Advertisement
ಕಳೆದ ನಾಲ್ಕು ವರ್ಷಗಳ ಹಿಂದೆ ನಗರಸಭೆ ಹಂತದಿಂದ ಮಹಾನಗರ ಪಾಲಿಕೆಯಾಗಿ ವಿಜಯಪುರ ಸ್ಥಳೀಯ ಸಂಸ್ಥೆ ಮೇಲ್ದರ್ಜೆಗೆ ಏರಿದ ಬಳಿಕವೂ ಮಹಾನಗರ ನಗರದಲ್ಲಿ ಜನತೆಯಂತೆ ಮಹಾನಗರದ ಪಾಲಿಕೆಯ ಪೌರ ಕಾರ್ಮಿಕರು ಕೂಡ ಇಲ್ಲದ ಸಮಸ್ಯೆ ಹಾಗೂ ಶೋಷಣೆ ಅನುಭವಿಸುತ್ತಿದ್ದಾರೆ. ಮಹಾನಗರ ಪಾಲಿಕೆಯಲ್ಲಿ ಈ ಮೊದಲು ಕಾಯಂ ಸೇವೆಯ 80 ಪೌರ ಕಾರ್ಮಿಕರಿದ್ದಾರೆ. ಹೊರಗುತ್ತಿಗೆಯಲ್ಲಿ ಸೇವೆ ಸಲ್ಲಿಸುವ ನೌಕರರನ್ನು ನೇರ ನೇಮಕಾತಿ ಮಾಡಿಕೊಳ್ಳಲು ಸರ್ಕಾರ 185 ಹುದ್ದೆಗೆ ಅರ್ಜಿ ಕರೆದರೂ ವಿವಿಧ ಮೀಸಲು ಸೇರಿದಂತೆ ಷರತ್ತಿನ ವ್ಯಾಪ್ತಿಯಲ್ಲಿ ಕಾಯಂ ನೇಮಕವಾದವರು 75 ಕಾರ್ಮಿಕರು ಮಾತ್ರ.ಇದರ ಹೊರತಾಗಿಯೂ ಮಹಾನಗರ ಪಾಲಿಕೆಯಲ್ಲಿ ನಾಲ್ಕು ಖಾಸಗಿ ಸಂಸ್ಥೆಗಳ ಮೂಲಕ 450ಕ್ಕೂ ಅಧಿಕ ಪೌರ ಕಾರ್ಮಿಕರು ಹೊರ ಗುತ್ತಿಗೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಅದರಲ್ಲಿ 300ಕ್ಕೂ ಅಧಿಕ ಪೌರ ಕಾರ್ಮಿಕರ ವಯೋಮಿತಿ ಮೀರಿದೆ. ಇದೀಗ ಸರ್ಕಾರ ಹೊರಗುತ್ತಿಗೆ ವ್ಯಸ್ಥೆಯನ್ನು ರದ್ದು ಪಡಿಸಿದ್ದು, ಮಹಾನಗರ ಪಾಲಿಕೆಯ ತಾತ್ಕಾಲಿಕ ನೌಕರರಾಗಿ ಪರಿವರ್ತನೆ ಆಗಲಿದ್ದಾರೆ. ಹೊಸ ಸ್ವರೂಪದ ಶೋಷಣೆ ಆರಂಭವಾಗಲಿದೆ ಎಂಬ ಆತಂಕ ತೋಡಿಕೊಳ್ಳುತ್ತಾರೆ.
ಇನ್ನು ಕಳೆದ ಒಂದೂವರೆ ದಶಕದಿಂದ ಹೊರ ಗುತ್ತಿಗೆ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರು ಪ್ರತಿ ತಿಂಗಳು ಸಂಬಳ ಪಡೆದ ದಾಖಲೆಯೇ ಇಲ್ಲ. ಕರ್ತವ್ಯ ನಿರ್ವಹಿಸಿದರೂ ಬಲವಂತವಾಗಿ ಗೈರು ಹಾಜರಿ ಎಂದು ದಾಖಲಿಸಿ ಸಂಬಳ ನೀಡದೇ ವಂಚಿಸಲಾಗುತ್ತಿದೆ. ದುಡಿದ ಕಾರ್ಮಿಕರಿಗೆ ನಾಲ್ಕಾರು ತಿಂಗಳಾದರೂ ಸಂಬಳ ದೊರೆಯುವುದಿಲ್ಲ. ಸಂಬಳಕ್ಕಾಗಿ ಬೀದಿಗಿಳಿದು ಹೋರಾಟ ಮಾಡುವುದು, ಈ ಹಂತದಲ್ಲಿ ಒಂದೆರಡು ತಿಂಗಳ ಸಂಬಳ ನೀಡುವುದು ವಾಡಿಕೆಯಾಗಿದೆ. ಕಳೆದ ಐದು ದಿನಗಳ ಹಿಂದಷ್ಟೇ ನಾವು ಸಂಬಳಕ್ಕಾಗಿ ಬೀದಿಗಿಳಿದಿದ್ದೆವು ಎಂದು ಪೌರ ಕಾರ್ಮಿಕರು ದೂರುತ್ತಾರೆ.
