Advertisement
ಐದು ಪುಟಗಳ ದೂರಿನಲ್ಲಿ ಶ್ರುತಿ ಮದುವೆ ಗುಟ್ಟು ಬಯಲು!
Related Articles
Advertisement
ದೂರಿನ ಪ್ರತಿಯಲ್ಲಿ ತನ್ನ ಹೆಸರು ಮಾತ್ರ ನಮೂದಿಸಿದ್ದ ಶ್ರುತಿಗೆ ಮದುವೆಯಾಗಿದೆಯಾ ಎಂಬ ಪ್ರಶ್ನೆಗೆ ಹೌದು ಸರ್ ಆಗಿದೆ, ಆದರೆ ಇನ್ನೂ ಈ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿಲ್ಲ ಎಂದರು. ಬಳಿಕ ದೂರಿನ ಪ್ರತಿಯಲ್ಲಿ ಶ್ರುತಿ ಹೆಸರಿನ ಸಮೀಪ ವೈಫ್ ಆಫ್ ರಾಮ್ ಕುಮಾರ್ ಎಂದು ಸೇರಿಸಿದ್ದರು.
ಈ ಮೂಲಕ ಶ್ರುತಿ ಹರಿಹರನ್ ಇಷ್ಟು ದಿನಗಳ ಕಾಲ ಮುಚ್ಚಿಟ್ಟಿದ್ದ ಮದುವೆ ರಹಸ್ಯ ಬಟಬಯಲಾದಂತಾಗಿದೆ! 2017ರಲ್ಲಿ ಶ್ರುತಿ ಹರಿಹರನ್ ರಹಸ್ಯವಾಗಿ ಮದುವೆಯಾಗಿದ್ದಾರೆಂಬ ಸುದ್ದಿ ಹಬ್ಬಿದಾಗ, ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಶ್ರುತಿ, ನಾನು ಎಲ್ಲಿಯೂ ರಹಸ್ಯವಾಗಿ ಮದುವೆ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.