ಜಾವಗಲ್: ಹೋಬಳಿ ಬಂದೂರು ಗ್ರಾಮದ ಕೃಷಿಕ ಬಿ.ಬಿ. ಗಣೇಶ್‌ರವರ ಮುಸುಕಿನ ಜೋಳದ ಜಮೀನಿನಲ್ಲಿ ಅಪ ರೂಪದ ಬಿಳಿಬಣ್ಣದಕಪ್ಪೆ
ಯೊಂದು ಕಂಡು ಬಂದಿದೆ.
ಗಣೇಶ್ ಎಂದಿನಂತೆ ತಮ್ಮ ಜೋಳದ ಹೊಲಕ್ಕೆ ಹೋದಾಗ ಮುಸುಕಿನ ಜೋಳದ ಗರಿಗಳ ಮೇಲೆ ಬಿಳಿಕಪ್ಪೆಯೊಂದು ಹರಿದಾಡುತ್ತಿರುವ ದೃಶ್ಯ
ಕಂಡು ಬಂದಿದ್ದು, ಸಮೀಪಕ್ಕೆ ಹೋಗಿ ನೋಡಿದಾಗಕಪ್ಪೆಯು ಜಿಗಿಯುತ್ತಿರುವ ದೃಶ್ಯಕಂಡು ಚಕಿತರಾದರು.
ಇದನ್ನೂ ಓದಿ:ಕಾಂಗ್ರೆಸಿಗರೇ ಒಬ್ಬೊಬ್ಬರ ಫ್ಯೂಸನ್ನು ಕಿತ್ತು ಹಾಕಿಕೊಳ್ಳುತ್ತಿದ್ದಾರೆ: ಈಶ್ವರಪ್ಪ ವ್ಯಂಗ್ಯ
ಅಕ್ಕಪಕ್ಕದ ಜಮೀನಿನ ರೈತರು ಹಾಗೂ ತಮ್ಮಕುಟುಂಬ ವರ್ಗದವರನ್ನು ಕರೆದುಕೊಂಡು ಹೋಗಿ ಬಿಳಿಕಪ್ಪೆಯನ್ನು ತೋರಿಸಿದರು. ಕಪ್ಪೆಯು2-3 ದಿನದಿಂದ ಹೊಲದಲ್ಲಿಯೇ ಇರುವುದಾಗಿ ತಿಳಿಸಿದರು.
ಇಂತಹ ಕಪ್ಪೆಗಳು,ಕೇರಳ ಕಾಡುಗಳು, ಪಶ್ವಿಮಘಟ್ಟಗಳ ಕಾಡುಗಳಲ್ಲಿ ಕಂಡು ಬರುವುದಾಗಿದ್ದು ಆಕಸ್ಮಿಕರವಾಗಿ ಇಲ್ಲಿಕಂಡು ಬಂದಿದೆ ಎಂದರು ವನ್ಯಜೀವಿ ತಜ್ಞರು ತಿಳಿಸಿದ್ದಾರೆ.