Advertisement

Congress Party; ಯಾರು ಹೋಗ್ತಾರೋ ಬಿಡ್ತಾರೋ, ನಮ್ಮ ಕೈಯಲ್ಲಿಲ್ಲ: ಸತೀಶ್ ಜಾರಕಿಹೊಳಿ

03:03 PM Jan 27, 2024 | Team Udayavani |

ಹಾವೇರಿ: ಯಾರು ಹೋಗ್ತಾರೋ ಬಿಡುತ್ತಾರೋ ನಮ್ಮ ಕೈಯಲ್ಲಿಲ್ಲ. ಹೋಗುವ ಮನಸಿದ್ದರೆ ತಡೆಯಲಿಕ್ಕೆ ಆಗಲ್ಲ. ಹೋಗಬೇಕಂದರೆ ನಾವೇನು ಮಾಡಲಾಗಲ್ಲ. ಶೆಟ್ಟರ್ ಈಗ ಹೋಗಿದಾರೆ. ಮುಂದೆ ಯಾರು ಹೋಗುತ್ತಾರೋ ಗೊತ್ತಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರೂ ಪಕ್ಷದಲ್ಲಿರುತ್ತಾರೆ ಎನ್ನುವ ಆಶಾಭಾವನೆ ಅಷ್ಟೇ ನಮ್ದು. ಕಾಂಗ್ರೆಸ್ ನಲ್ಲಿ ಉಸಿರುಗಟ್ಟೋ ವಾತಾವರಣವಿದೆ ಅಂದರೆ ಬಿಜೆಪಿಯಿಂದ ಯಾಕೆ ಕಾಂಗ್ರೆಸ್ ಗೆ ಬಂದರು ಅವರು? ಅವಾಗ ಬರುವಾಗ ಏನಾಗಿತ್ತಂತೆ ಅಲ್ಲಿ ಎಂದರು.

ಜಗದೀಶ್ ಶೆಟ್ಟರ್ ಬೆಳಗಾವಿಯಲ್ಲಿ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಎಲ್ಲಿ ನಿಲ್ಲುತ್ತಾರೆಂದು ಗೊತ್ತಿಲ್ಲ. ಬೆಳಗಾವಿಯಲ್ಲಿ ಬಿಜೆಪಿಯವರು ಯಾರಾದರೂ ಸ್ಪರ್ಧೆ ಮಾಡಲೇಬೇಕು ಅಲ್ಲವೇ? ನಿಲ್ಲುವುದು ಬಿಡುವುದು ಅವರ ಪಕ್ಷಕ್ಕೆ ಬಿಟ್ಟಿದ್ದು. ನಮಗೆ ಸಂಬಂಧಿಸಿದ ವಿಷಯ ಅಲ್ಲ ಅದು ಎಂದರು.

ಲಿಂಗಾಯತ ಮತಗಳು ಇಬ್ಬಾಗವಾಗುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾರು ಯಾವ್ ಕಡೆ ಆಗ್ತಾರೆಂದು ಚುನಾವಣೆ ಬಂದಾಗ ನೋಡೋಣ. ನಮ್ಮದೇ ಪಕ್ಷವಿದೆ, ನಮ್ದೇ ಆದ ವೋಟ್ ಬ್ಯಾಂಕ್ ಇದೆ. ನಮ್ಮ ಸ್ವಂತ ಶಕ್ತಿಯಿಂದ ರಾಜ್ಯದಲ್ಲಿ ಗೆದ್ದಿದ್ದೇವೆ. ಅವರಿಂದ ಅಧಿಕಾರಕ್ಕೆ ಬಂತು, ಇವರಿಂದ ಬಂತೆಂದು ಹೇಳಲಿಕ್ಕಾಗದು, ಪಕ್ಷದಿಂದ ಗೆದ್ದಿದ್ದೇವೆ ಅಷ್ಟೇ ಎಂದರು.

ಶೆಟ್ಟರ್ ಬಿಜೆಪಿ ಅಭ್ಯರ್ಥಿ ಆದರೆ ಬೆಳಗಾವಿ ಬಿಜೆಪಿಗೆ ದೊಡ್ಡ ಲಾಭ ಆಗಲಿದೆ ಎಂಬ ಚರ್ಚೆಗೆ ಮಾತನಾಡಿ, ಒಬ್ಬ ವ್ಯಕ್ತಿಯಿಂದ ಆಗಲ್ಲ. ಪಕ್ಷದ ಲೆಕ್ಕ ಹಿಡಿಯಬೇಕು. ಸತೀಶ್ ಜಾರಕಿಹೊಳಿ, ಶೆಟ್ಟರ್ ಒಬ್ಬರನ್ನೇ ಲೆಕ್ಕ ಹಾಕಲಾಗದು ಎಂದರು.

Advertisement

ಕಾಂಗ್ರೆಸ್ ನಲ್ಲಿ ಸತೀಶ್ ಜಾರಕಿಹೊಳಿ ಪವರ್ ಸೆಂಟರ್ ಆಗುತ್ತಿದ್ದಾರೆಂಬ ಚರ್ಚೆ ವಿಚಾರಕ್ಕೆ ಮಾತನಾಡಿ, ನಾವೇನು ಪವರ್ ಸೆಂಟರ್ ಅಲ್ಲ. ಪಕ್ಷದಲ್ಲಿದ್ದೀವಿಯಷ್ಟೇ ಹೊರಗಡೆ ಏನು ಹೋಗಿಲ್ಲ. ಇದ್ದಲ್ಲೇ ಮಾಡುತ್ತಿದ್ದೇವೆ. ಸಮಾನ ಮನಸ್ಕರು ಕೂಡಿದ್ದೆವು. ಹೊರತಾಗಿ ಪವರ್ ಸೆಂಟರ್ ಏನು ಅಲ್ಲ ಎಂದರು.

ಡಿಸಿಎಂ ವಿಚಾರ ಈಗ ಸದ್ಯಕ್ಕಿಲ್ಲ. ಚುನಾವಣೆ ಫೋಕಸ್ ಮಾಡುತ್ತಿದ್ದೇವೆ. ಚುನಾವಣೆ ಮೇಲೆ ಗಮನ ಹರಿಸಿದ್ದೇವೆ. ಸದ್ಯಕ್ಕಂತೂ ಅದರ ಅವಶ್ಯಕತೆ ಇಲ್ಲ. ಚುನಾವಣೆ ಬಳಿಕ ಕೇಳೋಣ. ಮತ್ತೊಂದು ಬಾರಿ ಕೇಳುತ್ತೇವೆ. ನಮ್ಮ ಹೈಕಮಾಂಡ್ ಇದೆ, ಹೈಕಮಾಂಡ್ ಜೊತೆ ಚರ್ಚೆ ಮಾಡುತ್ತೇನೆ ಎಂದ ಅವರು, ಸಿಎಂ ಕೂಡಾ ಆಗಬೇಕು ಎಂಬ ಆಸೆ ಇದೆಯಾಎಂಬ ಪ್ರಶ್ನೆಗೆ ಸದ್ಯಕ್ಕೆ ಆ ಪ್ರಶ್ನೆಯೇ ಉದ್ಭವಿಸಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next