Advertisement

ಮಹಾಸಮರ; ಮತಗಟ್ಟೆ ಸಮೀಕ್ಷೆ ಪ್ರಕಾರ ಗುಜರಾತ್ ಗದ್ದುಗೆ ಯಾರಿಗೆ ಗೊತ್ತೆ

05:41 PM Dec 14, 2017 | Sharanya Alva |

ಅಹಮ್ಮದಾಬಾದ್: ಹೈವೋಲ್ಟೇಜ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತವರೂರಲ್ಲಿ ಅಗ್ನಿಪರೀಕ್ಷೆಯಾಗಿರುವ ಚುನಾವಣೆ ಎಂದೇ ಬಿಂಬಿತವಾಗಿದ್ದ ಗುಜರಾತ್ ನಲ್ಲಿ ಗುರುವಾರ ಅಂತಿಮ ಹಂತದ ಮತದಾನ ಪ್ರಕ್ರಿಯೆ ಸಂಜೆ ಮುಕ್ತಾಯ ಕಂಡ ಬೆನ್ನಲ್ಲೇ ಮತಗಟ್ಟೆ ಸಮೀಕ್ಷೆ ಪ್ರಕಟಗೊಂಡಿದೆ.

Advertisement

ಡಿಸೆಂಬರ್ 9ರಂದು ಗುಜರಾತ್ ನಲ್ಲಿ ಮೊದಲ ಹಂತದ ಚುನಾವಣೆ ನಡೆದಿತ್ತು. ಒಟ್ಟು 89 ಕ್ಷೇತ್ರಗಳಲ್ಲಿ ಮತದಾನವಾಗಿತ್ತು. ಇಂದು ನಡೆದ 2ನೇ ಹಂತದಲ್ಲಿ 93 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ.

182 ಸದಸ್ಯ ಬಲ ಹೊಂದಿರುವ ಗುಜರಾತ್ ವಿಧಾನಸಭೆಯಲ್ಲಿ ಮತಗಟ್ಟೆ ಸಮೀಕ್ಷೆ ಪ್ರಕಾರ, ಬಿಜೆಪಿ 109 ಸ್ಥಾನ ಪಡೆಯಲಿದೆ. ಕಾಂಗ್ರೆಸ್ ಪಕ್ಷಕ್ಕೆ 70 ಸ್ಥಾನ, ಇತರರು 03 ಸ್ಥಾನ. ಅದೇ ರೀತಿ ಒಟ್ಟು 68 ಸದಸ್ಯ ಬಲದ ಹಿಮಾಚಲದಲ್ಲಿ ಈ ಬಾರಿ ಬಿಜೆಪಿ(68) ಗದ್ದುಗೆ ಏರುವ ಸಾಧ್ಯತೆ ಇದೆ ಎಂದು ಸಿ ವೋಟರ್ ತಿಳಿಸಿದೆ.

ಟೈಮ್ಸ್ ನೌ ಹಾಗೂ ವಿಎಂಆರ್ ಸಮೀಕ್ಷೆ ಪ್ರಕಾರ, ಗುಜರಾತ್ ನಲ್ಲಿ ಬಿಜೆಪಿ 106ರಿಂದ 116 ಸ್ಥಾನಗಳನ್ನು ಪಡೆಯಲಿದೆ. ಕಾಂಗ್ರೆಸ್ ಪಕ್ಷ 63ರಿಂದ 73 ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಿದೆ.

ರಿಪಬ್ಲಿಕ್ ನ್ಯೂಸ್ ಪ್ರಕಾರ ಗುಜರಾತ್ ಮತದಾನ ನಂತರದ ಸಮೀಕ್ಷೆಯಲ್ಲಿ ಬಿಜೆಪಿ ಭರ್ಜರಿ 108 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ. ಕಾಂಗ್ರೆಸ್ ಪಕ್ಷ 74 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಲಿದೆ ಎಂದು ತಿಳಿಸಿದೆ.

Advertisement

ಹಿಮಾಚಲ ಪ್ರದೇಶದಲ್ಲಿ ಬಿಜೆಪಿ 40ರಿಂದ 50 ಸ್ಥಾನ, ಕಾಂಗ್ರೆಸ್ ಕೇವಲ 15 ರಿಂದ 20 ಸ್ಥಾನ ಪಡೆಯಲಿದೆ ಎಂದು ರಿಪಬ್ಲಿಕ್ ನ್ಯೂಸ್ ಸಮೀಕ್ಷೆ ಹೇಳಿದೆ.

ನ್ಯೂಸ್ ಎಕ್ಸ್ ಅಂಡ್ ಸಿಎನ್ ಎಕ್ಸ್ ಪ್ರಕಾರ ಬಿಜೆಪಿ 115, ಕಾಂಗ್ರೆಸ್ 65, ಇತರೆ 2 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದೆ.

ಇಂಡಿಯಾ ಟುಡೇ ಆಕ್ಸಿಸ್ ಮತಗಟ್ಟೆ ಸಮೀಕ್ಷೆ ಪ್ರಕಾರ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ 51 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಕಾಂಗ್ರೆಸ್ ಕೇವಲ 17 ಸ್ಥಾನ ಗಳಿಸಲಿದೆ ಎಂದು ಹೇಳಿದೆ.

ಎಬಿಪಿ ನ್ಯೂಸ್, ಸಿಎಸ್ ಡಿಎಸ್ ಪ್ರಕಾರ, ಹಿಮಾಚಲ ಪ್ರದೇಶದಲ್ಲಿ ಬಿಜೆಪಿ 47ರಿಂದ 55 ಸ್ಥಾನ ಗಳಿಸಲಿದ್ದು, ಕಾಂಗ್ರೆಸ್ 13ರಿಂದ 20 ಸ್ಥಾನ ಪಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next