Advertisement
ಎರಡು ವರ್ಷಗಳ ಹಿಂದೆ ಮಳೆಯಿಂದಾಗಿ ಮನೆಯ ಛಾವಣಿ ಕುಸಿದು ಬಿದ್ದಿದ್ದರಿಂದ ವಾಸಿಸಲು ಸಾಧ್ಯವಾಗುತ್ತಿರಲಿಲ್ಲ. ಮಹಿಳೆಯು ಸಣ್ಣಪ್ರಾಯದ ಮಗನೊಂದಿಗೆ ಸಂಬಂಧಿಕರ ಮನೆಯಲ್ಲಿ ವಾಸವಿದ್ದರು. ವಿಷಯ ತಿಳಿದ ಎಸ್ಕೆಎಸ್ಸೆಸ್ಸೆಫ್ ವಿಖಾಯ ಕಾರ್ಯಕರ್ತರು ಈಗ ಸುಂದರವಾದ ಮನೆಯೊಂದನ್ನು ನಿರ್ಮಿಸಿಕೊಟ್ಟಿದ್ದಾರೆ.
ಸುಮಾರು ಮೂರು ವಾರಗಳ ಕಾಲ ಮೈದನಡ್ಕ, ಪಾಳ್ಯತ್ತಡ್ಕ, ಮೇನಾಲ, ಮುಂಡೋಳೆ ಶಾಖೆಯ ಸುಮಾರು 75ರಷ್ಟು ಕಾರ್ಯಕರ್ತರು ಶ್ರಮದಾನ ಮಾಡಿದ್ದಾರೆ. ದಾನಿಗಳ ಸಹಕಾರದಿಂದ ಸುಮಾರು 2 ಲ. ರೂ. ವೆಚ್ಚದಲ್ಲಿ ಮನೆ ನಿರ್ಮಾಣವಾಗಿದೆ. ನಮ್ಮ ಕ್ಲಸ್ಟರ್ ವ್ಯಾಪ್ತಿಯಲ್ಲಿ ಇಂಥ ಹಲವು ದುಃಸ್ಥಿತಿಯ ಮನೆಗಳಿರುವುದು ಗಮನಕ್ಕೆ ಬಂದಿದೆ. ಹಲವರು ನಮ್ಮಲ್ಲಿ ಸಹಾಯ ಕೋರಿದ್ದಾರೆ. ದಾನಿಗಳು ಇಚ್ಛಾಶಕ್ತಿ ತೋರಿಸಿದರೆ ಇಂತಹ ಸೇವಾ ಕಾರ್ಯಗಳನ್ನು ಮುಂದುವರಿಸಬಹುದಾಗಿದೆ ಎಂದು ಎಸ್ಕೆಎಸ್ಸೆಸ್ಸೆಫ್ ಈಶ್ವರಮಂಗಲ ಕ್ಲಸ್ಟರ್‌ನ ಅಧ್ಯಕ್ಷ ಖಲೀಲುರಹ್ಮಾನ್ ಅರ್ಷದಿ ಹೇಳಿದ್ದಾರೆ.