Advertisement

Ishwaramangala- ಪುತ್ತೂರು: ಹೊಸ ಬಸ್‌ ಆರಂಭ

12:48 PM Sep 12, 2024 | Team Udayavani |

ಈಶ್ವರಮಂಗಲ: ಬೆಳಗ್ಗಿನ ವೇಳೆ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗ ಹಾಗೂ ಇನ್ನಿತರ ಕಾರ್ಯಗಳಿಗಾಗಿ ತೆರಳುವ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಈಶ್ವರಮಂಗಲದಿಂದ ಪುತ್ತೂರಿಗೆ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಆರಂಭಗೊಂಡಿದೆ.

Advertisement

ಬೆಳಗ್ಗೆ ಈಶ್ವರ ಮಂಗಲಕ್ಕೆ ಬಂದ ಬಸ್ಸನ್ನು ಈಶ್ವರಮಂಗಲ ಜಂಕ್ಷನ್‌ ಬಳಿ ಕಾಂಗ್ರೆಸ್‌ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸ್ವಾಗತಿಸಿ, ಸಂಭ್ರಮಾಚರಿಸಿದರು.

ಈಶ್ವರಮಂಗಲ ಕಡೆಯಿಂದ ಬೆಳಗ್ಗಿನ ವೇಳೆ ಪುತ್ತೂರಿಗೆ ಹೋಗುವ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸ್ಥಳಾವಕಾಶವಿಲ್ಲದೆ ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಬಹಳಷ್ಟು ಸಮಸ್ಯೆಗಳಾಗುತ್ತಿತ್ತು.

ಉದಯವಾಣಿ ಸುದಿನದಲ್ಲಿ ನಮಗೆ ಬಸ್‌ ಬೇಕೇ ಬೇಕು ಅಭಿಯಾನದಡಿ ಇಲ್ಲಿನ ಸಮಸ್ಯೆಯನ್ನು ಎಳೆಎಳೆಯಾಗಿ ಶಾಸಕರು ಹಾಗೂ ಸರಕಾರಕ್ಕೆ ತಿಳಿಸಿತ್ತು.

ಈಶ್ವರಮಂಗಲ ಭಾಗದ ಕಾಂಗ್ರೆಸ್‌ ಪಕ್ಷದ ಮುಖಂಡರು ಮತ್ತು ಜನಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಶಾಸಕ ಅಶೋಕ್‌ ಕುಮಾರ್‌ ರೈ ಅವರಿಗೆ ಮನವಿ ಸಲ್ಲಿಸಿ, ಬಸ್‌ ಸಂಚಾರದ ಬೇಡಿಕೆ ಮುಂದಿಟ್ಟಿದ್ದರು. ನೆಟ್ಟಣಿಗೆ ಮುಟ್ನೂರು ಗ್ರಾಮ ಪಂಚಾಯತ್‌ನ ಗ್ರಾಮಸಭೆಯಲ್ಲೂ ಬಸ್‌ ಬೇಡಿಕೆಯ ನಿರ್ಣಯ ಕೈಗೊಳ್ಳಲಾಗಿತ್ತು. ಈ ಭಾಗದ ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರ ಬೇಡಿಕೆಗೆ ಶಾಸಕರ ಸೂಚನೆಯಂತೆ ಈಗ ಬಸ್‌ ಸಂಚಾರ ಆರಂಭಗೊಂಡಿದೆ.

Advertisement

ಈಶ್ವರಮಂಗಲಕ್ಕೆ ಬಂದ ಬಸ್ಸನ್ನು ಕಾಂಗ್ರೆಸ್‌ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಸ್ವಾಗತಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನೆಟ್ಟಣಿಗೆ ಮುಟ್ನೂರು ಗ್ರಾ.ಪಂ.ಉಪಾಧ್ಯಕ್ಷ ರಾಮ ಮೇನಾಲ, ಈಶ್ವರಮಂಗಲ ಭಾಗದ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಬೆಳಗ್ಗಿನ ವೇಳೆ ಬಸ್‌ ವ್ಯವಸ್ಥೆ ಇಲ್ಲದೆ ಬಹಳಷ್ಟು ಸಮಸ್ಯೆಗಳಾಗುತ್ತಿತ್ತು. ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರ ಸಮಸ್ಯೆಯನ್ನು ಅರ್ಥೈಸಿಕೊಂಡು ಶಾಸಕರು ಬೆಳಗ್ಗೆ 8.30ಕ್ಕೆ ಈಶ್ವರಮಂಗಲದಿಂದ ಹೊರಡುವ ಬಸ್‌ ವ್ಯವಸ್ಥೆ ಕಲ್ಪಿಸಿಕೊಡುವ ಮೂಲಕ ಬೇಡಿಕೆಗೆ ಸ್ಪಂದನೆ ನೀಡಿದ್ದಾರೆ ಎಂದರು.

ನೆಟ್ಟಣಿಗೆ ಮುಟ್ನೂರು ಗ್ರಾ.ಪಂ. ಅಧ್ಯಕ್ಷೆ ಫೌಝಿಯಾ ಇಬ್ರಾಹಿಂ, ಸದಸ್ಯ ಇಬ್ರಾಹಿಂ ಪಳ್ಳತ್ತೂರು, ನೆಟ್ಟಣಿಗೆ ಮುಟ್ನೂರು ವಲಯ ಕಾಂಗ್ರೆಸ್‌ ಅಧ್ಯಕ್ಷ ಎನ್‌.ಮೂಸನ್‌, ಕಾಂಗ್ರೆಸ್‌ ಪಕ್ಷದ ಮುಖಂಡರಾದ ಉದ್ಯಮಿ ಅಬ್ದುಲ್‌ ರಹಿಮಾನ್‌ ಹಾಜಿ ಮೇನಾಲ, ವಿಕ್ರಂ ರೈ ಸಾಂತ್ಯ, ಮೆನಾಲ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅಬ್ದುಲ್ಲಾ ಮೆಣಸಿನಕಾನ, ಗಿರೀಶ್‌ ರೈ ಮರಕ್ಕಡ, ಅಶ್ರಫ್ ನೇರೋಳ್ತಡ್ಕ, ಶ್ರೀಶಕುಮಾರ್‌ ರೈ ಮರಕ್ಕಡ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next