ಪಾಲಿಗೆ ಗಗನ ಕುಸುಮ. ಎಷ್ಟೋ ಸಂದರ್ಭದಲ್ಲಿ ಪೌರ ಕಾರ್ಮಿಕರೇ ನೇರವಾಗಿ ಒಳಚರಂಡಿಗೆ ಇಳಿದು ಸ್ವತ್ಛಗೊಳಿಸುವ ದುಸ್ಥಿತಿ ಇದೆ. ಪೌರ ಕಾರ್ಮಿಕರ ಸಧ್ಯದ ಸ್ಥಿತಿ ಆಧುನಿಕ ಶೋಷಿತ ಜೀತ ವ್ಯವಸ್ಥೆಯಲ್ಲದೇ ಬೇರಿನ್ನೇನೂ ಅಲ್ಲ. ಪೌರ ಕಾರ್ಮಿಕರ ಸಮಸ್ಯೆ ಗಂಭೀರ ಸ್ವರೂಪದಲ್ಲಿದ್ದರೂ ಸರ್ಕಾರ ಕಣ್ತೆರೆದು ನೋಡುವುದಿಲ್ಲ.
ನಗರದ ಸ್ವತ್ಛತೆ ಕೆಲಸ ಮಾಡುವ ನಮ್ಮನ್ನು ಸಾರ್ವಜನಿಕರು ತಮ್ಮ ಸೇವಕರೆಂದು ನಮ್ಮ ನೋವಿಗೆ ಧ್ವನಿ ಎತ್ತುವುದಿಲ್ಲ ಎಂದು ದೂರುತ್ತಾರೆ.
Related Articles
Advertisement
ಪೌರ ಕಾರ್ಮಿಕರು ಹೊರ ಗುತ್ತಿಗೆ ವ್ಯವಸ್ಥೆ ಇದ್ದಾಗ ಸಂಬಳ ವಿತರಣೆಯಲ್ಲಿ ಕೊಂಚ ಸಮಸ್ಯೆ ಆಗಿತ್ತು. ಹೊರಗುತ್ತಿಗೆವ್ಯವಸ್ಥೆ ರದ್ದಾಗಿರುವ ಕಾರಣವ ಈ ಸಮಸ್ಯೆಗೆ ಪರಿಹಾರ ದೊರೆಯಲಿದೆ. ಇದರ ಹೊರತಾಗಿ ಉಳಿದಂತೆ ಎಲ್ಲ
ಸೌಲಭ್ಯಗಳನ್ನೂ ಪಾಲಿಕೆ ಕೈಗೊಂಡಿದೆ. ನಿರ್ಮಾಣ ಹಂತದ ಹಾಗೂ ಮುಖ್ಯ ಚರಂಡಿಗೆ ಸಂಪರ್ಕ ಕಲ್ಪಿಸದ ಹೊಸ
ಒಳಚರಂಡಿಯಲ್ಲಿ ಬಿದ್ದ ಸಿಮೆಂಟ್ ತೆಗೆಯಲು ಕಾರ್ಮಿಕರು ಇಳಿದುದನ್ನೇ ಮಾನವ ಬಳಕೆ ಎಂದು ದೂರುವುದು
ಸಲ್ಲದ ಕ್ರಮ.
ಹರ್ಷಾ ಶೆಟ್ಟಿ, ಪೌರಾಯುಕ್ತರು, ಮಹಾನಗರ ಪಾಲಿಕೆ, ವಿಜಯಪುರ ಪೌರ ಕಾರ್ಮಿಕರು ಎಂದರೆ ಆಧುನಿಕ ಜೀತ ವ್ಯವೆಸ್ಥೆ ಹಾಗೂ ಶೋಷಣೆಯ ಹೊಸ ಸ್ವರೂಪದ ದುರವಸ್ಥೆ ಅಷ್ಟೇ. ನಗರವನ್ನು ಸ್ವತ್ಛವಾಗಿರಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಪೌರ ಕಾರ್ಮಿಕರ ಹಿತ ರಕ್ಷಗೆ ವಿಷಯದಲ್ಲಿ ಸರ್ಕಾರ, ಸ್ಥಳೀಯ ಸಂಸ್ಥೆಗಳ ನಿರ್ಲಕ್ಷ ಸಹಿಲಸಾಧ್ಯ. ದುಡಿಮೆಗೆ ಪ್ರತಿಫಲ ಪಡೆಯಲು ಕೂಡ ಬೀದಿಗಿಳಿದು ಹೋರಾಡಬೇಕಾದ
ದುಸ್ಥಿತಿ ಇರುವುದೇ ಇದಕ್ಕೆ ಸಾಕ್ಷಿ.
ಲಕ್ಷ್ಮಣ ಹಂದ್ರಾಳ, ಪೌರ ಕಾರ್ಮಿಕರ ಮುಖಂಡ, ವಿಜಯಪುರ ಜಿ.ಎಸ್. ಕಮತರ