Advertisement
ಅಮೆರಿಕ, ಜಪಾನ್ ಮತ್ತು ಸಿಂಗಾಪುರ ದೇಶಗಳು ವಿದೇಶಿ ಪ್ರಯಾಣಿಕರಿಗೆ ಭಾಗಶಃ ಬಾಗಿಲು ಬಂದ್ ಮಾಡಿದ್ದು, ಈ ಬಗ್ಗೆ ಡಬ್ಲೂéಎಚ್‌ಒ ಆಕ್ಷೇಪ ವ್ಯಕ್ತಪಡಿಸಿದೆ. ಸಂಪೂರ್ಣ ಪ್ರಯಾಣ ನಿಷೇಧದಿಂದಾಗಿ ಕೊರೊನಾ ಹರಡುವಿಕೆಯನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದೆ. ಲಸಿಕೆ ಪಡೆಯದೇ ಇರುವ, 60 ವರ್ಷ ಮೇಲ್ಪಟ್ಟವರು ಈಗ ಹೈ ರಿಸ್ಕ್ ದೇಶಗಳು ಎಂದು ಗುರುತಿಸಲಾಗಿರುವಲ್ಲಿಗೆ ಹೋಗುವುದು ಬೇಡ ಎಂದು ಅದು ತಿಳಿಸಿದೆ.
Related Articles
Advertisement
ದಕ್ಷಿಣ ಆಫ್ರಿಕಾಗಿಂತಲೂ ಮೊದಲೇ ಯೂರೋಪ್ ದೇಶಗಳಲ್ಲಿ ಒಮಿಕ್ರಾನ್ ರೂಪಾಂತರಿ ಪತ್ತೆಯಾಗಿತ್ತೇ ಎಂಬ ಅನುಮಾನಗಳು ಈಗ ಸೃಷ್ಟಿಯಾಗಿವೆ. ಇಡೀ ಜಗತ್ತಿಗೆ ಹೊಸ ರೂಪಾಂತರಿ ಬಗ್ಗೆ ದಕ್ಷಿಣ ಆಫ್ರಿಕಾ ಎಚ್ಚರಿಕೆ ನೀಡುವ ಒಂದು ವಾರ ಮುಂಚೆಯೇ ಯೂರೋಪ್‌ನ ದೇಶಗಳಲ್ಲಿ ಇದು ಇತ್ತು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : ಅಕ್ರಮ ಕಸಾಯಿಖಾನೆಗಳ ವಿರುದ್ಧ ಕಠಿನ ಕ್ರಮ: ಹೈಕೋರ್ಟ್ ತಾಕೀತು
ಕೇಂದ್ರ ವರ್ಸಸ್ ಮಹಾರಾಷ್ಟ್ರ
ಒಮಿಕ್ರಾನ್ ತಡೆಗಾಗಿ ನಿಯಮ ರೂಪಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತು ಮಹಾರಾಷ್ಟ್ರ ಸರ್ಕಾರಗಳ ನಡುವೆ ಭಿನ್ನಾಭಿಪ್ರಾಯ ಮೂಡಿದೆ. ಕೇಂದ್ರ ಸರ್ಕಾರ, ತನ್ನ ಮಾರ್ಗಸೂಚಿಯಲ್ಲಿ ವಿದೇಶದಿಂದ ಬಂದಿದ್ದು, ಇಲ್ಲಿನ ಪರೀಕ್ಷೆ ವೇಳೆ ನೆಗೆಟೀವ್ ಬಂದಿದ್ದರೂ ಕಡ್ಡಾಯವಾಗಿ 14 ದಿನ ಕ್ವಾರಂಟೈನ್‌ಗೆ ಒಳಗಾಗಬೇಕು ಎಂದಿದೆ. ಆದರೆ, ಮಹಾ ಸರ್ಕಾರ ನೆಗಟೀವ್ ಬಂದವರು ಕೇವಲ 7 ದಿನ ಕ್ವಾರಂಟೈನ್‌ನಲ್ಲಿ ಇದ್ದರೆ ಸಾಕು ಎಂದು ಹೇಳಿದೆ. ಈ ಸಂಬಂಧ ಆರೋಗ್ಯ ಕಾರ್ಯದರ್ಶಿ ಅಜಯ್ ಭೂಷಣ್ ಮಹಾ ಸರ್ಕಾರಕ್ಕೆ ಪತ್ರ ಬರೆದು, ಕೇಂದ್ರದ ಮಾರ್ಗಸೂಚಿ ಪಾಲನೆ ಮಾಡುವಂತೆ ಹೇಳಿದ್ದಾರೆ.
ಒಮಿಕ್ರಾನ್ ವಿರುದ್ಧ ಕೊವ್ಯಾಕ್ಸಿನ್ ಪ್ರಬಲ?
ಒಮಿಕ್ರಾನ್ ವಿರುದ್ಧ ಹೋರಾಟ ನಡೆಸುವಲ್ಲಿ ದೇಶೀಯವಾಗಿ ತಯಾರಿಸಲಾಗಿರುವ ಕೊವ್ಯಾಕ್ಸಿನ್ ಶಕ್ತಿಶಾಲಿಯಾಗಿದೆ ಎಂದು ಐಸಿಎಂಆರ್‌ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕೊವ್ಯಾಕ್ಸಿನ್ ವಿರಾಯಿನ್ ಲಸಿಕೆಯಾಗಿರುವುದರಿಂದ ಹೊಸ ರೂಪಾಂತರಿ ವಿರುದ್ಧ ಪ್ರಬಲವಾಗಿ ಕೆಲಸ ಮಾಡಬಹುದು. ಆದರೆ, ಉಳಿದ ಲಸಿಕೆಗಳು ಎಂಆರ್‌ಎನ್‌ಎ ವೇದಿಕೆಯಲ್ಲಿ ಸೃಷ್ಟಿಸಿದ್ದು, ಹೀಗಾಗಿ ಕೆಲಸ ಮಾಡದೇ ಇರಬಹುದು ಎಂದು ಅವರು ಹೇಳಿದ್ದಾರೆ.