Advertisement

ಯಾರಿಗೆ ಬೇಡ ಮಂಗಲ? ಅದಕ್ಕಾಗಿಯೇ ಬರೆದರು ಮಂಗಲಾಷ್ಟಕ

03:34 PM Jan 01, 2018 | |

ಉಡುಪಿ ಶ್ರೀಕೃಷ್ಣ ಮಠದ ದ್ವೆ„ವಾರ್ಷಿಕ ಪರ್ಯಾಯ ಪೂಜಾ ವ್ಯವಸ್ಥೆಯಂತೆ ಜ. 18ರಂದು ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಪೂಜಾಕೈಂಕರ್ಯವನ್ನು ಆರಂಭಿಸಲಿದ್ದಾರೆ. ಪಲಿಮಾರು ಮಠದ ಪಟ್ಟದ ದೇವರು ಶ್ರೀರಾಮಚಂದ್ರ. ಪಲಿಮಾರು ಮಠ ಪರಂಪರೆಯ ಆರನೆಯವರಾದ ಶ್ರೀರಾಜರಾಜೇಶ್ವರಯತಿಗಳು ಬರೆದ ಮಂಗಲಕರವಾದ ಮಂಗಲಾಷ್ಟಕದೊಂದಿಗೆ ಅಂಕಣ ಆರಂಭಗೊಳ್ಳುತ್ತಿದೆ. 

Advertisement

ಎಲ್ಲರಿಗೂ ಬೇಕು ಸಿಹಿ ಸುದ್ದಿ. ಇದು ಸಾಮಾನ್ಯ ಭಾಷೆಯಲ್ಲಿ. ಶಾಸ್ತ್ರೀಯ ಭಾಷೆಯಲ್ಲಿ ಹೇಳುವುದಾದರೆ ಮಂಗಲಪ್ರದವಾದುದೇ ಎಲ್ಲರಿಗೂ ಇಷ್ಟ. ಇದಕ್ಕಾಗಿ ಹಲವು ಮಂಗಲಾಷ್ಟಕಗಳು ಚಾಲ್ತಿಯಲ್ಲಿವೆ. 

ಮಂಗಲಾಷ್ಟಕಗಳೆಂದರೆ ಮಂಗಲಪ್ರದವಾದುದನ್ನು ಹಾರೈಸುವ ಅಷ್ಟಕಗಳು (ಎಂಟು ಸೊಲ್ಲುಗಳು). ಕೇವಲ ಕರಾವಳಿಯಲ್ಲಿ ಮಾತ್ರವಲ್ಲದೆ ನಾಡಿನುದ್ದಕ್ಕೂ ಸಂಪ್ರದಾಯಭೇದವಿಲ್ಲದೆ ಜನಸಾಮಾನ್ಯರ ಕಾರ್ಯಕ್ರಮ ದಲ್ಲಿಯೂ ಎಲ್ಲರೂ ಪಠಿಸುವ ಮಂಗಲಾಷ್ಟಕ ಪಲಿಮಾರು ಮಠದ ಪರಂಪರೆಯಲ್ಲಿ ಬೆಳಗಿದ ಶ್ರೀರಾಜರಾಜೇಶ್ವರಯತಿ ವಿರಚಿತ ಮಂಗಲಾಷ್ಟಕ. 

ಕವಿ ಚಮತ್ಕಾರ 
ಕೇವಲ ಎಂಟೇ ಸೊಲ್ಲುಗಳಿರು ವುದರಿಂದ ಹೇಳಲು ಬಹಳ ಹೊತ್ತು ಬೇಡ. ಎಂಟು ಸೊಲ್ಲುಗಳಲ್ಲಿ ಇಡೀ ವಿಶ್ವವನ್ನು ತೋರಿಸಿಡುವ, ಜೀವನದಲ್ಲಿ ಯಾರನ್ನೆಲ್ಲ ಅಗತ್ಯವಾಗಿ ಸ್ಮರಿಸಬೇಕೋ ಅವರ ಪಟ್ಟಿಯನ್ನು ಚಿಕ್ಕ ರೂಪದಲ್ಲಿ ಕೊಟ್ಟಿರುವ ಕವಿಚಮತ್ಕಾರ ಇಲ್ಲಿದೆ. ಈಗಿನ ಗಡಿಬಿಡಿಯ ಜೀವನಕ್ರಮಕ್ಕೂ ಈ ಚಿಕ್ಕ ಮಂಗಲಾಷ್ಟಕ ಹೇಳಿಸಿ ಮಾಡಿಸಿದಂತಿದೆ, ಪಠಿಸಲು ಅನುಕೂಲವಾಗುವಂತೆ. 

