಅಮರಿಂದರ್ ಸಿಂಗ್ ಅವರ ಗೆಳತಿ!
ಏನಿದು ಆರೋಪ, ಯಾರೀಕೆ ಅರೂಸಾ ಆಲಂ?
ಪಾಕಿಸ್ತಾನದ ಐಎಸ್ ಐ ಜತೆಗೆ ಮಾಜಿ ಪತ್ರಕರ್ತೆ ಅರೂಸಾ ಅಲಂ ಹೊಂದಿರುವ ಸಂಪರ್ಕದ ಬಗ್ಗೆ ರಾ(RAW) ತನಿಖೆ ನಡೆಸಬೇಕೆಂಬುದು ಸುಖ್ ಜಿಂದರ್ ಸಿಂಗ್ ಒತ್ತಾಯ. ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಹಲವು ವರ್ಷಗಳಿಂದ ಪಾಕಿಸ್ತಾನಿ ಮಾಜಿ ಪತ್ರಕರ್ತೆ ಅರೂಸಾ ಆಲಂ ಭೇಟಿಯಾಗುತ್ತಿದ್ದಾರೆ. ಅಲ್ಲದೇ ಆಕೆ ಕ್ಯಾಪ್ಟನ್ ಅವರ ಪ್ರೇಯಸಿಯೂ ಹೌದು. ಆಲಂಗೆ ಐಎಸ್ ಐ ಜೊತೆ ಸಂಪರ್ಕ ಇದೆಯೇ ಎಂಬುದನ್ನು ಪತ್ತೆಹಚ್ಚಲು ತನಿಖೆಗೆ ಒಪ್ಪಿಸಲು ಕ್ಯಾ. ನಿರಾಕರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ ಎಂದು ರಾಂಧವಾ ದೂರಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ರಾಂಧವಾ, ಅಸೂರಾ ಆಲಂ ಭೇಟಿಗೆ ಸಂಬಂಧಿಸಿದಂತೆ ತನಿಖೆ ಬೇಡ ಎಂದು ಕ್ಯಾಪ್ಟನ್ ಭಯಪಡುತ್ತಿರುವುದೇಕೆ?ನಾನು ಇತ್ತೀಚೆಗಷ್ಟೇ ಸಿಂಗ್ ಹಾಗೂ ಐಎಸ್ ಐ ಏಜೆಂಟ್ (ಆಲಂ) ಜತೆಗಿನ ಸಂಬಂಧದ ಬಗ್ಗೆ ಪ್ರಶ್ನಿಸಿದ್ದೆ. ಈ ಸಂದರ್ಭದಲ್ಲಿ ಅಸೂರಾ ಆಲಂ ಹೆಸರನ್ನೂ ಉಲ್ಲೇಖಿಸಿದ್ದೆ. ಒಂದು ವೇಳೆ ಇದರಲ್ಲಿ ಬೇರೆ ಏನಾದರು ಉದ್ದೇಶ ಇದ್ದರೇ ನಾವು ಈ ಬಗ್ಗೆ ಗಮನಹರಿಸಬೇಕಾಗುತ್ತದೆ ಎಂದು ಹೇಳಿದ್ದೆ ಎಂಬುದಾಗಿ ತಿಳಿಸಿದ್ದಾರೆ.
ರಾಂಧವಾ ಆರೋಪಕ್ಕೆ ತಿರುಗೇಟು ನೀಡಿರುವ ಕ್ಯಾಪ್ಟನ್, ನೀವು(ರಾಂಧವಾ) ನನ್ನ ಸಂಪುಟದಲ್ಲಿ ಸಚಿವರಾಗಿದ್ದಾಗ ಯಾವತ್ತೂ ಅಸೂರಾ ಆಲಂ ಬಗ್ಗೆ ಆಕ್ಷೇಪವೆತ್ತಿಲ್ಲ. ಅಷ್ಟೇ ಅಲ್ಲ ಆಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುಮತಿ ಪಡೆದುಕೊಂಡೇ ಸುಮಾರು 16 ವರ್ಷಗಳ ಕಾಲ ಭೇಟಿ ನೀಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
2004ರಲ್ಲಿ ಕ್ಯಾಪ್ಟನ್ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅರೂಸಾ ಆಲಂ ಭೇಟಿಯಾಗಿದ್ದರು. ಈಕೆ ಅಕ್ಲೀನ್ ಅಖ್ತರ್ ಪುತ್ರಿ. ಈಕೆಗೆ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಬಳಿಕ ಕ್ಯಾಪ್ಟನ್ ಮತ್ತು ಅಸೂರಾ ಸಾಕಷ್ಟು ಬಾರಿ ಒಟ್ಟಿಗೆ ಕಾಣಿಸಿದ್ದರು. ಆದರೆ ತಾವಿಬ್ಬರೂ ಜಸ್ಟ್ ಫ್ರೆಂಡ್ಸ್ ಎಂದು ಆಲಂ ಹೇಳಿದ್ದಳು. ಆದರೆ ಕ್ಯಾಪ್ಟನ್ ಬಯೋಗ್ರಫಿ “ದ ಪೀಪಲ್ಸ್ ಮಹಾರಾಜಾ” ದಲ್ಲಿ ತನ್ನ ಮತ್ತು ಅರೂಸಾ ಸಂಬಂಧದ ಬಗ್ಗೆ
ಬಹಿರಂಗಪಡಿಸಿದ್ದರು.