Advertisement

ಕೋವಿಡ್ ಸೋಂಕು ಪ್ರಯೋಗಾಲಯದಿಂದ ಸೋರಿಕೆಯಾಗಿಲ್ಲ: ವಿಶ್ವಸಂಸ್ಥೆ, ಚೀನಾ ವರದಿಯಲ್ಲೇನಿದೆ?

03:26 PM Mar 29, 2021 | Team Udayavani |

ನವದೆಹಲಿ : ಕೋವಿಡ್ 19 ಸೋಂಕು ಎಲ್ಲಿಂದ ಬಂತು ಎಂಬ ಪ್ರಶ್ನೆಗೆ ಉತ್ತರ ಹುಡುಕಲು ನೂರಾರು ಸಂಶೋಧನೆ ನಡೆಯುತ್ತಿವೆ. ಈ ಸೋಂಕು ಚೀನಾದವರಿಂದ ಬಂತು, ಲ್ಯಾಬ್ ಲೀಕ್ ನಿಂದ ಕೋವಿಡ್ ಸೋಂಕು ಹರಡಿತು ಎಂದು ಹಲವರು ಹೇಳಿದ್ದಾರೆ. ಆದರೆ ಸದ್ಯ ಸಂಶೋಧ‍ನೆಯೊಂದು ನಡೆಯುತ್ತಿದ್ದು, ಇದರ ಪ್ರಕಾರ ಪ್ರಾಣಿಗಳಿಂದಲೇ ಮಾನವರಿಗೆ ಕೋವಿಡ್ ಹರಡಿದೆ ಎನ್ನಲಾಗಿದೆ.

Advertisement

ಚೀನಾ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಜಂಟಿ ಅಧ್ಯಯನ ನಡೆಯುತ್ತಿದ್ದು, ಇದರ ಪ್ರಕಾರ ಪ್ರಾಣಿಗಳಿಂದ ಬಾವಲಿಗೆ ಬಂದ ಕೋವಿಡ್ ನಂತರ ಮಾನವನಿಗೆ ಅಂಟಿಕೊಂಡಿದೆ ಎನ್ನಲಾಗಿದೆ.

ಈ ಬಗ್ಗೆ ಇನ್ನು ಕೆಲವೇ ದಿನಗಳಲ್ಲಿ ಒಂದು ವರದಿಯನ್ನು ರಿಲೀಸ್ ಮಾಡಲಾಗುವುದು ಎಂದು ಹೇಳಲಾಗಿದೆ.  ಈ ವಿಚಾರವಾಗಿ ಬೇರೆ ಬೇರೆ ದೇಶಗಳಲ್ಲಿ ಸಂಶೋಧನೆಗಳನ್ನು ಮಾಡಲಾಗುತ್ತಿದೆ.

ಇನ್ನು ವರದಿಯನ್ನು ನೀಡುವಲ್ಲಿ ಪದೇ ಪದೇ ತಡವಾಗುತ್ತಿರುವ ಕಾರಣ ತಮ್ಮ ಮೇಲಿನ ದೂಷಣೆಯನ್ನು ತೊಡೆದು ಹಾಕಲು ಚೀನಾ ಹೀಗೆ ಮಾಡುತ್ತಿದೆ ಎಂದು ಆರೋಪಿಸಲಾಗಿದೆ. ಆದ್ರೆ ಇನ್ನು ಕೆಲವೇ ದಿನಗಳಲ್ಲಿ ಅಂತಿಮ ವರದಿಯನ್ನು ನೀಡಲಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next