ಮನುಕುಲಕ್ಕೆ ಶಾಶ್ವತ ಕೊಡುಗೆ
ಶ್ರೀರಾಜರಾಜೇಶ್ವರಯತಿಗಳ ಜನನ ಕಾಲ ಕ್ರಿ.ಶ.1380 ಇರಬಹುದು. ಇದು ಮಧ್ವಾಚಾರ್ಯರು (1238-1317) ಬದರಿಗೆ ತೆರಳಿದ ಅನಂತರ ಸುಮಾರು 60 ವರ್ಷಗಳ ಬಳಿಕ ಎಂದು ಡಾ| ಬನ್ನಂಜೆ ಗೋವಿಂದಾಚಾರ್ಯರು ಕಾಂತಾವರದ ಶಾಸನದ ಅನುಸಾರ (ಶಾಸನದ ಕಾಲ 1433) ಅಂದಾಜಿಸಿದ್ದಾರೆ. ಇವರು ಬಹಳ ಕಿರಿಯ ವಯಸ್ಸಿನಲ್ಲಿಯೇ ಉಚ್ಚ ಮಟ್ಟದ ವಿದ್ವಾಂಸರಾಗಿ ಹೆಸರು ಗಳಿಸಿದ್ದರು. ಇವರ ವೃಂದಾವನ ಪಡುಬಿದ್ರಿ ಸಮೀಪದ ಪಲಿಮಾರು ಮೂಲಮಠದಲ್ಲಿದೆ. ಇವರು ಪರಂಪರೆಯಲ್ಲಿ ಆರನೆಯವರು. 1522ರಲ್ಲಿ ಎರಡು ವರ್ಷಗಳ ಪರ್ಯಾಯ ಪದ್ಧತಿ ಆರಂಭವಾದ ಕಾರಣ ಇದಕ್ಕಿಂತ ಹಿಂದಿನವರೆಲ್ಲರೂ ಎರಡು ತಿಂಗಳ ಪರ್ಯಾಯ ಪದ್ಧತಿ ವ್ಯಾಪ್ತಿಗೆ ಸೇರಿದವರು. ಶ್ರೀರಾಜರಾಜೇಶ್ವರ ತೀರ್ಥರೂ ಎರಡು ತಿಂಗಳ ಅವಧಿಯಲ್ಲಿ ಬಾಳಿದವರು. ಕಿರಿಯ ಯತಿಗಳಾಗಿ ವೃಂದಾವನಸ್ಥರಾದರೂ ಅಪಾರ ಸಂಖ್ಯೆಯ ಜನರು ಪಠಿಸುವ ಮಂಗಲಾಷ್ಟಕವನ್ನು ನೀಡುವುದರ ಮೂಲಕ ಮನುಕುಲಕ್ಕೆ ಶಾಶ್ವತ ಕೊಡುಗೆ ಸಲ್ಲಿಸಿದರು. ಇದರಲ್ಲಿ ದೇವದೇವತೆಗಳಲ್ಲದೆ, ಗಿರಿಪರ್ವತ, ನದಿ, ಗ್ರಹ, ನಕ್ಷತ್ರ, ರಾಶಿಗಳನ್ನು ಸ್ಮರಿಸುವ ಮೂಲಕ ಪರಿಸರಪ್ರಜ್ಞೆ, ವಿಶ್ವಪ್ರಜ್ಞೆಯನ್ನು ಜಾಗೃತಗೊಳಿಸುವ ಪ್ರಯತ್ನವನ್ನು ಮಾಡಲಾಗಿದೆ. 

Advertisement

ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next