Advertisement
ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಬಾರದು ಎಂಬ ದೃಷ್ಟಿಯಿಂದ ಎರಡು ಹಂತದಲ್ಲಿ ನೃಪತುಂಗ ರಸ್ತೆಯ ವೈಟ್‌ಟಾಪಿಂಗ್ ಕೆಲಸ ಕೈಗೆತ್ತಿಕೊಳ್ಳಲಾಗಿತ್ತು. ಫೆಬ್ರುವರಿ 26ರಂದು ಮೊದಲ ಹಂತದ ಕಾಮಗಾರಿ ಆರಂಭಿಸಿದ್ದ ಪಾಲಿಕೆಯ ಅಧಿಕಾರಿಗಳು ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುತ್ತಿದ್ದಾರೆ. ಅದರ ಹಿನ್ನೆಲೆಯಲ್ಲಿ ಸೋಮವಾರದಿಂದ ಎರಡನೇ ಹಂತದ ಅಂದರೆ, ಮತ್ತೂಂದು ಬದಿಗೆ ಕಾಂಕ್ರಿಟ್ ಹಾಕುವ ಕಾಮಗಾರಿ ಆರಂಭಿಸಲು ಯೋಜನೆ ರೂಪಿಸಿದ್ದಾರೆ.
Related Articles
Advertisement
ಪರಸರವಾದಿಗಳಿಂದ ಟೀಕೆ!: ನೃಪತುಂಗ ರಸ್ತೆಯಲ್ಲಿ ಕಾಂಕ್ರಿಟ್ ಕಾಮಗಾರಿ ಆರಂಭಿಸಿ, ವಾಹನಗಳನ್ನು ಕಬ್ಬನ್ ಪಾರ್ಕ್ ಮೂಲಕ ಸಂಚರಿಸಲು ಅವಕಾಶ ನೀಡಲಾಗಿದೆ. ಈ ಹಿಂದೆ ಕೇವಲ ದ್ವಿಚಕ್ರ ವಾಹನ ಹಾಗೂ ಕಾರುಗಳಿಗೆ ಮಾತ್ರ ಉದ್ಯಾನದೊಳಗೆ ಪ್ರವೇಶಿಸಲು ಅವಕಾಶ ನೀಡುವುದಾಗಿ ತಿಳಿಸಲಾಗಿತ್ತು. ಆದರೆ, ಕೆಲ ದಿನಗಳಿಂದೀಚೆಗೆ ಬೃಹತ್ ವಾಹನಗಳು ಉದ್ಯಾನದೊಳಗೆ ಬರುತ್ತಿರುವುದರಿಂದ ಶಬ್ದ ಮಾಲಿನ್ಯ ಹೆಚ್ಚಾಗಿದೆ. ಉದ್ಯಾನದಲ್ಲಿನ ಪಕ್ಷಿಗಳು ಹಾಗೂ ಪರಿಸರಕ್ಕೆ ಹಾನಿಯಾಗುತ್ತಿದೆ ಎಂದು ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೇ ಹೊತ್ತಿಗೆ ಸಂಚಾರಕ್ಕೆ ಮುಕ್ತನೃಪತುಂಗ ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿ ಅರ್ಧ ಮುಗಿದಿದ್ದು, ಸೋಮವಾರದಿಂದ ಎರಡನೇ ಹಂತದ ಕಾಮಗಾರಿ ಪ್ರಾರಂಭವಾಗಲಿದೆ. ರಸ್ತೆಗೆ ಕಾಂಕ್ರಿಟ್ ಹಾಕುವ ಕಾಮಗಾರಿ 10 ದಿನಗಳೊಳಗೆ ಮುಗಿಯಲಿದೆ. ಆದರೆ, ಕಾಂಕ್ರಿಟ್ ಕ್ಯೂರಿಂಗ್‌ಗಾಗಿ ಕನಿಷ್ಠ 25 ದಿನಗಳು ಬಿಡಬೇಕಾಗುತ್ತದೆ. ಹಾಗಾಗಿ ಈಗಾಗಲೇ ಕಾಂಕ್ರಿಟ್ ಹಾಕಲು ಅಗತ್ಯ ಸಿದ್ಧತೆಗಳನ್ನು ನಡೆಸಲಾಗಿದ್ದು, ಮೇಲ ಮೊದಲ ವಾರದೊಳಗೆ ನೃಪತುಂಗ ರಸ್ತೆ ಸಂಪೂರ್ಣವಾಗಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಲಿದೆ.
=ಕೆ.ಟಿ.ನಾಗರಾಜ್, ಪಾಲಿಕೆಯ ಯೋಜನೆ ವಿಭಾಗದ ಮುಖ್ಯ ಎಂಜಿನಿಯರ್